ನೀರು ಕುಡಿಯಲು ಹೋಗಿ ತೊಟ್ಟಿಗೆ ಬಿದ್ದ ಆನೆ ಮರಿ.. ಕಂದನನ್ನು ರಕ್ಷಿಸಲು ತಾಯಿ ಆನೆ ಪರದಾಟ
ಮಂಡ್ಯ: ನೀರಿನ ತೊಟ್ಟಿಗೆ ಬಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ರಾತ್ರಿ ಕಾಡಾನೆಗಳ ಹಿಂಡಿನೊಂದಿಗೆ ಬಂದಿದ್ದ ಮರಿ ಆನೆ, ಪ್ರಾಣಿಗಳು ನೀರು ಕುಡಿಯಲು ನಿರ್ಮಿಸಿದ್ದ ಸಿಮೆಂಟ್ ತೊಟ್ಟಿಯಲ್ಲಿ ಬಿದ್ದಿತ್ತು. ಹೀಗಾಗಿ, ತೊಟ್ಟಿಯಿಂದ ಮೇಲೆ ಬರಲಾರದೆ ಮರಿ ಆನೆ ರೋದಿಸುತ್ತಿತ್ತು. ತೊಟ್ಟಿಯಲ್ಲಿ ಮರಿ ಸಿಲುಕಿದ್ರಿಂದ ಉಳಿದ ಆನೆಗಳೂ ಘೀಳಿಡಲು ಪ್ರಾರಂಭಿಸಿದವು. ಇದನ್ನು ಕೇಳಿ ಬೆಳಿಗ್ಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ […]
ಮಂಡ್ಯ: ನೀರಿನ ತೊಟ್ಟಿಗೆ ಬಿದ್ದ ಆನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ ರಾತ್ರಿ ಕಾಡಾನೆಗಳ ಹಿಂಡಿನೊಂದಿಗೆ ಬಂದಿದ್ದ ಮರಿ ಆನೆ, ಪ್ರಾಣಿಗಳು ನೀರು ಕುಡಿಯಲು ನಿರ್ಮಿಸಿದ್ದ ಸಿಮೆಂಟ್ ತೊಟ್ಟಿಯಲ್ಲಿ ಬಿದ್ದಿತ್ತು. ಹೀಗಾಗಿ, ತೊಟ್ಟಿಯಿಂದ ಮೇಲೆ ಬರಲಾರದೆ ಮರಿ ಆನೆ ರೋದಿಸುತ್ತಿತ್ತು. ತೊಟ್ಟಿಯಲ್ಲಿ ಮರಿ ಸಿಲುಕಿದ್ರಿಂದ ಉಳಿದ ಆನೆಗಳೂ ಘೀಳಿಡಲು ಪ್ರಾರಂಭಿಸಿದವು.
ಇದನ್ನು ಕೇಳಿ ಬೆಳಿಗ್ಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ವೇಳೆ, ಮರಿಯನ್ನು ತೊಟ್ಟಿಯಿಂದ ಮೇಲೆತ್ತಲು ಆನೆಗಳ ಹಿಂಡು ಪ್ರಯತ್ನಿಸುತ್ತಿತ್ತು. ಬಳಿಕ ಸ್ಥಳದಲ್ಲಿದ್ದ ಆನೆಗಳನ್ನು ಓಡಿಸಿದ ವಲಯ ಅರಣ್ಯಾಧಿಕಾರಿ ಮಹದೇವಸ್ವಾಮಿ ನೇತೃತ್ವದ ತಂಡ ಜೆಸಿಬಿ ಸಹಾಯದಿಂದ ತೊಟ್ಟಿಯ ಒಂದು ಭಾಗ ಹೊಡೆಸಿದರು. ಬಳಿಕ ಆನೆ ಮರಿ ಮೇಲೆ ಬಂದು ತನ್ನ ಹಿಂಡೊಂದಿಗೆ ಸುರಕ್ಷಿತವಾಗಿ ಕಾಡು ಸೇರಿತು.
Published On - 2:06 pm, Sun, 22 November 20