ರೋಗಿಯನ್ನು ವಾರ್ಡ್ಗೆ ಶಿಫ್ಟ್ ಮಾಡಲು ಕೊಡಬೇಕಂತೆ ಲಂಚ, ಧಾರವಾಡ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಲಂಚಾವತಾರ ಮೊಬೈಲ್ನಲ್ಲಿ ಸೆರೆ
ಗರಗ ಮೂಲದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಗೆ ಹೊಟ್ಟೆ ನೋವು ಹಿನ್ನೆಲೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಬಳಿಕ ವಾರ್ಡ್‌ಗೆ ಶಿಫ್ಟ್ ಮಾಡುವಾಗ ಆಸ್ಪತ್ರೆ ಸಿಬ್ಬಂದಿ ರೋಗಿ ಸಿಬ್ಬಂದಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಧಾರವಾಡ: ರೋಗಿಯನ್ನು ವಾರ್ಡ್ಗೆ ಶಿಫ್ಟ್ ಮಾಡಲು ಸರ್ಕಾರಿ ಆಸ್ಪತ್ರೆಯಲ್ಲೇ ಲಂಚ ಕೇಳಿದ ಲಂಚಾವತಾರ ಬಯಲಾಗಿದೆ. ರೋಗಿಯನ್ನು ವಾರ್ಡ್ಗೆ ಶಿಫ್ಟ್ ಮಾಡಲು ಧಾರವಾಡ ಜಿಲ್ಲಾಸ್ಪತ್ರೆ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಹಣ ಕೇಳುವಾಗ ರೋಗಿ ಸಂಬಂಧಿ ವಿಡಿಯೋ ಮಾಡಿಕೊಂಡಿದ್ದಾರೆ.
ಗರಗ ಮೂಲದ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಗೆ ಹೊಟ್ಟೆ ನೋವು ಹಿನ್ನೆಲೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಬಳಿಕ ವಾರ್ಡ್‌ಗೆ ಶಿಫ್ಟ್ ಮಾಡುವಾಗ ಆಸ್ಪತ್ರೆ ಸಿಬ್ಬಂದಿ ರೋಗಿ ಸಿಬ್ಬಂದಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಹಿಳೆಯ ಪುತ್ರನ ಬಳಿ ಆಯಾಗಳಿಗೆ ತಲಾ 200, ನರ್ಸ್‌ಗಳಿಗೆ ₹600 ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ನಾವು ಬಡವರು ಹಣವಿಲ್ಲ ಎಂದು ಮಹಿಳೆಯ ಮಗ ಪ್ರತಿಕ್ರಿಯಿಸಿದ್ದಾನೆ.
ಖಾಸಗಿ ಆಸ್ಪತ್ರೆಗೆ ಹೋದ್ರೆ ಸಾವಿರಾರು ರೂ. ಖರ್ಚಾಗ್ತಿತ್ತು. ಇಲ್ಲಿ ಉಚಿತವಾಗಿ ಚಿಕಿತ್ಸೆ ಆಗಿದೆ ಅದಕ್ಕಾದರೂ ಹಣ ಕೊಡಿ ಎಂದು ಮತ್ತೆ ಡಿಮ್ಯಾಂಡ್ ಮಾಡಿದ್ದಾರೆ. ಲಂಚ ನೀಡುವಂತೆ ಹಿಂಸಿಸಿದ್ದಾರೆ. ನರ್ಸ್ ರೋಗಿ ಮಹಿಳೆ ಮಗನ ಬಳಿ ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಹಣ ಕೇಳುವುದನ್ನ ರೋಗಿ ಸಂಬಂಧಿ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: Type 2 Diabetes: ಟೈಪ್ 2 ಡಯಾಬಿಟಿಸ್ ನಿಯಂತ್ರಿಸಲು ವ್ಯಾಯಾಮ ಎಷ್ಟು ಸಹಾಯಕ ಗೊತ್ತಾ?
ಭಾರಿ ಮಳೆಯಿಂದ ಪಕ್ಕಕ್ಕೆ ವಾಲಿದೆ ಗೌರಮ್ಮ ಲೇ ಔಟ್ನಲ್ಲಿನ ರಾಜಾಕಾಲುವೆ ಪಕ್ಕದ 3-ಅಂತಸ್ತಿನ ಕಟ್ಟಡ
Published On - 7:58 am, Tue, 5 October 21