ಹಾವೇರಿ: ಆಕಸ್ಮಿಕ ಬೆಂಕಿ ಅವಘಡ; ಸುಟ್ಟು ಕರಕಲಾದ ಮನೆ
ಹಾವೇರಿ ಜಿಲ್ಲೆಯಲ್ಲಿ ಆಕಸ್ಮಿಕ ಬೆಂಕಿಯ ಪರಿಣಾಮ ಮನೆಯೊಂದು ಸುಟ್ಟು ಕರಕಲಾಗಿದೆ. ಮನೆಯವರು ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ತೆರಳಿದಾಗ ದುರ್ಘಟನೆ ಸಂಭವಿಸಿದೆ.
ಹಾವೇರಿ: ಆಕಸ್ಮಿಕ ಬೆಂಕಿ ಅವಘಡಕ್ಕೆ ಮನೆಯೊಂದು ಸುಟ್ಟು ಕರಕಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಚಂದಾಪುರದಲ್ಲಿ ಘಟನೆ ನಡೆದಿದೆ. ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟುಭಸ್ಮವಾಗಿವೆ. ಮನೆಯು ಪರಮೇಶ ಲಮಾಣಿ ಎಂಬುವರಿಗೆ ಸೇರಿದ್ದು, ತಡರಾತ್ರಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಮನೆಯವರು ಕಂಗಾಲಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ನಡೆಯುವಾಗ ಮನೆಯವರು ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ತೆರಳಿದ್ದರು. ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತುಮಕೂರು: ಬೈಕ್‌ಗಳ ಮಧ್ಯೆ ಡಿಕ್ಕಿ; ಸವಾರ ಸಾವು ತುಮಕೂರು: ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪಿರುವ ಘಟನೆ ವರದಿಯಾಗಿದೆ. ತುಮಕೂರು ಹೊರವಲಯದಲ್ಲಿ ಅಪಘಾತ ಸಂಭವಿಸಿದ್ದು, ವಾಟರ್‌ಮ್ಯಾನ್ ರಂಗಸ್ವಾಮಿ(59) ಮೃತ ದುರ್ದೈವಿಯಾಗಿದ್ದಾರೆ. ಮತ್ತೊಬ್ಬ ಬೈಕ್ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಲಕ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ: ಫುಡ್ ಕಿಟ್ ಪಡೆಯಲು ಮಹಿಳೆಯರ ಹೊಡೆದಾಟ ಫುಡ್ ಕಿಟ್ ಪಡೆಯಲು ಮಹಿಳೆಯರ ಹೊಡೆದಾಟ ನಡೆಸಿರುವ ಪ್ರಕರಣ ವರದಿಯಾಗಿದೆ. ಯಾದಗಿರಿ ನಗರದ ಬಾಬು ಜಗಜೀವನರಾಮ್ ಭವನ ಎದುರು ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯಿಂದ ನೀಡಲಾಗುತ್ತಿರುವ ಫುಡ್ ಕಿಟ್ ಪಡೆಯಲು, ಲೈನ್ನಲ್ಲಿ ನಿಂತಿದ್ದಾಗ ಮಾತಿಗೆ ಮಾತು ಬೆಳೆದು ಫೈಟಿಂಗ್ ನಡೆದಿದೆ ಎಂದು ವರದಿಯಾಗಿದೆ.
ರಾಯಚೂರು: ಸ್ಕಿಡ್ ಆಗಿ ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ದುರ್ಮರಣ ಸ್ಕಿಡ್ ಆಗಿ ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮರಣ ಹೊಂದಿದ್ದಾರೆ. ರಾಯಚೂರು ತಾಲೂಕಿನ ನಲ್ಲಬಂಡಾ ಕ್ರಾಸ್‌ನಲ್ಲಿ ಘಟನೆ ನಡೆದಿದ್ದು, ಮೃತಪಟ್ಟವರನ್ನು ದೀಪಕ್(22), ಹುಸೇನ್(23) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸವಾರನಿಗೆ ಗಂಭೀರ ಗಾಯವಾಗಿದ್ದು, ರಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಜೈಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ತೆಕ್ಕೆಗೆ ಎಳೆದುಕೊಂಡ ಅದಾನಿ ಗ್ರೂಪ್
Bill Clinton: ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು
ವಿಜಯದಶಮಿಯಾದ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ 7 ರಕ್ಷಣಾ ಕಂಪನಿಗಳಿಗೆ ಚಾಲನೆ
Published On - 8:34 am, Fri, 15 October 21