ದಾವಣಗೆರೆ: ನೀರಿನ ತೊಟ್ಟಿಯಲ್ಲಿ ಮುಳುಗಿ 6 ವರ್ಷದ ಬಾಲಕ ಸಾವು; ಕಟ್ಟಡ ಮಾಲೀಕರ ವಿರುದ್ಧ ಸಂಬಂಧಿಕರ ಆಕ್ರೋಶ
ನಿನ್ನೆ ಬೆಳಿಗ್ಗೆಯಿಂದ ನಾಪತ್ತೆ ಆಗಿದ್ದ ಮೋಹಿತ್ನನ್ನು ಕುಟುಂಬಸ್ಥರು ಹುಡುಕಾಡಿದ್ದಾರೆ. ಕೊನೆಗೆ ಮನೆಯ ಪಕ್ಕದಲ್ಲಿಯೇ ನಿರ್ಮಾಣ ಹಂತದ ಕಟ್ಟಡದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ನೀರಿನ ತೊಟ್ಟಿಯಲ್ಲಿ ಮುಳುಗಿ 6 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಸರಸ್ವತಿ ನಗರದಲ್ಲಿ ನಡೆದಿದೆ. ದಾವಣಗೆರೆಯ ಸರಸ್ವತಿಪುರದಲ್ಲಿನ ಬಾಲಕ ಮೋಹಿತ್(6) ಮೃತಪಟ್ಟಿದ್ದಾನೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಎಲ್ಐಸಿ ಅಧಿಕಾರಿ ಪ್ರಕಾಶ ಎಂಬುವವರ ಪುತ್ರ ಮೋಹಿತ್, ಆಟವಾಡಲು ಹೋಗಿ ನೀರಿನ ತೊಟ್ಟಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ (ಅಕ್ಟೋಬರ್ 18) ರಾತ್ರಿ ಈ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆಯಿಂದ ನಾಪತ್ತೆ ಆಗಿದ್ದ ಮೋಹಿತ್ನನ್ನು ಕುಟುಂಬಸ್ಥರು ಹುಡುಕಾಡಿದ್ದಾರೆ. ಕೊನೆಗೆ ಮನೆಯ ಪಕ್ಕದಲ್ಲಿಯೇ ನಿರ್ಮಾಣ ಹಂತದ ಕಟ್ಟಡದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನೀರಿನ ತೊಟ್ಟಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ತೊಟ್ಟಿ ಮುಚ್ಚದೇ ಹಾಗೆ ಬಿಟ್ಟ ಹಿನ್ನಲೆ ದುರಂತ ಸಂಭವಿಸಿದ್ದು, ಕಟ್ಟಡ ಮಾಲೀಕರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವಿನ ಶವ ಜಿಲ್ಲಾ ಆಸ್ಪತ್ರೆಗೆ ಸಾಗಾಣೆ ಮಾಡಿದ್ದು, ಸಂಬಂಧಿಕರ ಆಕ್ರಂದನ ಮಗಿಲು ಮುಟ್ಟಿದೆ.
ಹುಬ್ಬಳ್ಳಿ: ಮೀನು ಹಿಡಿಯಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು ಮೀನು ಹಿಡಿಯಲು ಹೋಗಿ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಬೊಮ್ಮಸಮುದ್ರದಲ್ಲಿ ನಡೆದಿದೆ. ಗ್ರಾಮದ ಕೆರೆಯಲ್ಲಿ ಆಟೋದೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ನಿನ್ನೆ ಸಂಜೆ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದು, ಗ್ರಾಮಸ್ಥರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮೃತ ವ್ಯಕ್ತಿಯ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಬೆಳಗಾವಿ: ಕಡಸಗಟ್ಟಿ ಗ್ರಾಮದ ಕೆರೆಯಲ್ಲಿ ಮೀನುಗಳ ಮಾರಣಹೋಮ ಕೆರೆಯಲ್ಲಿ ಮೀನುಗಳ ಮಾರಣಹೋಮವಾದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಕಡಸಗಟ್ಟಿ ಗ್ರಾಮದಲ್ಲಿ ನಡೆದಿದೆ. ದುಷ್ಕರ್ಮಿಗಳು ಕೆರೆ ನೀರಿಗೆ ವಿಷ ಬೆರೆಸಿರುವ ಆರೋಪ ಕೇಳಿಬಂದಿದೆ. ಕೆರೆಯಲ್ಲಿ ಮೀನುಗಾರಿಕೆಗೆ ಟೆಂಡರ್ ಕರೆಯಲಾಗುತ್ತಿತ್ತು. ಮೀನುಗಾರಿಕೆಗೆ ಟೆಂಡರ್ ಸಿಗದವರು ಈ ಕೃತ್ಯ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಪಕ್ಕದ ಉಜ್ಜನಿಪುರ ತಾಂಡಾ ಕೆರೆಯಲ್ಲಿ ಉಪನ್ಯಾಸಕರೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಪ್ರೊ. ಗಂಗಾಪ್ರಸಾದ (56) ಎಂದು ಪತ್ತೆ ಹಚ್ಚಲಾಗಿದೆ. ಇವರು ಶಿವಮೊಗ್ಗದ ಕೃಷಿ ಕಾಲೇಜಿನ ಉಪನ್ಯಾಸಕರಾಗಿದ್ದರು. ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಶಿವಮೊಗ್ಗ ನಗರ ಪೊಲೀಸ್ ಠಾಣೆಯಲ್ಲಿ ಗಂಗಾಪ್ರಸಾದ ನಾಪತ್ತೆಯಾದ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ಇಂದು ಕೆರೆಯಲ್ಲಿ ಶವ ಪತ್ತೆಯಾಗಿದೆ.
ನೀರು ಕುಡಿಯಲು ಹೋಗಿ ತೊಟ್ಟಿಗೆ ಬಿದ್ದ ಆನೆ ಮರಿ.. ಕಂದನನ್ನು ರಕ್ಷಿಸಲು ತಾಯಿ ಆನೆ ಪರದಾಟ
Published On - 9:24 am, Tue, 19 October 21