ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು

ಶಿವಮೊಗ್ಗ ನಗರ ಪೊಲೀಸ್ ಠಾಣೆಯಲ್ಲಿ ಗಂಗಾಪ್ರಸಾದ ನಾಪತ್ತೆಯಾದ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ಇಂದು ಕೆರೆಯಲ್ಲಿ ಶವ ಪತ್ತೆಯಾಗಿದೆ.

ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ; ಚಿಂತಾಮಣಿಯಲ್ಲಿ ಮೂವರು ಬಾಲಕರು ಕೆರೆಪಾಲು
ಶಿವಮೊಗ್ಗ ಕೃಷಿ ಕಾಲೇಜು ಉಪನ್ಯಾಸಕ ಶವ ಹೊನ್ನಾಳಿ ತಾಂಡಾ ಕೆರೆಯಲ್ಲಿ ಪತ್ತೆ
TV9kannada Web Team

| Edited By: sadhu srinath

Oct 19, 2021 | 2:10 PM


ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವಿಹಳ್ಳಿ ಪಕ್ಕದ ಉಜ್ಜನಿಪುರ ತಾಂಡಾ ಕೆರೆಯಲ್ಲಿ ಉಪನ್ಯಾಸಕರೊಬ್ಬರ ಶವ ಪತ್ತೆಯಾಗಿದೆ. ಮೃತರನ್ನು ಪ್ರೊ. ಗಂಗಾಪ್ರಸಾದ (56) ಎಂದು ಪತ್ತೆ ಹಚ್ಚಲಾಗಿದೆ. ಇವರು ಶಿವಮೊಗ್ಗದ ಕೃಷಿ ಕಾಲೇಜಿನ ಉಪನ್ಯಾಸಕರಾಗಿದ್ದರು. ಸ್ಥಳಕ್ಕೆ ಹೊನ್ನಾಳಿ ಪೊಲೀಸರ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಿನ್ನೆ ಶಿವಮೊಗ್ಗ ನಗರ ಪೊಲೀಸ್ ಠಾಣೆಯಲ್ಲಿ ಗಂಗಾಪ್ರಸಾದ ನಾಪತ್ತೆಯಾದ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ಇಂದು ಕೆರೆಯಲ್ಲಿ ಶವ ಪತ್ತೆಯಾಗಿದೆ.

ಕೆರೆಯಲ್ಲಿ ಕುರಿ ತೊಳೆಯಲು ಹೋಗಿ ಮೂವರು ಬಾಲಕರು ಕೆರೆಪಾಲು
ಚಿಕ್ಕಬಳ್ಳಾಪುರ: ಕೆರೆಯಲ್ಲಿ ಕುರಿ ತೊಳೆಯಲು ಹೋಗಿ ಮೂವರು ಬಾಲಕರು ಜಲಸಮಾಧಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋಡದವಾಡಿ ಕೆರೆಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಕೋಡದವಾಡಿ ಗ್ರಾಮದ ಸೋದನ್ (15) ಸುದರ್ಶನ್(15) ಮತ್ತು ಸತೀಶ(15) ಮೃತ ದುರ್ದೈವಿಗಳು. ಸೋದನ್ ಹಾಗೂ ಸತೀಶನ ಶವ ಪತ್ತೆಯಾಗಿದ್ದು, ಸುದರ್ಶನ್ ಶವಕ್ಕಾಗಿ ಶೋಧ ನಡೆದಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆದಿದೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 three boys washing goats washed away in lake water near chintamani

ಕೆರೆಯಲ್ಲಿ ಕುರಿ ತೊಳೆಯಲು ಹೋಗಿ ಮೂವರು ಬಾಲಕರು ಕೆರೆಪಾಲು

ಇದನ್ನೂ ಓದಿ:
ಗಂಗಾವತಿ: ಕಲ್ಲಿನ ಮೇಲಿಂದ ಕೆರೆಗೆ ಜಂಪ್​ ಮಾಡಿದ್ದ ಇಬ್ಬರು ಪ್ರವಾಸಿ ಟೆಕ್ಕಿಗಳು ನೀರುಪಾಲು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿವಾದಾತ್ಮಕ ಹೇಳಿಕೆ, ರಾಹುಲ್ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ | Tv9kannada

(shivamogga agriculture college professor body found in honnali lake – three boys washing goats washed away in lake water near chintamani )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada