ಮೈಸೂರು: ಸುಟ್ಟುಹೋದ ಲೈಬ್ರೆರಿಯನ್ನು ಆರು ತಿಂಗಳಾದರೂ ಕಟ್ಟಿಸದ ಸರ್ಕಾರ; ಮರದಡಿಯೇ ತಾತ್ಕಾಲಿಕ ಗ್ರಂಥಾಲಯ
ಕನ್ನಡ ಹಾಗೂ ಪುಸ್ತಕ ಪ್ರೇಮಿಯಾಗಿದ್ದ ಸೈಯದ್ ಇಸಾಕ್, ಮೈಸೂರಿನ ರಾಜೀವ್ ನಗರದಲ್ಲಿ ಕಳೆದ 11 ವರ್ಷದಿಂದ ಗ್ರಂಥಾಲಯ ನಡೆಸಿಕೊಂಡು ಬರುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಸಾಕ್ ಸಂಗ್ರಹಿಸಿದ್ದಾರೆ.
ಮೈಸೂರು: ಸುಟ್ಟುಹೋದ ಗ್ರಂಥಾಲಯವನ್ನು ಆರು ತಿಂಗಳಾದರೂ ಕಟ್ಟಿಸದ ಸರ್ಕಾರದ ವಿರುದ್ಧ ಗ್ರಂಥಾಲಯದ ಮಾಲೀಕರಾದ ಸೈಯದ್ ಇಸಾಕ್ ಬೇಸರ ವ್ಯಕ್ತಪಡಿಸಿದ್ದಾರೆ. ಆರು ತಿಂಗಳ ಹಿಂದೆ ಮೈಸೂರು ಜಿಲ್ಲೆ ರಾಜೀವ್ ನಗರದಲ್ಲಿ ಸೈಯದ್ ಇಸಾಕ್ ಅವರ ಗ್ರಂಥಾಲಯ ಸುಟ್ಟು ಹೋಗಿತ್ತು. ಈ ವೇಳೆ ಹಲವರು ಗ್ರಂಥಾಲಯ ಕಟ್ಟಿಕೊಡಲು ಮುಂದಾಗಿದ್ದರು. ಆದರೆ ಸರ್ಕಾರ ತಾವೇ ಗ್ರಂಥಾಲಯ ಕಟ್ಟಿಸಿಕೊಡುವುದಾಗಿ ಹೇಳಿತ್ತು. ಹೀಗೆ ಭರವಸೆಕೊಟ್ಟು 6 ತಿಂಗಳಾದರೂ ಈ ಬಗ್ಗೆ ಸರ್ಕಾರ ಗಮನಹರಿಸಿಲ್ಲ.
ಕನ್ನಡ ಹಾಗೂ ಪುಸ್ತಕ ಪ್ರೇಮಿಯಾಗಿದ್ದ ಸೈಯದ್ ಇಸಾಕ್, ಮೈಸೂರಿನ ರಾಜೀವ್ ನಗರದಲ್ಲಿ ಕಳೆದ 11 ವರ್ಷದಿಂದ ಗ್ರಂಥಾಲಯ ನಡೆಸಿಕೊಂಡು ಬರುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಇಸಾಕ್ ಸಂಗ್ರಹಿಸಿದ್ದಾರೆ.
ಸ್ವಂತ ಹಣದಿಂದ ಗ್ರಂಥಾಲಯ ನಡೆಸುತ್ತಿದ್ದ ಇಸಾಕ್ ಅವರ ಗ್ರಂಥಾಲಯ 6 ತಿಂಗಳ ಹಿಂದೆ ಸುಟ್ಟುಹೋಗಿತ್ತು. ಆದರೆ ಇದೀಗಾ ಘಟನೆ ನಡೆದು ಆರು ತಿಂಗಳು ಕಳೆದರೂ ಇನ್ನು ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ. ಈಗಾಗಲು ಪ್ರತಿದಿನ ಮರದಡಿ ಪುಸ್ತಕ ಹಾಗೂ ದಿನಪತ್ರಿಕೆಯನ್ನು ಇಟ್ಟುಕೊಂಡು ಸೈಯದ್ ಇಸಾಕ್ ಗ್ರಂಥಾಲಯ ನಡೆಸುತ್ತಿದ್ದಾರೆ.
ಮಳೆ ಬಂದರೆ ಇಡೀ ಪುಸ್ತಕಗಳನ್ನು ಚೀಲಕ್ಕೆ ತುಂಬಿಕೊಂಡು ಓಡುವ ಪರಿಸ್ಥಿತಿ ಇದೆ. ಸದ್ಯ ಸೂರಿಲ್ಲದೆ ಸೈಯದ್ ಇಸಾಕ್ ಪರದಾಡುತ್ತಿದ್ದಾರೆ. ಗ್ರಂಥಾಲಯ ಕಟ್ಟಿಸಿಕೊಡದಿದ್ದರೆ ತಾವೇ ಮತ್ತೆ ಹಳೆ ಮಾದರಿಯಲ್ಲಿ ಶೆಡ್ ಹಾಕಿಕೊಳ್ಳುತ್ತೇನೆ ಎಂದು ಸೈಯದ್ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಹಾವೇರಿ: ಆಕಸ್ಮಿಕ ಬೆಂಕಿ ಅವಘಡ; ಸುಟ್ಟು ಕರಕಲಾದ ಮನೆ
Published On - 1:10 pm, Tue, 19 October 21