ಪ್ರವಾಸಿಗರ ಗಮನಕ್ಕೆ: ಮೈಸೂರು ಮೃಗಾಲಯಕ್ಕೆ ಹೆಚ್ಚಿನ ಜನ ಬರುವ ನಿರೀಕ್ಷೆ; ಹೀಗಾಗಿ ನಾಳೆ ವಾರದ ರಜೆ ಇಲ್ಲ
Mysuru Zoo: ಮೃಗಾಲಯಕ್ಕೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತಿತ್ತು. ಆದರೆ, ನಾಳೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ನಾಳೆ ಮೃಗಾಲಯ ಪ್ರವಾಸಿಗರಿಗೆ ತೆರೆದಿರಲಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.
ಮೈಸೂರು: ಮೈಸೂರು ಮೃಗಾಲಯಕ್ಕೆ ನಾಳೆ (ಅಕ್ಟೋಬರ್ 19) ವಾರದ ರಜೆ ಇಲ್ಲ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಿಂದ ಮಾಹಿತಿ ಲಭ್ಯವಾಗಿದೆ. ಈದ್ ಮಿಲಾದ್ ಹಿನ್ನೆಲೆ ನಾಳೆ ಸರ್ಕಾರಿ ರಜೆ ಇದೆ. ಹೀಗಾಗಿ ಮೃಗಾಲಯಕ್ಕೆ ಹೆಚ್ಚಿನ ಜನ ಬರುವ ನಿರೀಕ್ಷೆ ಇದೆ. ಈ ಕಾರಣದಿಂದ ಮೃಗಾಲಯ ನಾಳೆಯೂ ತೆರೆದಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃಗಾಲಯಕ್ಕೆ ಪ್ರತಿ ಮಂಗಳವಾರ ವಾರದ ರಜೆ ಇರುತ್ತಿತ್ತು. ಆದರೆ, ನಾಳೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದೆ. ಹೀಗಾಗಿ ನಾಳೆ ಮೃಗಾಲಯ ಪ್ರವಾಸಿಗರಿಗೆ ತೆರೆದಿರಲಿದೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮಾಹಿತಿ ನೀಡಿದ್ದಾರೆ.
ದಸರಾ ದೀಪಾಲಂಕಾರ 9 ದಿನ ಮುಂದುವರಿಕೆ: ಬಸವರಾಜ ಬೊಮ್ಮಾಯಿ ವಿಜಯ ದಶಮಿ ದಿನದ ಬಳಿಕವೂ ನಂತರದ 9 ದಿನ ದಸರಾ ದೀಪಾಲಂಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 15ರಂದು ಅಧಿಕೃತ ಘೋಷಣೆ ಮಾಡಿದ್ದರು. ಸುತ್ತೂರು ಶಾಖಾ ಮಠದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದರು. ದಸರಾ ದೀಪಾಲಂಕಾರ ಮುಂದುವರಿಸಲು ಜನರ ಬೇಡಿಕೆ ಇದೆ. ಹಾಗಾಗಿ ವಿದ್ಯುತ್ ದೀಪಾಲಂಕಾರ ಮುಂದುವರಿಸಲಾಗುವುದು. ಇಂದಿನಿಂದ 9 ದಿನ ದೀಪಾಲಂಕಾರ ಮುಂದುವರಿಯಲಿದೆ ಎಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬೊಮ್ಮಾಯಿ ಹೇಳಿದ್ದರು.
ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ನಾಡ ಹಬ್ಬ ದಸರಾದ ಶುಭಾಶಯ ಕೋರಿದ್ದರು. ರಾಜ್ಯ ಮತ್ತಷ್ಟು ಸುಭಿಕ್ಷವಾಗಲಿ. ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಹರಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಡಿಗೆ ಶುಭಹಾರೈಸಿದ್ದರು. ಸುತ್ತೂರು ಶಾಖಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ದರು. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಮಠದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು.
ಇದನ್ನೂ ಓದಿ: ತಕ್ಕಮಟ್ಟಿಗೆ ಚೇತರಿಕೆ ಕಂಡ ಮೈಸೂರು ಉದ್ಯಮ; ಟಿವಿ9 ಮಂಥನ ತಂಡಕ್ಕೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಕೃತಜ್ಞತೆ
ಇದನ್ನೂ ಓದಿ: ಮೈಸೂರು: ಪೀಪಿ ಊದುತ್ತ ಯುವಕರಿಂದ ಕಿರಿಕಿರಿ; ತುತ್ತೂರಿ ಬಳಸುವುದನ್ನು ನಿಷೇಧಿಸಿ ಕಮಿಷನರ್ ಆದೇಶ