ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ
ಬಿಎಸ್ ಯಡಿಯೂರಪ್ಪ (ಸಂಗ್ರಹ ಚಿತ್ರ)

BS Yediyurappa: ಕೊವಿಡ್​ ವೇಳೆ ಬಿ.ಎಸ್. ಯಡಿಯೂರಪ್ಪ ಎಲ್ಲರಿಗೆ ಮನೋಸ್ಥೈರ್ಯ ತುಂಬಿದ್ದಾರೆ. ನನಗೆ ಆರೋಗ್ಯ ಖಾತೆ ನೀಡಿ ಸೇವೆ ಮಾಡಲು ಅವಕಾಶ ನೀಡಿದ್ದಾರೆ, ನನಗೆ ಯಡಿಯೂರಪ್ಪ ಅವಕಾಶ ನೀಡಿದ್ದರು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

TV9kannada Web Team

| Edited By: ganapathi bhat

Oct 19, 2021 | 6:32 PM

ದಾವಣಗೆರೆ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಸಂಸದ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಪ್ರಮುಖರಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವಿವಿಧ ಸಂಘ ಸಂಸ್ಥೆಗಳಿಂದ ಬಿ.ಎಸ್. ಯಡಿಯೂರಪ್ಪಗೆ ಸನ್ಮಾನ ಮಾಡಲಾಗಿದೆ. ಇನ್ನೂ ಕೊರೊನಾ ಸಂಕಷ್ಟ ಮುಗಿದಿಲ್ಲ. ಆದಷ್ಟು ಜಾಗೃತರಾಗಬೇಕಾಗಿದೆ. ಕೊರೊನಾ ವಾರಿಯರ್ ಸೇವೆ ಎಷ್ಟು ಶ್ರಮಿಸಿದರೂ ಕಡಿಮೆ. ಜನರ ಜೀವ‌‌ ಉಳಿಸಿದ್ದು ಕೊರೊನಾ ವಾರಿಯರ್​ಗಳು. ಕೊರೊನಾ ಬಂದ ವೇಳೆ ಮನೆಯವರೇ ನೋಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ವಾರಿಯರ್​ಗಳು ಕೆಲಸ ಮಾಡಿದ್ದಾರೆ ಎಂದು ಈ ವೇಳೆ ಯಡಿಯೂರಪ್ಪ ಮಾತನಾಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಆಧುನಿಕ ಭಗೀರಥ. ಅವರು ಹೊನ್ನಾಳಿ ತಾಲೂಕಿನ ಕೆರೆಗಳನ್ನು ತುಂಬಿಸಲು 500 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಹೊನ್ನಾಳಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಇಂದು ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ‌ ನೀಡಲಾಗುತ್ತಿದೆ ಎಂದು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

100 ಕೋಟಿ ಡೋಸ್ ಲಸಿಕೆ ನೀಡಲು ಕೇಂದ್ರ ನಿರ್ಧರಿಸಿದೆ. ಕೊವಿಡ್​ ವೇಳೆ ಬಿ.ಎಸ್. ಯಡಿಯೂರಪ್ಪ ಎಲ್ಲರಿಗೆ ಮನೋಸ್ಥೈರ್ಯ ತುಂಬಿದ್ದಾರೆ. ನನಗೆ ಆರೋಗ್ಯ ಖಾತೆ ನೀಡಿ ಸೇವೆ ಮಾಡಲು ಅವಕಾಶ ನೀಡಿದ್ದಾರೆ, ನನಗೆ ಯಡಿಯೂರಪ್ಪ ಅವಕಾಶ ನೀಡಿದ್ದರು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ಸನ್ಮಾನ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ್ ಮಾತನಾಡಿದ್ದಾರೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಆಸ್ಪತ್ರೆಯಿಂದ ಅಧಿಕಾರ ನಡೆಸಿದ ದೇಶದ ಏಕೈಕ ನಾಯಕ ಯಡಿಯೂರಪ್ಪ. ಕೊರೊನಾ ಬಂದಿದೆ ಅಂದ್ರೆ ಜನ ಆತನನ್ನು ಅಸ್ಪೃಶ್ಯ ಎಂಬಂತೆ ನೋಡುತ್ತಿದ್ದರು. ಇಂತಹ‌ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ದಿಟ್ಟತನದಿಂದ ಹೋರಾಟ ಮಾಡಿ ಬಡವರ ಜೀವನ ಉಳಿಸಿದ್ದಾರೆ. ಕೊರೊನಾ ವೇಳೆ ಎಂ.ಪಿ. ರೇಣುಕಾಚಾರ್ಯ ಸೋಂಕಿತರ ಕೊವಿಡ್ ಕೇರ್ ಸೆಂಟರ್​ನಲ್ಲಿಯೇ ಪತ್ನಿ ಸಹಿತರಾಗಿ ವಾಸವಿದ್ದರು. ಕೊರೊನಾ ಬಂದ್ರೆ ಹೊನ್ನಾಳಿಯಲ್ಲಿ ಬರಲಿ ಎಂದು ಜನ ಮಾತಾಡುತ್ತಿದ್ದರು. ಕಾರಣ ಸೋಂಕಿತರಿಗೆ ಊಟ ಉಪಚಾರ ಚೆನ್ನಾಗಿ ಶಾಸಕ ರೇಣುಕಾಚಾರ್ಯ ಮಾಡಿದ್ದರು. ಅವರ ಸೇವೆ ಮಾತ್ರ ಮೆಚ್ಚಲೇ ಬೇಕು ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

ರೇಣುಕಾಚಾರ್ಯ ವಿರುದ್ಧ ಕೊರೊನಾ ವಾರಿಯರ್ಸ್​ ಬೇಸರ ಸುರಹೊನ್ನೆ ಗ್ರಾಮದಲ್ಲಿ ಕೊರೊನಾ ವಾರಿಯರ್ಸ್​ಗೆ ಸನ್ಮಾನ ಕಾರ್ಯಕ್ರಮದ ಬಗ್ಗೆ ರೇಣುಕಾಚಾರ್ಯ ವಿರುದ್ಧ ಕೊರೊನಾ ವಾರಿಯರ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ. ಸನ್ಮಾನ ಮಾಡುವುದಾಗಿ ಬೆಳಗ್ಗೆಯಿಂದ ಎಂಪಿ ರೇಣುಕಾಚಾರ್ಯ ಕಾಯಿಸಿದ್ದರು. ಬಳಿಕ, 100 ರೂ. ಸೀರೆ, ಬಿಜೆಪಿ ನಾಯಕರ ಚಿತ್ರವಿರುವ ಖಾಲಿ ಚೀಲ ಕೊಟ್ಟಿದ್ದಾರೆ. ಕೊರೊನಾ ವಾರಿಯರ್ಸ್​ ಕುಳಿತಲ್ಲಿಗೆ ಸೀರೆ ನೀಡಿದ್ದಾರೆ. ವೇದಿಕೆಗೂ ಕರೆಸದೆ ಕುಳಿತಲ್ಲಿಗೆ ₹100 ಮೌಲ್ಯದ ಸೀರೆ ಹಂಚಿಕೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ವಿರುದ್ಧ ಕೊರೊನಾ ವಾರಿಯರ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ: ಬಿಎಸ್‌ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ 13 ಜನರ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆ

ಇದನ್ನೂ ಓದಿ: ಭದ್ರಾ ಯೋಜನೆ ತಂದ ಭಗೀರಥ ಬಿಎಸ್​ವೈ: ಶರಣ ಸಂಸ್ಕೃತಿ ಉತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

Follow us on

Related Stories

Most Read Stories

Click on your DTH Provider to Add TV9 Kannada