Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ

ಸಾಮಾನ್ಯವಾಗಿ ಜನರು ಆರಂಭದಲ್ಲಿ ರೋಗವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಸಮಸ್ಯೆ ಹೆಚ್ಚಾದಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಶ್ವಾಸಕೋಶದಿಂದ ಅನಾರೋಗ್ಯಕ್ಕೆ ಒಳಗಾಗಿದ್ದೇವೆ ಎಂದು ಸೂಚಿಸುವ ಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ.

Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on: Sep 29, 2021 | 8:07 AM

ನೀವು ಆರೋಗ್ಯವಾಗಿರಲು ಬಯಸಿದರೆ, ನಿಮ್ಮ ಶ್ವಾಸಕೋಶದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಏಕೆಂದರೆ ನಿಮ್ಮ ಶ್ವಾಸಕೋಶವೇ ಆಮ್ಲಜನಕವನ್ನು ಶೋಧಿಸುತ್ತದೆ ಮತ್ತು ಅದನ್ನು ನಿಮ್ಮ ದೇಹಕ್ಕೆ ಸಾಗಿಸುತ್ತದೆ. ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾದಾಗ, ವ್ಯಕ್ತಿಯ ದೇಹದಲ್ಲಿ ಆಮ್ಲಜನಕದ ಹರಿವು ನಿರ್ಬಂಧಿಸಲು ಪ್ರಾರಂಭವಾಗುತ್ತದೆ ಮತ್ತು ಈ ಕಾರಣದಿಂದಾಗಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಇದರ ಹೊರತಾಗಿ, ಒಬ್ಬ ವ್ಯಕ್ತಿಯು ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾ, ಕ್ಷಯರೋಗ, ಐಎಲ್​ಡಿ, ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಬಲಿಯಾಗಬಹುದು.

ಸಾಮಾನ್ಯವಾಗಿ ಜನರು ಆರಂಭದಲ್ಲಿ ರೋಗವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಆದರೆ ಸಮಸ್ಯೆ ಹೆಚ್ಚಾದಾಗ ಅದನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಾವು ಶ್ವಾಸಕೋಶದಿಂದ ಅನಾರೋಗ್ಯಕ್ಕೆ ಒಳಗಾಗಿದ್ದೇವೆ ಎಂದು ಸೂಚಿಸುವ ಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯವಾಗಿದೆ. ಆದ್ದರಿಂದ ಸಮಯಕ್ಕೆ ಮುಂಚಿತವಾಗಿ ಎಚ್ಚರವಹಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬಹುದು. ನಿಮ್ಮ ಶ್ವಾಸಕೋಶಗಳು ಕಾಯಿಲೆಗೆ ಒಳಗಾಗಿದೆ ಎಂದು ತೋರಿಸುವ 5 ರೋಗ ಲಕ್ಷಣಗಳ ಬಗ್ಗೆ ತಿಳಿಯುವುದು ಸೂಕ್ತ.

ಈ ಐದು ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

ಎದೆ ನೋವು ದೀರ್ಘಕಾಲದವರೆಗೆ ಎದೆ ನೋವನ್ನು ಅನುಭವಿಸುತ್ತಿದ್ದರೆ, ಇದನ್ನು ನಿರ್ಲಕ್ಷಿಸಬೇಡಿ. ಇದು ಶ್ವಾಸಕೋಶದ ಕಾಯಿಲೆಯ ಸಂಕೇತವಾಗಿರಬಹುದು. ಇದನ್ನು ಹೊರತುಪಡಿಸಿ, ದೀರ್ಘಕಾಲದವರೆಗೆ ಕೆಮ್ಮು ಅಥವಾ ಉಸಿರಾಟದ ತೊಂದರೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಆದಷ್ಟು ಬೇಗ ವೈದ್ಯರ ಸಲಹೆ ಪಡೆಯಿರಿ.

ಕಫ ಒಬ್ಬ ವ್ಯಕ್ತಿಯು ಸುಮಾರು ಒಂದು ತಿಂಗಳ ಕಾಲ ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ, ಉಸಿರಾಟಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆ ಇರಬಹುದು ಎಂದು ಅರ್ಥಮಾಡಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿ ಮಾಡಿ.

ಉಸಿರಾಟದ ತೊಂದರೆ ನಿಮಗೆ ಉಸಿರಾಟದ ತೊಂದರೆ ಇದ್ದರೆ ಮತ್ತು ಈ ಸ್ಥಿತಿಯು ಸುಮಾರು 15 ದಿನಗಳವರೆಗೆ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇಲ್ಲದಿದ್ದರೆ ಈ ಸಮಸ್ಯೆ ಕೂಡ ಗಂಭೀರವಾಗಬಹುದು.

ರಕ್ತ ಕೆಮ್ಮು ಒಂದು ವಾರದಿಂದ ಕೆಮ್ಮುತ್ತಿದ್ದರೆ ಅಥವಾ ಕೆಮ್ಮುವಾಗ ರಕ್ತ ಬಂದರೆ, ಅದು ನಿಮ್ಮ ಉಸಿರಾಟದ ವ್ಯವಸ್ಥೆಯ ಅಸಮರ್ಪಕ ಕಾರ್ಯವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮನೆಮದ್ದುಗಳನ್ನೇ ಅವಲಂಬಿಸಬೇಡಿ. ವೈದ್ಯರನ್ನು ಸಂಪರ್ಕಿಸಿ.

ತೂಕ ಇಳಿಕೆ ದೇಹದ ತೂಕವು ಇದ್ದಕ್ಕಿದ್ದಂತೆ ಕಡಿಮೆಯಾಗಲು ಪ್ರಾರಂಭಿಸಿದರೆ, ಅದು ದೇಹದೊಳಗೆ ಬೆಳೆಯುತ್ತಿರುವ ಗೆಡ್ಡೆಗಳ ಎಚ್ಚರಿಕೆಯ ಗಂಟೆಯಾಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ, ನೀವು ತಕ್ಷಣ ಎಚ್ಛೆತ್ತುಕೊಳ್ಳಬೇಕು ಮತ್ತು ವೈದ್ಯರ ಸಲಹೆ ಪಡೆಯಿರಿ.

ಇದನ್ನೂ ಓದಿ: Weight Loss V/S Fat Loss: ಕೊಬ್ಬು ಮತ್ತು ತೂಕ ಇಳಿಕೆ; ಎರಡರಲ್ಲಿ ಯಾವುದು ಆರೋಗ್ಯಕರ ಆಯ್ಕೆ?

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ 3 ಬಗೆಯ ಆರೋಗ್ಯಕರ ಪಾನೀಯಗಳು ಸಹಾಯಕ

‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ