AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಷ ದಸರಾ ಆಚರಿಸಿಯೇ ತೀರುತ್ತೇವೆ ಎಂದ ಸಮಿತಿ ಸದಸ್ಯರು

ಬುದ್ದ ವಿಹಾರದಿಂದ ಅಶೋಕಪುರಂ ಉದ್ಯಾನವನದವರೆಗೂ ಮಹಿಷ ಮೂರ್ತಿ ಮೆರವಣಿಗೆ ಮೂಲಕ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ.

ಮಹಿಷ ದಸರಾ ಆಚರಿಸಿಯೇ ತೀರುತ್ತೇವೆ ಎಂದ ಸಮಿತಿ ಸದಸ್ಯರು
ಪ್ರಾತಿನಿಧಿಕ ಚಿತ್ರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 04, 2021 | 9:07 PM

Share

ಮೈಸೂರು: ದಸರಾ ಉದ್ಘಾಟನೆಗೆ ದಿನಾಂಕ ಈಗಾಗಲೇ ನಿಗದಿಯಾಗಿದೆ. ಮೈಸೂರಿನಲ್ಲಿ ಅಕ್ಟೋಬರ್ 7ರ ಗುರುವಾರ ಬೆಳಿಗ್ಗೆ 8.15ರಿಂದ 8.45ರ ಶುಭ ಮುಹೂರ್ತದಲ್ಲಿ ದಸರೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಚಾಲನೆ‌ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಇನ್ನು ಆಹ್ವಾನ ಪತ್ರಿಕೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ದಸರಾ ಸಂದೇಶ ನೀಡಿದ್ದಾರೆ. ಕೊರೊನಾ ಹಿನ್ನೆಲೆ ಕಳೆದ ಬಾರಿಯಂತೆ ಸರಳ ದಸರಾ ಆಚರಿಸಲಾಗುತ್ತಿದೆ. ಜೀವನದೊಂದಿಗೆ ಜೀವವೂ ಮುಖ್ಯ ಆಶಯದೊಂದಿಗೆ ಈ ನಿರ್ಧಾರ‌ ಕೈಗೊಳ್ಳಲಾಗಿದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಮುಂದಿನ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸೋಣ ಅಂತಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಂದೇಶ ನೀಡಿದ್ದಾರೆ.

ಮಹಿಷ ದಸರಾ ಸಮಿತಿ ಸದಸ್ಯರು ಮೈಸೂರು ದಸರಾ ಆಚರಣೆಗಾಗಿ ಪಟ್ಟು ಹಿಡಿದು ಕುಳಿತಿದ್ದಾರೆ. ಮಂಗಳವಾರ (ಅಕ್ಟೋಬರ್ 5) ಅನುಮತಿ ನೀಡಲಿ-ಬಿಡಲಿ ಮಹಿಷ ದಸರಾ ಆಚರಿಸುವುದಾಗಿ ಸಮಿತಿ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಇದಕ್ಕಾಗಿ ಆಹ್ವಾನ ಪತ್ರಿಕೆಯನ್ನೂ ಸಹ ಸಿದ್ದಪಡಿಸಿದ್ದಾರೆ. ಮಂಗಳವಾರ 9 ಗಂಟೆಗೆ ಮೈಸೂರಿನ ಅಶೋಕಪುರಂನಲ್ಲಿ ಮೆರವಣಿಗೆ ಮೂಲಕ ಮಹಿಷ ದಸರಾ ಆಚರಣೆಗೆ ಸಿದ್ದತೆ ನಡೆದಿದೆ. ಬುದ್ದ ವಿಹಾರದಿಂದ ಅಶೋಕಪುರಂ ಉದ್ಯಾನವನದವರೆಗೂ ಮಹಿಷ ಮೂರ್ತಿ ಮೆರವಣಿಗೆ ಮೂಲಕ ದಸರಾ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಅನುಮತಿ ನೀಡದ ಸರ್ಕಾರ ಜಿಲ್ಲಾಧಿಕಾರಿ ಹಾಗೂ ಮೈಸೂರು ಪೊಲೀಸ್ ಕಮಿಷನರ್ ವಿರುದ್ದ ಸಮಿತಿ ಸದಸ್ಯರು ಹರಿಹಾಯ್ದಿದ್ದಾರೆ.

ಇದುವರೆಗೂ ಮಹಿಷ ದಸರಾ ಆಚರಣೆಗೆ ಪೊಲೀಸರಿಂದ ಹಾಗೂ ಜಿಲ್ಲಾ ಆಡಳಿತದಿಂದ ಅನುಮತಿ ಸಿಕ್ಕಿಲ್ಲ ಆದರೂ ನಾವು ಮಹಿಷ ದಸರಾ ಆಚರಿಸಿ‌ಯೇ ತೀರುತ್ತೇವೆ ಎಂಬುದು ಮಹಿಷ ಸಮಿತಿ ಸದಸ್ಯರ ಪಟ್ಟು. ಈಗಾಗಿ ಸಹಜವಾಗಿ ನಾಳೆಯ ಬೆಳವಣಿಗೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: 

‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ 

Mysuru Dasara: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ತಯಾರಾಗುತ್ತಿದೆ ಮೈಸೂರು; ಸಿದ್ಧತೆ ಹೇಗಿದೆ?