Type 2 Diabetes: ಟೈಪ್ 2 ಡಯಾಬಿಟಿಸ್ ನಿಯಂತ್ರಿಸಲು ವ್ಯಾಯಾಮ ಎಷ್ಟು ಸಹಾಯಕ ಗೊತ್ತಾ?

TV9 Digital Desk

| Edited By: shruti hegde

Updated on: Oct 05, 2021 | 7:51 AM

ಪ್ರತಿನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಎಷ್ಟು ಉತ್ತಮ? ವ್ಯಾಯಾಮ ಅಭ್ಯಾಸವು ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಾಯಕ ಎಂಬ ಮಾಹಿತಿ ಈ ಕೆಳಗಿನಂತಿದೆ.

Type 2 Diabetes: ಟೈಪ್ 2 ಡಯಾಬಿಟಿಸ್ ನಿಯಂತ್ರಿಸಲು ವ್ಯಾಯಾಮ ಎಷ್ಟು ಸಹಾಯಕ ಗೊತ್ತಾ?
ಸಾಂದರ್ಭಿಕ ಚಿತ್ರ

ಟೈಪ್ 2 ಮಧುಮೇಹ ಸಮಸ್ಯೆಯು ಇತ್ತೀಚಿನ ಜನರಿಗೆ ಹೆಚ್ಚು ಕಾಡುತ್ತಿದೆ. ನಿಯಮಿತವಾದ ಆಹಾರ ಮತ್ತು ವ್ಯಾಯಾಮದ ಮೂಲಕ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಟೈಪ್ 2 ಡಯಾಬಿಟಿಸ್ ತೊಂದರೆಯಲ್ಲಿರುವವರು ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ಕೇವಲ ವ್ಯಾಯಾಮ ಮಾತ್ರ ಸಾಕಾಗುವುದಿಲ್ಲ ಆಹಾರ ಸೇವನೆಯಲ್ಲಿನ ನಿಯಂತ್ರಣದ ಜತೆಗೆ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಸಮಸ್ಯೆಯ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಡಯಾಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಕ್ಲಿನಿಕಲ್ ಅಧ್ಯಯನವು ಮೂರು ವರ್ಷಗಳವರೆಗೆ ಮಧುಮೇಹ ಅಪಾಯದಲ್ಲಿರುವ ಜನರೊಂದಿಗೆ ಅಧ್ಯಯನ ನಡೆಸಿದೆ. ನಿಯಮಿತ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು ಶೇ. 58ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಿರುವಾಗ ವ್ಯಾಯಾಮದ ಮೂಲಕ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದು ಈ ಕೆಳಗಿನಂತಿದೆ.

ವ್ಯಾಯಾಮದಿಂದ ಪ್ರಯೋಜನಗಳು *ತೂಕದ ನಿಯಂತ್ರಣ *ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ *ಬಲವಾದ ಸ್ನಾಯುಗಳು *ಬಲವಾದ ಮೂಳೆಗಳು *ಮನಸ್ಥಿತಿ ಸುಧಾರಣೆ *ಶಕ್ತಿ *ಉತ್ತಮ ನಿದ್ರೆ *ಒತ್ತಡ ನಿರ್ವಹಣೆ

ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಿರುವಾಗ ಹೃದಯವನ್ನು ಆರೋಗ್ಯವಾಗಿರಿಸಲು ಮತ್ತು ಸದೃಢವಾಗಿರಿಸಲು ವ್ಯಾಯಾಮ ಅತ್ಯವಶ್ಯಕ. ಜತೆಗೆ ವ್ಯಾಯಾಮ ಮಾಡುವ ಮೂಲಕ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಯಾವುದೇ ಆರೋಗ್ಯ ಖಾಯಿಲೆಯಾಗಲೀ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮ ಅಭ್ಯಾಸಗಳನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ. ಈ ಮೂಲಕ ನಿಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಸುಧಾರಿಸಿಕೊಳ್ಳಲು ಸಹಾಯಕ.

ಇದನ್ನೂ ಓದಿ:

Health Tips: ಹೃದಯ ಆರೋಗ್ಯ ಸುಧಾರಣೆಗೆ ಈ ಹಣ್ಣುಗಳ ಸೇವನೆ ಪ್ರಯೋಜನಕಾರಿ

Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada