Mysuru Dasara: ಗತಕಾಲದ ಕಥೆ ಹೇಳುತ್ತಿವೆ ಮೈಸೂರು ಗೊಂಬೆಗಳು, ರಂಗೇರಿದ ಗೊಂಬೆ ಪ್ರದರ್ಶನ
ನಾಡಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಮೈಸೂರಿನ ನಜರ್ ಬಾದ್ ನ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಬೊಂಬೆ ಪ್ರದರ್ಶನ ಆಯೋಜಿಸಿದೆ. 17 ವರ್ಷಗಳಿಂದ ಆಯೋಜಿಸುತ್ತಿರುವ ಪ್ರದರ್ಶನದಲ್ಲಿ, ಗೊಂಬೆಗಳ ಲೋಕವೇ ಅನಾವರಣಗೊಂಡಿದೆ.
ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರಾ ಎಂಬಂತೆ ಮೈಸೂರಿನಲ್ಲಿ ದಸರಾ ಸಂಭ್ರಮ ಶುರುವಾಗಿದೆ. ಅಲ್ಲಿ ಎತ್ತ ನೋಡಿರತ್ತ ಬೊಂಬೆಗಳದ್ದೇ ಸಾಮ್ರಾಜ್ಯ ನಿರ್ಮಾಣವಾಗಿದೆ. ಅಂಗೈಯಲ್ಲಿ ಹಿಡಿಯಬಹುದಾದ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಬೊಂಬೆಗಳು ಅಲ್ಲಿವೆ. ಅಪರೂಪದ ಆ ಬೊಂಬೆಗಳನ್ನ ನೋಡಲು ಜನ ದೌಡಾಯಿಸ್ತಿದ್ದಾರೆ.
ನಾಡಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಮೈಸೂರಿನ ನಜರ್ ಬಾದ್ ನ ರಾಮನ್ ಸನ್ಸ್ ಕಲಾ ಪ್ರತಿಷ್ಠಾನ ಬೊಂಬೆ ಪ್ರದರ್ಶನ ಆಯೋಜಿಸಿದೆ. 17 ವರ್ಷಗಳಿಂದ ಆಯೋಜಿಸುತ್ತಿರುವ ಪ್ರದರ್ಶನದಲ್ಲಿ, ಗೊಂಬೆಗಳ ಲೋಕವೇ ಅನಾವರಣಗೊಂಡಿದೆ. ಜಂಬೂಸವಾರಿ, ಆನೆಗಳು, ಕುದುರೆ, ಕಾಲಾಳು ಸೇರಿದಂತೆ, ಅಂಬಾವಿಲಾಸ ಅರಮನೆ, ಜಿಲ್ಲಾಧಿಕಾರಿ ಕಚೇರಿ ಎಲ್ಲವೂ ಗೊಂಬೆಗಳಲ್ಲಿ ಮೂಡಿದೆ.
ಸುಮಾರು 12 ರಾಜ್ಯಗಳಿಂದ ತಂದಿರುವ ಬೊಂಬೆಗಳು ಇಲ್ಲಿವೆ. ಈ ಸಲ 75 ನೇ ಸ್ವಾತಂತ್ರೋತ್ಸವ, ದಸರಾ ಸೇರಿದಂತೆ ನಾಲ್ಕು ಬಗೆಯ ಕಥೆ ಹೇಳುವ ಬೊಂಬೆ ಕೂರಿಸಲಾಗಿದೆ. ಪಿಂಗಾಣಿ, ಮಣ್ಣು, ಗಾಜು, ಮರದಲ್ಲಿ ಮಾಡಿದ 5 ಸಾವಿರಕ್ಕೂ ಹೆಚ್ಚು ಬೊಂಬೆಗಳಿದ್ದು, ಪ್ರವಾಸಿಗರನ್ನ ಸೆಳೆಯುತ್ತಿವೆ.
ಐತಿಹಾಸಿಕ ದಸರಾದಲ್ಲಿ ಬೊಂಬೆ ಕೂರಿಸೋದು ಕೂಡ ಒಂದು ಆಚರಣೆ. ಸಾಂಸ್ಕೃತಿಕ ನಗರಿಯಲ್ಲಿ ನೀವು ಕೂಡ ಬೊಂಬೆಗಳನ್ನ ನೋಡ್ಬೇಕು ಅಂದ್ರೆ, ಬೊಂಬೆ ಮನೆಗೆ ಭೇಟಿ ನೀಡಿ, ಬೊಂಬೆಗಳನ್ನ ಕಣ್ತುಂಬಿಕೊಳ್ಳಿ.
ಇದನ್ನೂ ಓದಿ: ‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ