Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಪೀಪಿ ಊದುತ್ತ ಯುವಕರಿಂದ ಕಿರಿಕಿರಿ; ತುತ್ತೂರಿ ಬಳಸುವುದನ್ನು ನಿಷೇಧಿಸಿ ಕಮಿಷನರ್ ಆದೇಶ

Mysuru Dasara 2021: ಪೀಪಿ ಊದುತ್ತ ಯುವಕರಿಂದ ಕಿರಿಕಿರಿ ಹಿನ್ನೆಲೆ ನಿಷೇಧ ಹೇರಲಾಗಿದೆ. ಇಂದಿನಿಂದಲೇ (ಅಕ್ಟೋಬರ್ 16) ಈ ನಿಷೇಧಾಜ್ಞೆ ಜಾರಿಗೊಳಿಸಲು ಆದೇಶ ನೀಡಲಾಗಿದೆ. ಮೈಸೂರು ಕಮಿಷನರ್ ಡಾ. ಚಂದ್ರಗುಪ್ತ ನಿರ್ದೇಶನ ನೀಡಿದ್ದಾರೆ.

ಮೈಸೂರು: ಪೀಪಿ ಊದುತ್ತ ಯುವಕರಿಂದ ಕಿರಿಕಿರಿ; ತುತ್ತೂರಿ ಬಳಸುವುದನ್ನು ನಿಷೇಧಿಸಿ ಕಮಿಷನರ್ ಆದೇಶ
ಮೈಸೂರು ಅರಮನೆ ದೀಪಾಲಂಕಾರ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on: Oct 16, 2021 | 10:35 PM

ಮೈಸೂರು: ಅರಮನೆ ಸುತ್ತಮುತ್ತ ಯುವಕರಿಂದ ತುತ್ತೂರಿ ಊದುತ್ತಾ ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ತುತ್ತೂರಿ ಬಳಸುವುದನ್ನು ನಿಷೇಧಿಸಿ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಪೀಪಿ ಊದುತ್ತ ಯುವಕರಿಂದ ಕಿರಿಕಿರಿ ಹಿನ್ನೆಲೆ ನಿಷೇಧ ಹೇರಲಾಗಿದೆ. ಇಂದಿನಿಂದಲೇ (ಅಕ್ಟೋಬರ್ 16) ಈ ನಿಷೇಧಾಜ್ಞೆ ಜಾರಿಗೊಳಿಸಲು ಆದೇಶ ನೀಡಲಾಗಿದೆ. ಮೈಸೂರು ಕಮಿಷನರ್ ಡಾ. ಚಂದ್ರಗುಪ್ತ ನಿರ್ದೇಶನ ನೀಡಿದ್ದಾರೆ.

ದಸರಾ ದೀಪಾಲಂಕಾರ 9 ದಿನ ಮುಂದುವರಿಕೆ: ಬಸವರಾಜ ಬೊಮ್ಮಾಯಿ ವಿಜಯ ದಶಮಿ ದಿನದ ಬಳಿಕವೂ ನಂತರದ 9 ದಿನ ದಸರಾ ದೀಪಾಲಂಕಾರ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ​​ ಬೊಮ್ಮಾಯಿ ನಿನ್ನೆ (ಅಕ್ಟೋಬರ್ 15) ಅಧಿಕೃತ ಘೋಷಣೆ ಮಾಡಿದ್ದರು. ಸುತ್ತೂರು ಶಾಖಾ ಮಠದಲ್ಲಿ ಸಿಎಂ ಬೊಮ್ಮಾಯಿ ಈ ಬಗ್ಗೆ ಹೇಳಿಕೆ ನೀಡಿದ್ದರು. ದಸರಾ ದೀಪಾಲಂಕಾರ ಮುಂದುವರಿಸಲು ಜನರ ಬೇಡಿಕೆ ಇದೆ. ಹಾಗಾಗಿ ವಿದ್ಯುತ್ ದೀಪಾಲಂಕಾರ ಮುಂದುವರಿಸಲಾಗುವುದು. ಇಂದಿನಿಂದ 9 ದಿನ ದೀಪಾಲಂಕಾರ ಮುಂದುವರಿಯಲಿದೆ ಎಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬೊಮ್ಮಾಯಿ ಹೇಳಿದ್ದರು.

ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ನಾಡ ಹಬ್ಬ ದಸರಾದ ಶುಭಾಶಯ ಕೋರಿದ್ದರು. ರಾಜ್ಯ ಮತ್ತಷ್ಟು ಸುಭಿಕ್ಷವಾಗಲಿ. ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಹರಸಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನಾಡಿಗೆ ಶುಭಹಾರೈಸಿದ್ದರು. ಸುತ್ತೂರು ಶಾಖಾ ಮಠಕ್ಕೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟಿದ್ದರು. ಮಠದಲ್ಲಿ ಸಿಎಂ ಬೊಮ್ಮಾಯಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಗಿತ್ತು. ಮಠದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು.

ಇದನ್ನೂ ಓದಿ: Mysuru Dasara 2021: ದುರ್ಗಾ ಮಾತೆಯ 9 ದಿವ್ಯ ಅವತಾರ ಆಯುರ್ವೇದದಲ್ಲಿ 9 ದಿವ್ಯ ಔಷಧ ರೂಪದಲ್ಲಿದೆ; ವಿವರ ಇಲ್ಲಿದೆ

ಇದನ್ನೂ ಓದಿ: Mysuru Dasara: ಗತಕಾಲದ ಕಥೆ ಹೇಳುತ್ತಿವೆ ಮೈಸೂರು ಗೊಂಬೆಗಳು, ರಂಗೇರಿದ ಗೊಂಬೆ ಪ್ರದರ್ಶನ

‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್