ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!

ನಿಮ್ಮಿಂದ ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಅನಗತ್ಯ ಮಾತುಗಳ ಬಗ್ಗೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ 15 ನಿಮಿಷಗಳ‌ ಕಾಲ ಉಗ್ರಪ್ಪ ಜೊತೆಗೆ ಡಿಕೆಶಿ ಮಾತುಕತೆ ನಡೆಸಿದ್ದಾರೆ.

ಏನೂ ಹೇಳಬೇಡ ಸುಮ್ನಿರಪ್ಪ, ಸ್ಪಷ್ಟನೆ ನೀಡುವುದಕ್ಕೆ ಮುಂದಾದ ಉಗ್ರಪ್ಪ ವಿರುದ್ಧ ಡಿಕೆ ಶಿವಕುಮಾರ್ ಉಗ್ರ ರೂಪ!
ಡಿಕೆ ಶಿವಕುಮಾರ್


ಬೆಂಗಳೂರು: ಡಿ.ಕೆ.ಶಿವಕುಮಾರ್ ಬಗ್ಗೆ ಉಗ್ರಪ್ಪ, ಸಲೀಂ ಮಾತುಕತೆ ವಿಚಾರಕ್ಕೆ ಸಂಬಂಧಿಸಿ ವಿ.ಎಸ್.ಉಗ್ರಪ್ಪ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಕೆಪಿಸಿಸಿ ಕಚೇರಿಯ ಅಧ್ಯಕ್ಷರ ಕೊಠಡಿಗೆ ಕರೆದು ಚರ್ಚೆ ಮಾಡುತ್ತಿದ್ದ ಡಿಕೆಶಿ ಉಗ್ರಪ್ಪ ವಿರುದ್ಧ ಗರಂ ಆಗಿದ್ದಾರೆ.

ನಿಮ್ಮಿಂದ ಇದನ್ನ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಅನಗತ್ಯ ಮಾತುಗಳ ಬಗ್ಗೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗೂ 15 ನಿಮಿಷಗಳ‌ ಕಾಲ ಉಗ್ರಪ್ಪ ಜೊತೆಗೆ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸ್ಪಷ್ಟನೆ ನೀಡುವುದಕ್ಕೆ V.S.ಉಗ್ರಪ್ಪ ಮುಂದಾಗಿದ್ದು ಏನೂ ಹೇಳಬೇಡ ಸುಮ್ನಿರಪ್ಪ ಎಂದ ಡಿ.ಕೆ.ಶಿವಕುಮಾರ್ ಗರಂ ಆದ್ರು. ಆಗ ಉಗ್ರಪ್ಪ ಕೊಠಡಿಯಿಂದ ಹೊರನಡೆದ್ರು.

V.S.ಉಗ್ರಪ್ಪ ಉಚ್ಚಾಟನೆಗೆ ಮುಂದಾಗಿದ್ದ ಎಐಸಿಸಿ
ಇನ್ನು ಎಐಸಿಸಿಯಿಂದ V.S.ಉಗ್ರಪ್ಪ ಉಚ್ಚಾಟನೆಗೆ ಮುಂದಾಗಿದ್ದರು. ಬಳಿಕ ಡಿಕೆಶಿ ಮಧ್ಯಪ್ರವೇಶದಿಂದ ಕೇವಲ ನೋಟಿಸ್ ಅಷ್ಟೇ ಜಾರಿ ಮಾಡಲಾಗಿದೆ. ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ದೆಹಲಿಯಿಂದಲೇ ಉಗ್ರಪ್ಪ ಉಚ್ಚಾಟನೆಗೆ ನೋಟಿಸ್ ಸಿದ್ಧಪಡಿಸಿದ್ದರು. ಸದ್ಯ ಡಿಕೆಶಿ ಮಧ್ಯಪ್ರವೇಶಿಸಿ ಅದನ್ನು ತಡೆದಿದ್ದಾರೆ. ನೋಟಿಸ್ ಏನೂ ಬೇಡ ಹೋಗ್ಲಿ ಬಿಡಿ ಎಂದಿದ್ದಾರೆ. ಆಮೇಲೆ ಮಾತಾಡೋಣ ಎಂದು ಸಿಟ್ಟಲ್ಲೇ ತಿಳಿಸಿದ್ದಾರೆ.

ಜವಾಬ್ದಾರಿ ಇರುವ ವ್ಯಕ್ತಿ ಈ ರೀತಿ ಮಾತನಾಡುವುದಿಲ್ಲ
ಈ ವಿಚಾರಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ರೆಹಮಾನ್ ಖಾನ್, ಸಲೀಂ ಲೂಸ್ ಟಾಕ್ ಮಾಡಿದ್ದಾರೆ, ಹಾಗಾಗಿ ಉಚ್ಚಾಟನೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ಜವಾಬ್ದಾರಿ ಇರುವ ವ್ಯಕ್ತಿ ಈ ರೀತಿ ಮಾತನಾಡುವುದಿಲ್ಲ. ಹೀಗಾಗಿ ಉಚ್ಚಾಟನೆ ಮಾಡಿದ್ದೇವೆ ಎಂದರು.

ಸಲೀಂ ಮಾತನ್ನು ವಿ.ಎಸ್.ಉಗ್ರಪ್ಪ ತಡೆಹಿಡಿಯಬೇಕಿತ್ತು. ಆದರೆ ನಗುತ್ತಾ ಉಗ್ರಪ್ಪ ಪ್ರತಿಕ್ರಿಯೆಯನ್ನ ನೀಡಿದ್ದಾರೆ. 7 ದಿನಗಳಲ್ಲಿ ಉತ್ತರ ನೀಡುವಂತೆ ಉಗ್ರಪ್ಪನವರಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ. ವಿ.ಎಸ್.ಉಗ್ರಪ್ಪನವರ ವರ್ತನೆ ಕೂಡ ಸರಿಯಿರಲಿಲ್ಲ. ಯಾವುದೇ ಪಕ್ಷದಲ್ಲಿ ಇಂತಹ ಹೇಳಿಕೆಗಳು ಸಹಜ. ಸಲೀಂ ಹೇಳಿದ ತಕ್ಷಣ ಪಕ್ಷಕ್ಕೆ ಪರಿಣಾಮ ಆಗುವುದಿಲ್ಲ ಎಂದು ದೆಹಲಿಯಲ್ಲಿ ಟಿವಿ9ಗೆ ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Congress: ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ: ಸಲೀಂ-ಉಗ್ರಪ್ಪ ಹೇಳಿಕೆಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

Read Full Article

Click on your DTH Provider to Add TV9 Kannada