Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು

ಸೇಬು ಹಣ್ಣುಗಳನ್ನು ಮಿತವಾಗಿ ಸೇವಿಸಿದರೆ ಟೈಪ್ 2 ಮಧುಮೇಹದ ಅಪಾಯದಿಂದ ರಕ್ಷಿಸಿಕೊಳ್ಳಬಹುದು. ದಿನಕ್ಕೆ ಒಂದು ಸೇಬು ಹಣ್ಣನ್ನು ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

Health Tips: ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳಿವು
ಸಾಂದರ್ಭಿಕ ಚಿತ್ರ
Follow us
| Updated By: shruti hegde

Updated on: Sep 29, 2021 | 10:41 AM

ಆರೋಗ್ಯಕ್ಕೆ ಉತ್ತಮವಾಗಿರಲು ರೋಗ ನಿರೋಧಕ ಶಕ್ತಿ ನಮ್ಮಲ್ಲಿ ಹೆಚ್ಚಿರಬೇಕು. ವೈರಸ್ ವಿರುದ್ದ ಹೋರಾಡಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವದರ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಹಾಗಿರುವಾಗ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಜತೆಗೆ ದೇಹದಲ್ಲಿ ಅರೋಗ್ಯ ಸುಧಾರಣೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಕೆಲವು ಬಗೆಯ ಹಣ್ಣುಗಳನ್ನು ನೀವು ಸೇವಿಸಬಹುದು.

ಕಾಲೋಚಿತ ಮತ್ತು ಸ್ಥಳೀಯವಾಗಿ ಸಿಗುವ ಹಣ್ಣುಗಳನ್ನು ಸೇವಿಸುವುದರಿಂದ ಸಕ್ಕರೆ ಮತ್ತು ಉರಿಯೂತದ ಮಟ್ಟವನ್ನು ಕಡಿಮೆ ಮಾಡುವುದರಿಂದ ಹಿಡಿದು ಅಧಿಕ ರಕ್ತದೊತ್ತಡದ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಹಣ್ಣುಗಳಲ್ಲಿ ಆರೋಗ್ಯ ಸುಧಾರಣೆಗೆ ಬೇಕಾಗಿರುವ ಜೀವಸತ್ವಗಳು ಮತ್ತು ಖನಿಜಗಳು ಇರುವುದರಿಂದ ಜತೆಗೆ ವಿಟಮಿನ್ ಎ, ಬಿ, ಸಿ, ಇ ಮತ್ತು ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಫೈಬರ್ತ​ನಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುತ್ತದೆ. ಈ ಕೆಲವು ಹಣ್ಣುಗಳು ಮಧುಮೇಹದ ಸ್ನೇಹಿಯಾಗಿರುವ ಜತೆಗೆ ಫೈಬರ್ ಮತ್ತು ನೀರಿನ ಅಂಶದಿಂದ ತುಂಬಿರುತ್ತದೆ. ಇದು ಸಕ್ಕರೆ ಪ್ರಮಾಣವನ್ನು ನಿಯಂತ್ರಣಗೊಳಿಸುತ್ತದೆ.

ಅಧ್ಯಯನಗಳ ಪ್ರಕಾರ ಸೇಬು ಹಣ್ಣುಗಳನ್ನು ಮಿತವಾಗಿ ಸೇವಿಸಿದರೆ ಟೈಪ್ 2 ಮಧುಮೇಹದ ಅಪಾಯದಿಂದ ರಕ್ಷಿಸಿಕೊಳ್ಳಬಹುದು. ದಿನಕ್ಕೆ ಒಂದು ಸೇಬು ಹಣ್ಣನ್ನು ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಜತೆಗೆ ಆವಕಾಡೊ ಹಣ್ಣು ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಅವುಗಳು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುತ್ತದೆ. ಜತೆಗೆ ಮಧುಮೇಹ ಅಪಾಯವನ್ನು ಕಡಿಮೆಗೊಳಿಸುತ್ತದೆ.

ನೀವು ಆಹಾರ ಪದ್ಧತಿಯನ್ನು ಬೆರ್ರಿ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಉತ್ತಮ ಪ್ರಯೋಜನಕಾರಿ. ಬ್ಲ್ಯಾಕ್ ಬೆರ್ರಿ, ಬ್ಲ್ಯೂ ಬೆರ್ರಿ ಅಥವಾ ಸ್ಟ್ರಾಬೆರಿಗಳನ್ನು ನೀವು ಸೇವಿಸಬಹುದು. ಇವೆಲ್ಲವೂ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಫೈಬರ್​ಗಳಿಂದ ತುಂಬಿರುತ್ತದೆ.

ಪಪ್ಪಾಯಿ ಹಣ್ಣು ನೈಸರ್ಗಿಕ ಆಕ್ಸಿಡೆಂಟ್​ಗಳಿಂದ ತುಂಬಿರುತ್ತದೆ. ಇದು ಮಧುಮೇಹ ಸಮಸ್ಯೆ ಇರುವವರಿಗೆ ಉತ್ತಮ ಆಯ್ಕೆಯಾಗಿದೆ. ಜೀವಕೋಶದ ಹಾನಿಯ ಸಾಧ್ಯತೆಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ಹಣ್ಣಿನಲ್ಲಿದೆ. ಜತೆಗೆ ಕಿವಿ ಹಣ್ಣಿನಲ್ಲಿ ವಿಟಮಿನ್ ಇ, ಕೆ ಮತ್ತು ಪೊಟ್ಯಾಶಿಯಂನ ಅತ್ಯುತ್ತಮ ಮೂಲವಾಗಿದೆ. ಅವುಗಳು ಹಣ್ಣಿನಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಹೊಂದಿರುತ್ತದೆ.

ಕಲ್ಲಂಗಡಿ ಹಣ್ಣಿನಲ್ಲಿ ಇದರಲ್ಲಿ ಫೈಬರ್, ಪೊಟ್ಯಾಷಿಯಂ, ಮೆಗ್ನೀಶಿಯಂ, ವಿಟಮಿನ್ ಬಿ ಮತ್ತು ಸಿಯಂತಹ ಪೌಷ್ಟಿಕಾಂಶಗಳಿರುತ್ತವೆ. ಆರೋಗ್ಯವನ್ನು ಸುಧಾರಿಸಿಕೊಳ್ಳಲು ಇದು ಉತ್ತಮ. ಹಾಗೂ ಡ್ರ್ಯಾಗನ್ ಹಣ್ಣಿನಲ್ಲಿರುವ ನಾರಿನಾಂಶ ಮತ್ತು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ.

ಇನ್ನು, ಪೇರಳೆ ಹಣ್ಣನ್ನು ಸಹ ಸೇವಿಸುಸಬಹುದು. ಇದು ಉರಿಯೂತದ ವಿರುದ್ಧ ಹೋರಾಡಲು ಸಹಾಯಕವಾಗಿದೆ. ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿರುವ ಫೈಬರ್ ಅಂಶ ಆರೋಗ್ಯ ಸುಧಾರಣೆಗೆ ಸಹಾಯಕ. ಇದು ರಕ್ತದಲ್ಲಿ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಜತೆಗೆ ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತವೆ.

ಇದನ್ನೂ ಓದಿ:

Health Tips: ಶೀತ, ಕೆಮ್ಮಿನ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆಗಳು ಇಲ್ಲಿವೆ

Health Tips: ಈ 5 ರೋಗ ಲಕ್ಷಣಗಳು ಶ್ವಾಸಕೋಶ ಕಾಯಿಲೆಯ ಎಚ್ಚರದ ಗಂಟೆ, ಎಂದಿಗೂ ನಿರ್ಲಕ್ಷಿಸಬೇಡಿ

(These fruits control diabetes check in Kannada)