ಭಾರಿ ಮಳೆಯಿಂದ ಪಕ್ಕಕ್ಕೆ ವಾಲಿದೆ ಗೌರಮ್ಮ ಲೇ ಔಟ್ನಲ್ಲಿನ ರಾಜಾಕಾಲುವೆ ಪಕ್ಕದ 3-ಅಂತಸ್ತಿನ ಕಟ್ಟಡ
ಈ ಮನೆಯ ಪಕ್ಕದಲ್ಲೇ ರಾಜಾ ಕಾಲುವೆ ಹರಿದು ಹೋಗುತ್ತದೆ. ಕಟ್ಟಡ ಹೆಚ್ಚು ಕಡಿಮೆ ಅದಕ್ಕೆ ಅಂಟಿಕೊಂಡೇ ಇದೆ. ರಾಜಕಾಲುವೆ ಹತ್ತಿರ ಅಥವಾ ಅಂಟಿಕೊಂಡಂತೆ ಕಟ್ಟಡ ನಿರ್ಮಿಸಬಾರದೆನ್ನುವ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ.
ಬೆಂಗಳೂರು ಮಹಾನಗರದಲ್ಲಿ ಬಹುಮಹಡಿ ಕಟ್ಟಡಗಳು ವಾಲುವುದು, ಕುಸಿಯುವುದು ಸಾಮಾನ್ಯವಾಗಿ ಬಿಟ್ಚಿದೆ. ವಾರದಲ್ಲಿ ಒಂದೆರಡು ಪ್ರಕರಣಗಳು ವರದಿಯಾಗುತ್ತಿವೆ. ಈ ಅನಾಹುತಗಳಿಗೆ ಅವಾಂತಕಾರಿಯಾಗಿ ಸುರಿಯುವ ಮಳೆ ಒಂದು ಕಾರಣವಾದರೆ ಎರಡಂತಸ್ತು ಕಟ್ಟಡಕ್ಕೆ ಅನುಮತಿ ಪಡೆದು ನಾಲ್ಕು ಅಂತ್ತಸ್ತಿನ ಕಟ್ಟಡ ಕಟ್ಟುವುದು, ಕಳಪೆ ಕಾಮಗಾರಿಗಳೂ ಕಾರಣವಾಗುತ್ತಿವೆ.
ಈ ವಿಡಿಯೋನಲ್ಲಿರುವ ಮನೆಯನ್ನೊಮ್ಮೆ ನೋಡಿ. ನೋಡೋದಿಕ್ಕೆ ಸುಂದರವೆನಿಸುವ ಮೂರು ಅಂತಸ್ತಿನ ಕಟ್ಟಡವಿದು. ನಾಗರಭಾವಿ ಡಿ ಗ್ರೂಪ್ ಗೌರಮ್ಮ ಲೇಔಟ್ನಲ್ಲಿ ಈ ಮನೆಯಿದೆ. ಇದು ಯಾರಿಗೆ ಸೇರಿದ್ದು ಅನ್ನೋದು ನಮಗೆ ಬೇಡ. ಎಲ್ಲ ಸರಿಯಾಗಿದೆ, ಯಾಕೆ ತೋರಿಸುತ್ತಿದ್ದಾರೆ ಅಂತ ನಿಮಗೆ ಅನಿಸಬಹುದು.
ಅಸಲಿಗೆ ವಿಷಯವೇನೆಂದರೆ, ರವಿವಾರ ಸುರಿದ ಭಾರಿ ಮಳೆಯಿಂದಾಗಿ ಈ ಕಟ್ಟಡದ ಒಂದು ಭಾಗದ ಅಡಿಪಾಯ ಅದುರಿದಂತೆ ಕಾಣುತ್ತಿದೆ. ಹಾಗಾಗೇ ಕಟ್ಟದ ಕೊಂಚ ಪಕ್ಕಕ್ಕೆ ವಾಲಿದೆ ಮತ್ತು ಒಂದು ಭಾಗದಲ್ಲಿ ಬಿರುಕು ಬಿಟ್ಟಿದೆ. ಯಾವುದೇ ಅನಾಹುತ ಸಂಭವಿಸಿಲ್ಲವಾದರೂ ಅಪಾಯ ತಪ್ಪಿದ್ದಲ್ಲ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಈ ಮನೆಯ ಪಕ್ಕದಲ್ಲೇ ರಾಜಾ ಕಾಲುವೆ ಹರಿದು ಹೋಗುತ್ತದೆ. ಕಟ್ಟಡ ಹೆಚ್ಚು ಕಡಿಮೆ ಅದಕ್ಕೆ ಅಂಟಿಕೊಂಡೇ ಇದೆ. ರಾಜಕಾಲುವೆ ಹತ್ತಿರ ಅಥವಾ ಅಂಟಿಕೊಂಡಂತೆ ಕಟ್ಟಡ ನಿರ್ಮಿಸಬಾರದೆನ್ನುವ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆ.
ಇದನ್ನೂ ಓದಿ: ‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ