ಮೈಸೂರು ಮೇಯರ್ಗೆ ಈ ಬಾರಿಯೂ ಕುದುರೆ ಸವಾರಿ ಭಾಗ್ಯವಿಲ್ಲ
ದೇಶದ ಇತಿಹಾಸದಲ್ಲಿರುವ ವಿಶೇಷ ಸಂಪ್ರದಾಯವಿದು. ಆದರೆ ಕೊರೊನಾ ಕಾರಣದಿಂದ ಬಿಜೆಪಿಯ ಮೇಯರ್ ಸುನಂದಾ ಪಾಲನೇತ್ರ ಈ ಅವಕಾಶದಿಂದ ವಂಚಿತರಾಗಿದ್ದಾರೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಈ ಬಾರಿಯೂ ಮೇಯರ್ಗೆ ಕುದುರೆ ಸವಾರಿ ಭಾಗ್ಯವಿಲ್ಲ. ಕೊರೊನಾ ಹಿನ್ನೆಲೆ ಕುದುರೆ ಸವಾರಿ ಮಾಡಲು ಮೇಯರ್ಗೆ ಈ ಬಾರಿ ಅವಕಾಶವಿಲ್ಲ. ಜಂಬೂ ಸವಾರಿ ವೇಳೆ ಮೈಸೂರು ಮೇಯರ್ ಕುದುರೆ ಏರಿ ಬರುವುದು ವಾಡಿಕೆ. ದೇಶದ ಇತಿಹಾಸದಲ್ಲಿರುವ ವಿಶೇಷ ಸಂಪ್ರದಾಯವಿದು. ಆದರೆ ಕೊರೊನಾ ಕಾರಣದಿಂದ ಬಿಜೆಪಿಯ ಮೇಯರ್ ಸುನಂದಾ ಪಾಲನೇತ್ರ ಈ ಅವಕಾಶದಿಂದ ವಂಚಿತರಾಗಿದ್ದಾರೆ. ಕಳೆದ ಬಾರಿ ಸರಳ ದಸರಾ ಹಿನ್ನೆಲೆ ಮೈಸೂರು ಮೇಯರ್ಗೆ ಈ ಅವಕಾಶ ತಪ್ಪಿತ್ತು.
ಮಹಿಷ ದಸರಾ ಆಚರಣೆಗೆ ಸಿದ್ಧತೆ ಅನುಮತಿ ಸಿಗದಿದ್ದರೂ ಇಂದು ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ. ಮಹಿಷ ದಸರಾ ಸಮಿತಿ ಸಿದ್ಧತೆ ನಡೆಸಿಕೊಂಡಿದೆ. ಸಮಿತಿಯಿಂದ ಮಹಿಷ ದಸರಾ ಆಹ್ವಾನ ಪತ್ರಿಕೆ ತಯಾರಾಗಿದೆ. ಮಹಿಷ ದಸರೆಯಲ್ಲಿ ಪುಷ್ಪಾರ್ಚನೆ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯುತ್ತದೆ. ಅಶೋಕಪುರಂನಲ್ಲಿ ಮಹಿಷಾಸುರ ಮೂರ್ತಿ ಮೆರವಣಿಗೆ ನಡೆಯುತ್ತದೆ. ಬೆಳಿಗ್ಗೆ 11 ಗಂಟೆಗೆ ಬುದ್ದ ವಿಹಾರದಿಂದ ಅಶೋಕಪುರಂ ಉದ್ಯಾನವನದವರೆಗೂ ಮೆರವಣಿಗೆ ನಡೆಯುತ್ತದೆ.
ಪ್ರಮೋದಾದೇವಿ ಒಡೆಯರ್ಗೆ ಆಹ್ವಾನ ಇಂದು ಯದುವಂಶದ ಪ್ರಮೋದಾದೇವಿ ಒಡೆಯರ್ಗೆ ದಸರಾಗೆ ಆಹ್ವಾನ ನೀಡಲಿದ್ದಾರೆ. ಸಚಿವ ಎಸ್.ಟಿಸೋಮಶೇಖರ್ ಪ್ರಮೋದಾದೇವಿಗೆ ಆಹ್ವಾನ ನೀಡಲಿದ್ದಾರೆ. ಅರಮನೆಯ ನಿವಾಸದಲ್ಲಿ ಭೇಟಿಯಾಗಿ, ಗೌರವ ರಾಜಧನ ನೀಡಿ ದಸರಾಗೆ ಆಹ್ವಾನಿಸುತ್ತಾರೆ. ಇದೇ ವೇಳೆ ದಸರಾಗೆ ಸಹಕಾರ ನೀಡುವಂತೆ ಮನವಿ ಮಾಡಲಿದ್ದಾರೆ.
ಇಂದಿನಿಂದ 3 ದಿನ ಪ್ರವೇಶ ನಿರ್ಬಂಧ ಮಹಾಲಯ ಅಮಾವಾಸ್ಯೆ, ದಸರಾ ಉದ್ಘಾಟನೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಇಂದಿನಿಂದ 3 ದಿನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲ ಮಾರ್ಗಗಳು ಬಂದ್ ಆಗಿವೆ. ಚಾಮುಂಡಿ ಬೆಟ್ಟಕ್ಕೆ ತೆರಳಲು ಬಂದ ಭಕ್ತರು ವಾಪಸಾಗುತ್ತಿದ್ದಾರೆ.
ಇದನ್ನೂ ಓದಿ
Mysuru Dasara: ಗತಕಾಲದ ಕಥೆ ಹೇಳುತ್ತಿವೆ ಮೈಸೂರು ಗೊಂಬೆಗಳು, ರಂಗೇರಿದ ಗೊಂಬೆ ಪ್ರದರ್ಶನ
Published On - 9:31 am, Tue, 5 October 21