ಭ್ರಷ್ಟಾಚಾರ: ಬಿಎಸ್‌ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ 13 ಜನರ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆ

ಭ್ರಷ್ಟಾಚಾರ: ಬಿಎಸ್‌ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ 13 ಜನರ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆ
ಪ್ರಾತಿನಿಧಿಕ ಚಿತ್ರ

ಡಿಕೆ ಶಿವಕುಮಾರ್ ಅಕ್ರಮ‌ ಹಣ ಸಂಪಾದನೆ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದೂ ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟ ರಾಹುಲ್ ಗಾಂಧಿಯ ವಿರುದ್ಧವೂ ಅರೋಪ ಮಾಡಲಾಗಿದೆ. ಭ್ರಷ್ಟಾಚಾರ ಪ್ರೋತ್ಸಾಹಿಸಿದ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧವೂ ದೂರು ಇದೆ.

TV9kannada Web Team

| Edited By: sadhu srinath

Oct 18, 2021 | 1:10 PM

ಬೆಂಗಳೂರು: ಭ್ರಷ್ಟಾಚಾರದ ಆರೋಪ ಹಿನ್ನೆಲೆ ತನಿಖೆ ಕೋರಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಅವರು ಹಿರಿಯ ನಾಯಕರು ಸೇರಿದಂತೆ 13 ಮಂದಿ ರಾಜಕಾರಣಿಗಳ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಉಗ್ರಪ್ಪ ಮತ್ತು ಸಲೀಂ ಮಧ್ಯೆ ಕಳೆದ ವಾರ ನಡೆದ ಕಲೆಕ್ಷನ್​ ಗಿರಾಕಿ ವಿಷಯದ ಚರ್ಚೆಯನ್ನು ಆಧಾರವಾಗಿಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ 13 ಜನರ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧದ ಆಡಿಯೋ ವಿಚಾರ ಮುಂದಿಟ್ಟುಕೊಂಡು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ತನಿಖೆ ನಡೆಸುವಂತೆ ಹೆಲ್ಪಿಂಗ್ ಸಿಟಿಜನ್ ಅಂಡ್ ಪೀಪಲ್ಸ್ ಕೋರ್ಟ್ ಎಜಿಓ ಸಂಸ್ಥಾಪಕ ಆಲಂ ಪಾಷಾ ದೂರು ನೀಡಿದ್ದಾರೆ.

ಸಲೀಂ ಹಾಗೂ ಉಗ್ರಪ್ಪ ಸಂಭಾಷಣೆ ಅಕ್ಷರಶಃ ಸತ್ಯವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಸಂಪೂರ್ಣ ಗೊತ್ತಿದೆ. ಡಿಕೆ ಶಿವಕುಮಾರ್ ನೀರಾವರಿ ಹಾಗೂ ಜಲ ಸಂಪನ್ಮೂಲ ಇಲಾಖೆ ಸಚಿವಾರಾಗಿದ್ದಾಗ ಭ್ರಷ್ಟಾಚಾರದ ಆರೋಪ‌ ಕೇಳಿಬಂದಿತ್ತು. ಡಿಕೆ ಶಿವಕುಮಾರ್ 8 ರಿಂದ 12 ಪರ್ಸೆಂಟೇಜ್ ಕಮಿಷನ್ ಪಡೆದಿದ್ದಾರೆಂದು ಆರೋಪಿಸಲಾಗತ್ತು.

2023ರ ಚುನಾವಣೆಗಾಗಿ ಕೋಟಿ ಕೋಟಿ ಭ್ರಷ್ಟಾಚಾರದ ಹಣ ಸಂಪಾದನೆಯ ಆರೋಪ ಇದಾಗಿದೆ. ಡಿಕೆ ಶಿವಕುಮಾರ್ ಅಕ್ರಮ‌ ಹಣ ಸಂಪಾದನೆ ಬಗ್ಗೆ ಗೊತ್ತಿದ್ದರೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಗೊತ್ತಿದ್ದೂ ಕೆಪಿಸಿಸಿ ಅಧ್ಯಕ್ಷಗಿರಿ ಕೊಟ್ಟ ರಾಹುಲ್ ಗಾಂಧಿಯ ವಿರುದ್ಧವೂ ಅರೋಪ ಮಾಡಲಾಗಿದೆ. ಭ್ರಷ್ಟಾಚಾರ ಪ್ರೋತ್ಸಾಹಿಸಿದ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧವೂ ದೂರು ಇದೆ.

ಇತ್ತೀಚಿಗೆ ನಡೆದ ಆದಾಯ ತೆರಿಗೆ ಇಲಾಖೆಯ ಐಟಿ ದಾಳಿಯಲ್ಲಿ ನೀರಾವರಿ ಇಲಾಖೆಯ ಅಕ್ರಮದ ದಾಖಲೆಗಳು ಸಿಕ್ಕಿವೆ. ಲಂಚ ಪಡೆದು ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಡಿಕೆ ಶಿವಕುಮಾರ್ ಮಾತ್ರವಲ್ಲ; ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧವೂ ಈ ಅರೋಪ ಕೇಳಿಬಂದಿದೆ. ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಎಸಿಬಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಆಲಂ ಪಾಷಾ ದೂರು ನೀಡಿದರು.

ಡಿ.ಕೆ. ಶಿವಕುಮಾರ್ ವಿರುದ್ಧ ಎಸಿಬಿಗೆ ಮತ್ತೊಂದು ದೂರು

ಡಿಕೆ ಶಿವಕುಮಾರ್ ವಿರುದ್ಧ 12 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಕ್ರಮ‌ ಕೋರಿ ಎಸಿಬಿಗೆ ಮತ್ತೊಬ್ಬರು ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚಗಾನಹಳ್ಳಿ ದೂರು ನೀಡಿದ್ದಾರೆ.

ಕೆಪಿಸಿಸಿ ಸುದ್ದಿಗೋಷ್ಟಿಯಲ್ಲಿ ಸಲೀಂ, ವಿ.ಎಸ್. ಉಗ್ರಪ್ಪ ಚರ್ಚೆ ಮತ್ತು ಡಿಕೆಶಿ ವಿರುದ್ಧ ಸೊಗಡು ಶಿವಣ್ಣ ಕೂಡಾ ಆರೋಪ ಮಾಡಿದ್ದಾರೆ. ಬೇನಾಮಿ ಆಸ್ತಿ ಸಂಗ್ರಹ ಮಾಡಿದ್ದಾಗಿ ಆರೋಪಿಸಿದ್ದಾರೆ. ಸರ್ಕಾರದ ಹಣ ದುರುಪಯೋಗ ಹಿನ್ನೆಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕೇಸ್ ದಾಖಲಿಸಲು ರವಿಕುಮಾರ್ ಮನವಿ ಮಾಡಿದ್ದಾರೆ.

Also Read: ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!

(social activist alam pasha file complaint in acb against dk shivakumar and bs yediyurappa)

Follow us on

Related Stories

Most Read Stories

Click on your DTH Provider to Add TV9 Kannada