Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss V/S Fat Loss: ಕೊಬ್ಬು ಮತ್ತು ತೂಕ ಇಳಿಕೆ; ಎರಡರಲ್ಲಿ ಯಾವುದು ಆರೋಗ್ಯಕರ ಆಯ್ಕೆ?

ನಮ್ಮ ದೇಹವು ಕೊಬ್ಬು, ಕೊಬ್ಬು ರಹಿತ ದ್ರವ್ಯರಾಶಿಯಂತಹ ಅನೇಕ ಘಟಕಗಳಿಂದ ಕೂಡಿದೆ. ಇದರಲ್ಲಿ ಸ್ನಾಯು, ಮೂಳೆ, ನೀರು, ಅಂಗಗಳು ಮತ್ತು ಇತರವು ಸೇರಿವೆ. ಇದೆಲ್ಲವೂ ದೇಹದಲ್ಲಿ ಸಮಾನ ಪ್ರಮಾಣದಲ್ಲಿರಬೇಕು.

Weight Loss V/S Fat Loss: ಕೊಬ್ಬು ಮತ್ತು ತೂಕ ಇಳಿಕೆ; ಎರಡರಲ್ಲಿ ಯಾವುದು ಆರೋಗ್ಯಕರ ಆಯ್ಕೆ?
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Sep 27, 2021 | 8:45 AM

ತೂಕ ಇಳಿಕೆ ಮತ್ತು ಕೊಬ್ಬು ನಷ್ಟದ ನಡುವೆ ಗೊಂದಲಕ್ಕೊಳಗಾಗುವುದು ಸಾಮಾನ್ಯವಾಗಿದೆ. ಅನೇಕರು, ಈ ಎರಡು ಪದಗಳು ಒಂದೇ ಆಗಿರುತ್ತವೆ ಎಂದು ನಂಬಿದ್ದಾರೆ. ಏಕೆಂದರೆ ಇವುಗಳು ದೇಹಕ್ಕೆ ಸಂಬಂಧಿಸಿದ್ದಾಗಿದ್ದು, ಬಾಹ್ಯ ಸೌಂದರ್ಯವನ್ನು ಪ್ರತಿನಿಧಿಸುತ್ತದೆ. ಒಂದು ಅರ್ಥದಲ್ಲಿ ಇವೆರಡು ಒಂದೆ. ಆದರೆ ವೈಜ್ಞಾನಿಕವಾಗಿ ಇದನ್ನು ಪರಿಗಣಿಸಿದಾಗ ಈ ಎರಡು ಪದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ.

1. ತೂಕ ನಷ್ಟ vs ಕೊಬ್ಬು ನಷ್ಟ ತೂಕ ನಷ್ಟವು ಕಿಲೋಗಳ ಒಟ್ಟಾರೆ ಕುಸಿತವನ್ನು ಸೂಚಿಸುತ್ತದೆ. ಇದರಲ್ಲಿ ಸ್ನಾಯು, ಕೊಬ್ಬು ಮತ್ತು ನೀರು ಸೇರಿವೆ. ಮತ್ತೊಂದೆಡೆ, ಕೊಬ್ಬಿನ ನಷ್ಟವು ಅದರ ಅಪೇಕ್ಷಿತ ಗುರಿಯನ್ನು ತಲುಪಲು ದೇಹದಿಂದ ಕೊಬ್ಬನ್ನು ಸುಡುವುದಾಗಿದೆ. ಇವೆರಡೂ ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಆದರೆ ನಾವು ಆರೋಗ್ಯದ ದೃಷ್ಟಿಕೋನದಿಂದ ಹೋಲಿಸಿದರೆ, ದೀರ್ಘಾವಧಿಯಲ್ಲಿ ತೂಕ ನಷ್ಟಕ್ಕಿಂತ ಕೊಬ್ಬಿನ ನಷ್ಟವು ತುಂಬಾ ಉತ್ತಮವಾಗಿದೆ.

2. ತೂಕ ಅಥವಾ ಕೊಬ್ಬು ಎಷ್ಟಿದೆ ಎಂದು ಕಂಡುಹಿಡಿಯುವುದು ಹೇಗೆ? ದೇಹದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ನಿಮ್ಮ ಪ್ರಗತಿಯನ್ನು ಪತ್ತೆಹಚ್ಚಲು ಹಲವು ಮಾರ್ಗಗಳಿವೆ. ಅವುಗಳಲ್ಲಿ ಸಾಮಾನ್ಯವಾದದ್ದು ತೂಕದ ಯಂತ್ರ. ಒಂದು ನಿರ್ದಿಷ್ಟ ಅವಧಿಯಲ್ಲಿ ಕಳೆದುಕೊಂಡಿರುವ ತೂಕದ ಮೇಲೆ ನಿಗಾ ಇಡಲು ಇದು ಸುಲಭವಾದ ಮಾರ್ಗವಾಗಿದೆ.

ಅದಾಗ್ಯೂ,  ಕೊಬ್ಬು ನಮ್ಮ ದೇಹದಲ್ಲಿ ಎಷ್ಟಿದೆ ಎಂದು ತಿಳಿಯಲು ದೇಹದ ಕೊಬ್ಬಿನ ಪ್ರಮಾಣ ಅಥವಾ ಜೈವಿಕ ವಿದ್ಯುತ್ ಪ್ರತಿರೋಧ ಮಾಪಕ ಅಥವಾ ಕ್ಯಾಲಿಪರ್‌ಗಳಂತಹ ತೂಕ ಅಳೆಯುವ ಇತರ ವಿಧಾನಗಳನ್ನು ನೀವು ಆರಿಸಬೇಕಾಗುತ್ತದೆ.

3. ಕೊಬ್ಬು ನಷ್ಟದ ಮೇಲೆ ಏಕೆ ಗಮನ ಹರಿಸಬೇಕು? ನಮ್ಮ ದೇಹವು ಕೊಬ್ಬು, ಕೊಬ್ಬು ರಹಿತ ದ್ರವ್ಯರಾಶಿಯಂತಹ ಅನೇಕ ಘಟಕಗಳಿಂದ ಕೂಡಿದೆ. ಇದರಲ್ಲಿ ಸ್ನಾಯು, ಮೂಳೆ, ನೀರು, ಅಂಗಗಳು ಮತ್ತು ಇತರವು ಸೇರಿವೆ. ಇದೆಲ್ಲವೂ ದೇಹದಲ್ಲಿ ಸಮಾನ ಪ್ರಮಾಣದಲ್ಲಿರಬೇಕು.

ದೇಹದಲ್ಲಿ ಕೊಬ್ಬಿನ ಶೇಕಡಾವಾರು ಹೆಚ್ಚಾದಾಗ, ನೀವು ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಂತಹ ರೋಗಗಳಿಗೆ ತುತ್ತಾಗುತ್ತೀರಿ. ದೇಹದಲ್ಲಿನ ಕೊಬ್ಬಿನ ಶೇಕಡಾವಾರು, ಚಟುವಟಿಕೆಯ ಮಟ್ಟ ಮತ್ತು ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ. ಆದರೆ ಆರೋಗ್ಯಕರ ಕೊಬ್ಬಿನ ಶೇಕಡಾವಾರು ಪ್ರಮಾಣವು ಅಪಾಯವನ್ನು ಕಡಿಮೆ ಮಾಡುತ್ತದೆ.

4. ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ? ಕೊಬ್ಬನ್ನು ಕಡಿಮೆ ಮಾಡುವುದು ದೀರ್ಘಾವಧಿವರೆಗೆ ತೂಕ ಸಮತೋಲನದಲ್ಲಿರಲು ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ. ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೂಕ ನಷ್ಟಕ್ಕೆ ಹೋಲಿಸಿದರೆ, ಕೊಬ್ಬಿನ ನಷ್ಟವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಧಿಕ ಕೊಬ್ಬನ್ನು ಕಳೆದುಕೊಳ್ಳಲು ಈ ಮಾರ್ಗಗಳನ್ನು ಅನುಸರಿಸಿ.

ಹೆಚ್ಚು ಪ್ರೋಟೀನ್ ಸೇವಿಸಿ ನಮ್ಮ ದೇಹದ ಪ್ರತಿಯೊಂದು ಕೋಶವು ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಆಹಾರದಲ್ಲಿ ಹೆಚ್ಚು ಪ್ರೋಟೀನ್ ಸೇರಿಸುವುದರಿಂದ ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಬಹುದು ಮತ್ತು ಕೊಬ್ಬನ್ನು ಕಡಿಮೆ ಮಾಡಬಹುದು.

ವ್ಯಾಯಾಮ ಮಾಡಿ ಸಮಯ ಸಿಕ್ಕಾಗ ವ್ಯಾಯಾಮ ಮಾಡಿ. ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ನಿಮಗೆ ತೆಳ್ಳಗಿನ ದ್ರವ್ಯರಾಶಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Aloe Vera Benefits: ನಿತ್ಯ ಸೇವಿಸುವ ಆಹಾರದ ಜತೆಗೆ ಅಲೋವೆರಾ ಬಳಕೆ ಹೇಗೆ?

Health Tips: ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಇದೆಯೇ? ಈ ಆಹಾರ ಪದ್ಧತಿಯನ್ನು ಅನುಸರಿಸಿ