AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ

Viral Video: ತೆವಳುತ್ತಾ ಸಾಗುತ್ತಿದ್ದ ನಾಯಿಯೊಂದು, ಇದ್ದಕ್ಕಿದ್ದಂತೆ ಎದ್ದು ನಿಂತು ಎಲ್ಲರನ್ನೂ ಬೇಸ್ತು ಬೀಳಿಸಿದೆ. ನಾಯಿಯ ಅದ್ಭುತಾ ನಟನಾ ಕೌಶಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಏನಿದು ಸುದ್ದಿ? ಇಲ್ಲಿದೆ ಓದಿ.

‘ನಾಯಿ ತೆವಳುತ್ತಿದೆ, ಪಾಪ’ ಎಂದವರನ್ನು ಬೇಸ್ತು ಬೀಳಿಸಿದ ಶ್ವಾನ; ಇದಕ್ಕೆ ಆಸ್ಕರ್ ಕೊಡಬೇಕು ಎಂದ ನೆಟ್ಟಿಗರು: ವಿಡಿಯೊ ನೋಡಿ
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
TV9 Web
| Edited By: |

Updated on: Sep 26, 2021 | 6:42 PM

Share

ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಬಹಳ ಅಪರೂಪದ ಸಂಗತಿಗಳು, ನೋಡುಗರ ಗಮನ ಸೆಳೆಯುತ್ತವೆ. ಯಾವ ಸಮಯದಲ್ಲಿ ಯಾವ ವಿಡಿಯೊ ವೈರಲ್ ಆಗುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಪ್ರಸ್ತುತ ಶ್ವಾನವೊಂದು ಎಲ್ಲರನ್ನೂ ಬೇಸ್ತು ಬೀಳಿಸಿದ ವಿಡಿಯೊ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಅದು ಏನು ಮಾಡಿತು ಅಂತೀರಾ? ಇಲ್ಲಿದೆ ಓದಿ.

ಈ ನಾಯಿಗೆ ಜನರನ್ನು ಆಕರ್ಷಿಸುವ ಕಲೆ ಕರಗತವಾಗಿದೆ. ತನ್ನ ಜಾಣತನದಿಂದ ಎಲ್ಲರ ಗಮನ ಸೆಳೆದ ಈ ನಾಯಿಯ ಚೇಷ್ಟೆ ನೋಡಿದ ವೀಕ್ಷಕರು, ಅಬ್ಬಾ ನಾಯಿಯೇ! ಎಂದು ಉದ್ಗರಿಸಿದ್ದು ಸುಳ್ಳಲ್ಲ. ಕಾರಣ, ಈ ಶ್ವಾನ ಮೊದಲಿಗೆ, ತನ್ನ ನಾಲ್ಕು ಕಾಲುಗಳೊಂದಿಗೆ ನೆಲದಲ್ಲಿ ತೆವಳುವ ಮಾದರಿಯಲ್ಲಿ ಸಾಗುತ್ತಿರುತ್ತದೆ. ಮೊದಲಿಗೆ ನೋಡುವಾಗ, ನಾಯಿಗೆ ಏನೋ ಖಾಯಿಲೆಯಾಗಿ ಕಷ್ಟ ಪಡುತ್ತಿರುವಂತೆ ಕಾಣಿಸುತ್ತದೆ. ಆದರೆ ಸ್ವಲ್ಪ ಸಮಯದ ನಂತರವೇ ಎಲ್ಲರಿಗೂ ನಿಜದ ಅರಿವಾಗುವುದು!

ವಿಡಿಯೊದಲ್ಲಿ ಮೊದಲಿಗೆ ತೆವಳುತ್ತಿರುವ ನಾಯಿ ಇದ್ದಕ್ಕಿದ್ದಂತೆ, ಮಾಮೂಲಿಯಾಗಿ ಎದ್ದು ನಿಲ್ಲುತ್ತದೆ.. ತನಗೇನೂ ಆಗಿಲ್ಲವಂತೆ ನಡೆದು ನೋಡುಗರನ್ನು ಚಕಿತರನ್ನಾಗಿಸುತ್ತದೆ. ಎಲ್ಲರನ್ನೂ ಮಂಗ ಮಾಡುವ ಈ ಕಲೆ ಈ ನಾಯಿಗೆ ಬಹಳ ಕರಗತವಾದಂತಿದೆ. ವೈರಲ್ ಆಗಿರುವ ಈ ವಿಡಿಯೊವನ್ನು ನೋಡಿದ ನೆಟ್ಟಿಗರು, ನಾಯಿಯ ತುಂಟಾಟಕ್ಕೆ ಮೆಚ್ಚಿಕೊಂಡಿದ್ದು ಥರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ನಾಯಿಯ ಈ ವಿಡಿಯೊಗೆ ಬಂದಿರುವ ಕಾಮೆಂಟ್​ಗಳಲ್ಲಿ ಒಬ್ಬರು, ‘ಆ ಶ್ವಾನ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದಿದ್ದಾರೆ. ಇನ್ನೊಬ್ಬರು ವಿಡಿಯೊದಲ್ಲಿ ಕಾಣುವ ನಾಯಿ ತುಂಬಾ ಬುದ್ಧಿವಂತ ಎಂದು ಬರೆದಿದ್ದಾರೆ. ‘ಇಂತಹ ಸಾಕುಪ್ರಾಣಿಯು ಎಲ್ಲರ ಮನೆಯಲ್ಲಿ ಇರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಓರ್ವ ಬಳಕೆದಾರರಂತೂ ಇನ್ನೂ ಮುಂದಕ್ಕೆ ಹೋಗಿ, ‘ಈ ‘ಕೋಳಿಗೆ’ ಆಸ್ಕರ್ ಸಿಗಬೇಕು’ ಎಂದು ಬರೆದಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಲು ಈ ಶ್ವಾನ ಕಾರಣವಾಗಿರುವುದಂತೂ ಹೌದು.

ಇದನ್ನೂ ಓದಿ:

Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ

(a dog act like it does not able to walk but then there is shocking for viewer watch the video)

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ