ಅನಾಥ ಮಕ್ಕಳ ಆಶ್ರಮಗಳಲ್ಲಿ ಅದ್ಧೂರಿ ಹುಟ್ಟುಹಬ್ಬಕ್ಕೆ ಬ್ರೇಕ್!
ತಮ್ಮ ತಮ್ಮ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಸೇರಿ ಆಚರಿಸುತ್ತಿದ್ದರು. ಆದರೆ ಈ ಪದ್ಧತಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ.
ಬೆಂಗಳೂರು: ಅನಾಥ ಮಕ್ಕಳ ಆಶ್ರಮಗಳಲ್ಲಿ ಅದ್ಧೂರಿ ಹುಟ್ಟುಹಬ್ಬ (Birthday) ಆಚರಣೆಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ (Child Protection Society) ಬ್ರೇಕ್ ಹಾಕಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳಿಂದ ಹೊಸ ಟ್ರೆಂಡ್ ಶುರುವಾಗಿತ್ತು. ತಮ್ಮ ತಮ್ಮ ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಸೇರಿ ಆಚರಿಸುತ್ತಿದ್ದರು. ಆದರೆ ಈ ಪದ್ಧತಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬ್ರೇಕ್ ಹಾಕಿದೆ. ಇನ್ನು ಮುಂದೆ ಈ ರೀತಿಯ ಆಚರಣೆ ಕಂಡು ಬಂದರೆ ಶಿಕ್ಷಾರ್ಹ ಅಪರಾಧವಾಗಿ ಘೋಷಣೆ ಮಾಡಲಾಗುತ್ತದೆ ಅಂತ ಮಕ್ಕಳ ರಕ್ಷಣಾ ನಿರ್ದೇಶನಾಲಯ ತಿಳಿಸಿದಿದೆ.
ಸೆಲೆಬ್ರಿಟಿಗಳು, ರಾಜಕಾರಣಿಗಳಿಂದ ಅದ್ಧೂರಿ ಬರ್ತ್‌ಡೇಯಿಂದ ಅನಾಥ ಮಕ್ಕಳ ಮನಸಿನಲ್ಲಿ ಅಸಮಾನತೆ ಮೂಡುತ್ತದೆ. ಮಕ್ಕಳ ಮನಸಿನಲ್ಲಿ ತಾವು ಕೀಳೆಂಬ ಭಾವನೆ ಬರಬಹುದು. ತಾರತಮ್ಯ ಭಾವನೆ ಹೆಚ್ಚಾಗಿ ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಆಶ್ರಮಗಳಲ್ಲಿ ಅದ್ಧೂರಿ ಬರ್ತ್‌ಡೇ ಆಚರಣೆಗೆ ನಿರ್ಬಂಧ ಹೇರಲಾಗಿದೆ. ಇನ್ನು ಮುಂದೆ ಹೊರಗಿನಿಂದ ಬಂದು ಹುಟ್ಟುಹಬ್ಬವನ್ನು ಆಚರಿಸುವಂತಿಲ್ಲ. ಅದ್ಧೂರಿ ಹುಟ್ಟುಹಬ್ಬ ಆಚರಿಸಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ.
ಸೆಲೆಬ್ರೆಟಿಗಳು ಮತ್ತು ರಾಜಕಾರಣಿಗಳು ಅನಾಥ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ದಿನೇ ದಿನೇ ಟ್ರೆಂಡ್ ಆಗುತ್ತಿರುವ ಈ ಪದ್ಧತಿಗೆ ಬ್ರೇಕ್ ಬಿದ್ದಿದೆ. ಅನಾಥ ಮಕ್ಕಳು, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ ಮಕ್ಕಳು, ಭಿಕ್ಷಾಟನೆಯಿಂದ ಹೊರಬಂದ ಮಕ್ಕಳು, ಬಾಲ್ಯವಿವಾಹಕ್ಕೆ ಒಳಗಾಗಿ ರಕ್ಷಿಸಲ್ಪಟ್ಟ ಮಕ್ಕಳು, ಮಾನಸಿಕ ಅಸ್ವಸ್ಥ ಮಕ್ಕಳು ಸೇರಿ ಅಬಲ ಮಕ್ಕಳ ಜೊತೆಗೆ ಇನ್ನು ಮುಂದೆ ಹುಟ್ಟುಹಬ್ಬ ಆಚರಿಸುವಂತಿಲ್ಲ.
ಅದ್ಧೂರಿ ಬರ್ತ್‌ಡೇ ಬಗ್ಗೆ ಮಕ್ಕಳ ರಕ್ಷಣಾ ನಿರ್ದೇಶನಾಯ ಸೂಕ್ಷ್ಮವಾಗಿ ಗಮನಿಸಿ ಈ ನಿರ್ಧಾರ ಕೈಗೊಂಡಿದೆ. ಹುಟ್ಟುಹಬ್ಬವನ್ನು ಅನಾಥ ಮಕ್ಕಳ ಜೊತೆ ಆಚರಿಸಿಕೊಳ್ಳುವುದರಿಂದ ಮಕ್ಕಳ ಮನಸಲ್ಲಿ ಅಸಮಾನತೆ ಮೂಡುತ್ತದೆ. ಮಕ್ಕಳ ಮನಸ್ಸಿನಲ್ಲಿ ನಾವು ಕೀಳು ಎಂಬ ಭಾವನೆಯೂ ಬರಬಹುದು. ಹೀಗಾಗಿ ಮಕ್ಕಳ ರಕ್ಷಣಾ ನಿರ್ದೇಶನಾಯ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ
ಲೈಂಗಿಕ ದೌರ್ಜನ್ಯದ ಆರೋಪ; ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ವಿರುದ್ಧ ಎಫ್ಐಆರ್ ದಾಖಲು, ಆರೋಪಿ ನಾಪತ್ತೆ
ಎಎಸ್ಐ ಮತ್ತು ಪುತ್ರನಿಂದ ಹಲ್ಲೆ ಆರೋಪ; ಮಗಳನ್ನು ಕಿಡ್ನಾಪ್ ಮಾಡಲು ಬಂದಿದ್ದಾರೆಂದು ಹಿಗ್ಗಾಮುಗ್ಗಾ ಥಳಿತ
Published On - 8:59 am, Tue, 19 October 21