Aloe Vera Benefits: ನಿತ್ಯ ಸೇವಿಸುವ ಆಹಾರದ ಜತೆಗೆ ಅಲೋವೆರಾ ಬಳಕೆ ಹೇಗೆ?

ಅನೇಕ ಜನರು ಅಲೋವೆರಾ ಮತ್ತು ಅದರ ಉತ್ಪನ್ನಗಳನ್ನು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಮಾತ್ರ ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿಯೂ ಬಳಸಲಾಗುತ್ತದೆ.

Aloe Vera Benefits: ನಿತ್ಯ ಸೇವಿಸುವ ಆಹಾರದ ಜತೆಗೆ ಅಲೋವೆರಾ ಬಳಕೆ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on:Sep 26, 2021 | 8:05 AM

ಅಲೋವೆರಾ ಅತ್ಯಂತ ಪ್ರಸಿದ್ಧ ಮತ್ತು ವ್ಯಾಪಕವಾಗಿ ಬಳಸುವ ಸಸ್ಯಗಳಲ್ಲಿ ಒಂದಾಗಿದೆ. ಇದು ಔಷಧೀಯ ಮತ್ತು ಅನೇಕ ಆರೋಗ್ಯಕರ ಪ್ರಯೋಜನಗಳಿಂದ ಹೆಸರುವಾಸಿಯಾಗಿದೆ. ಇದು ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಚರ್ಮ ಮತ್ತು ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅಲೋವೆರಾವನ್ನು ಮನೆಯ ಅಂಗಳದಲ್ಲಿ ಮತ್ತು ತೋಟಗಳಲ್ಲಿ ಬೆಳೆಯಲಾಗುತ್ತದೆ. ಇದು ಸುಲಭವಾಗಿ ಮತ್ತು ತ್ವರಿತವಾಗಿ ಬೆಳೆಯುತ್ತದೆ. ಅಲೋವೆರಾ ಬೆಳೆಯಲು ಕನಿಷ್ಠ ಕಾಳಜಿ ಬೇಕು.

ಅನೇಕ ಜನರು ಅಲೋವೆರಾ ಮತ್ತು ಅದರ ಉತ್ಪನ್ನಗಳನ್ನು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಮಾತ್ರ ಬಳಸುತ್ತಾರೆ. ಆದರೆ ಇದನ್ನು ಹೆಚ್ಚಾಗಿ ಆಹಾರ ಪದಾರ್ಥಗಳಲ್ಲಿಯೂ ಬಳಸಲಾಗುತ್ತದೆ. ನಿಮ್ಮ ಆಹಾರದಲ್ಲಿ ಅಲೋವೆರಾವನ್ನು ನೀವು ಹೇಗೆ ಸೇರಿಸಿಕೊಳ್ಳಬಹುದು ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿಯುವುದು ಸೂಕ್ತ.

ಅಲೋವೆರಾದ ಆರೋಗ್ಯ ಪ್ರಯೋಜನಗಳು ಅಲೋವೆರಾ ಅನೇಕ ಆ್ಯಂಟಿಆಕ್ಸಿಡೆಂಟ್​ ಮತ್ತು ಉರಿಯೂತದ ಗುಣಗಳನ್ನು ದೂರ ಮಾಡುವ ಗುಣ ಹೊಂದಿದೆ. ಏಕೆಂದರೆ ಇದು ಸಸ್ಯ ಸಂಯುಕ್ತ ಪಾಲಿಫಿನಾಲ್​ನಿಂದ ಕೂಡಿದೆ. ಅಲೋವೆರಾ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಅಲೋವೆರಾ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾದ ಮಟ್ಟವನ್ನು ಹೆಚ್ಚಿಸುತ್ತದೆ.

ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಅಧ್ಯಯನದ ಪ್ರಕಾರ, ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವ ಮೂಲಕ ಅಲೋವೆರಾ ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಕಾರಿ ಅಲೋವೆರಾವನ್ನು ಸೇವಿಸುವುದರಿಂದ ವ್ಯಕ್ತಿಯ ತೂಕವನ್ನು ನಿಯಂತ್ರಿಸಬಹುದು.  ಇದರ ಜೆಲ್ ನಿರ್ವಿಶೀಕರಣ, ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ . ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲೋವೆರಾವನ್ನು ಹೇಗೆ ಸೇವಿಸುವುದು? ಅಲೋವೆರಾ ಜ್ಯೂಸ್​ ಅಲೋವೆರಾವನ್ನು ಸೇವಿಸಲು ಸುಲಭವಾದ ಮಾರ್ಗವೆಂದರೆ ಅದರ ಜ್ಯೂಸ್.  ಅಲೋವೆರಾ ಎಲೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಎಲೆಯ ಮೇಲಿನ ಹಸಿರು ಪದರವನ್ನು ತೆಗೆದುಹಾಕಿ. ನಂತರ ಜೆಲ್ ಅನ್ನು ತೆಗೆಯಿರಿ. ಜೆಲ್ ಅನ್ನು ತೊಳೆಯಿರಿ ಮತ್ತು ಅದನ್ನು ಸೋಸಿ. ಬಳಿಕ ಎಳನೀರು, ಸ್ವಲ್ಪ ಜೇನುತುಪ್ಪ ಹಾಕಿ ಜ್ಯೂಸ್​ ಮಾಡಿ. ಇದರ ಹೊರತಾಗಿ ಸೇಬು ಅಥವಾ ಸೌತೆಕಾಯಿ ಜ್ಯೂಸ್​ ಅನ್ನು ಇದಕ್ಕೆ ಸೇರಿಸಬಹುದು.

ಸಲಾಡ್‌ಗೆ ಸೇರಿಸಿ ಅಲೋವೆರಾ ಎಲೆಗಳನ್ನು ತೊಳೆದು, ಕತ್ತರಿಸಿ ಸಲಾಡ್ ಆಗಿ ಸೇರಿಸಿ ಅವುಗಳನ್ನು ಸೇವಿಸಬಹುದು. ಅಲೋವೆರಾ ಜೆಲ್ ಅನ್ನು ಸಲಾಡ್​ಗೆ ಸೇರಿಸಬಹುದು. ಇದರ ಜೆಲ್​ ಅನ್ನು  ಸುಲಭವಾಗಿ ಆಲಿವ್ ಎಣ್ಣೆ, ವಿನೆಗರ್ ನಂತಹ ಪದಾರ್ಥಗಳೊಂದಿಗೆ ಬೆರೆಸಬಹುದು.

 ಐಸ್ ಕ್ಯೂಬ್ ಅಲೋವೆರಾ ಜೆಲ್ ಅನ್ನು ಐಸ್ ಕ್ಯೂಬ್ ಟ್ರೇಗೆ ಸುರಿಯಬಹುದು ಮತ್ತು ಫ್ರಡ್ಜ್​ ಅಲ್ಲಿ ಇಟ್ಟು ಬಳಸಬಹುದು. ಈ ರೀತಿ ಐಸ್​ ಕ್ಯೂಬ್​ ಅನ್ನು ಮೊಡವೆಗಳ ಮೇಲೆ ಇಡುವುದರಿಂದ ಮೊಡವೆ ಬೇಗ ಗುಣವಾಗುತ್ತದೆ.

ಇದನ್ನೂ ಓದಿ: Mushrooms: ಅಣಬೆ ಸೇವನೆ ನಮ್ಮ ದೇಹದ ಆರೋಗ್ಯಕ್ಕೆ ಎಷ್ಟು ಮುಖ್ಯ?

ಮನೆಯಲ್ಲೇ ತಯಾರಿಸಿ ಅಲೋವೆರಾ ಎಣ್ಣೆ; ಇದರ ಪ್ರಯೋಜನಗಳೇನು?

Published On - 8:01 am, Sun, 26 September 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್