Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!

Trending: ಕೇವಲ ಹತ್ತು ನಿಮಿಷದ ಅವಧಿಗೆ ಶಾಪಿಂಗ್​ಗೆಂದು ಜೀಪ್ ನಿಲ್ಲಿಸಿ ಹೋದ ವ್ಯಕ್ತಿಯೊಬ್ಬರಿಗೆ, ಮರಳಿದಾಗ ಅಚ್ಚರಿ ಎದುರಾಗಿದೆ. ಕಾರಣ, ಅವರ ಜೀಪಿನಲ್ಲಿ ಅವರನ್ನು ಜೇನು ನೊಣಗಳು ಎದುರುಗೊಂಡಿವೆ.

Viral Video: ಶಾಪಿಂಗ್​ಗೆಂದು 10 ನಿಮಿಷ ಜೀಪ್ ನಿಲ್ಲಿಸಿ ಹೋದ ವ್ಯಕ್ತಿ; ಮರಳಿದಾಗ ಎದುರುಗೊಂಡಿದ್ದು ಜೇನುನೊಣಗಳು!
ಜೀಪ್​ನೊಳಗೆ ಬಂದು ಕುಳಿತಿದ್ದ ಜೇನು ನೊಣಗಳು

ಜೇನುನೊಣಗಳು ದಾಳಿ ಮಾಡಿದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ವಿವರವಾಗಿ ಹೇಳುವ ಅಗತ್ಯವಿಲ್ಲ. ಕಾರಣ, ಅವುಗಳ ದಾಳಿಯಲ್ಲಿ ಪ್ರಾಣಹಾನಿ ಕೂಡ ಸಂಭವಿಸಿದ ಉದಾಹರಣೆಗಳಿವೆ. ಜೇನುನೊಣಗಳು ಮೊಟ್ಟೆಯೊಡೆಯುವವರೆಗೂ ಯಾರಿಗೂ ಹಾನಿ ಮಾಡುವುದಿಲ್ಲ. ‘ರಾಣಿ’ ನೊಣವು ಗೂಡಿನ ಇತರ ಎಲ್ಲಾ ನೊಣಗಳನ್ನು ರಕ್ಷಿಸುತ್ತದೆ. ಆದರೆ, ಯಾರಾದರೂ ಗೂಡಿಗೆ ತೊಂದರೆ ಮಾಡಿದರೆ ಅವುಗಳು ದಾಳಿ ಮಾಡುತ್ತವೆ. ಜೇನುನೊಣಗಳು ಹೆಚ್ಚಾಗಿ ತಮ್ಮ ಗೂಡುಗಳನ್ನು ತಂಪಾದ, ಬೆಚ್ಚಗಿರುವ ಸ್ಥಳಗಳಲ್ಲಿ ಸ್ಥಾಪಿಸುತ್ತವೆ. ಇತ್ತೀಚೆಗೆ ಜೇನುನೊಣಗಳು ರಸ್ತೆಯಲ್ಲಿ ನಿಲ್ಲಿಸಿದ ಜೀಪಿನಲ್ಲಿ ಗೂಡು ಕಟ್ಟಲು ತಯಾರಾಗಿದ್ದವು. ಅದು ಕೂಡ ಕೇವಲ 10 ನಿಮಿಷಗಳಲ್ಲಿ. ಇದೇನು ಅಚ್ಚರಿ ಅಂತೀರಾ, ಮುಂದೆ ಓದಿ.

ರಿಜ್ವಾನ್ ಖಾನ್ ಎಂಬುವವರು ತಮ್ಮ ಜೀಪನ್ನು ಸಿಡ್ನಿಯ ಲಕೆಂಬಾದ ಹೋಲ್ಡನ್ ಸ್ಟ್ರೀಟ್‌ನಲ್ಲಿ ನಿಲ್ಲಿಸಿ ಹತ್ತಿರದ ಅಂಗಡಿಯೊಂದಕ್ಕೆ ತೆರಳಿದ್ದಾರೆ.ಶಾಪಿಂಗ್ ಮುಗಿಸಿ 10 ನಿಮಿಷಗಳ ನಂತರ ಕಾರಿನ ಬಳಿಗೆ ಬಂದಾಗ ಅವರಿಗೆ ಆಘಾತವಾಗಿದೆ. ಕಾರಣ, ಅಷ್ಟು ಸಣ್ಣ ಸಮಯದಲ್ಲೇ ಬಹಳಷ್ಟು ಜೇನು ನೊಣಗಳು ಜೀಪಿನ ಒಳ ಪ್ರವೇಶಿಸಿ, ಗುಂಪು ಗೂಡಿದ್ದವು. ಗೂಡು ಕಟ್ಟಲು ಸ್ಥಳ ಅರಸುತ್ತಿದ್ದ ಅವುಗಳಿಗೆ ರಿಜ್ವಾನ್ ಅವರ ಜೀಪ್ ಸೂಕ್ತವಾದದ್ದು ಎನ್ನಿಸಿರಬೇಕು. ಆದ್ದರಿಂದಲೇ ಒಳ ಪ್ರವೇಶಿಸಿದ್ದವು. ಆದರೆ ಅವರಿಗೆ ಶಾಕ್ ಆಗಿದೆ.

ನಂತರ ರಿಜ್ವಾನ್ ಅವರು ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ. ಜೊತೆಗೆ ಆ ಸಂದರ್ಭದ ವಿಡಿಯೊವನ್ನೂ ಚಿತ್ರೀಕರಿಸಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ನನಗೆ ಜೇನೆಂದರೆ ಅಷ್ಟಕ್ಕಷ್ಟೇ. ಆದರೆ ಅವುಗಳಿಗೆ ನನ್ನ ಜೀಪ್ ಪ್ರಿಯವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.

ವಿಡಿಯೊ ಇಲ್ಲಿದೆ:

ನಂತರ ಜೇನು ನೊಣಗಳನ್ನು ಏನು ಮಾಡಿದರು ಎಂಬ ಅನುಮಾನಕ್ಕೆ ಅವರೇ ಮತ್ತೊಂದು ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ಸ್ಥಳೀಯ ಜೇನು ಸಾಕಣೆದಾರರೊಬ್ಬರು ಆಗಮಿಸಿ, ಜೇನು ಹುಳಗಳನ್ನು ಜೀಪಿನಿಂದ ಹೊರ ಹಾಕಿದ್ದು, ಪೆಟ್ಟಿಗೆಯಲ್ಲಿ ಸಂಗ್ರಹಿಸಿದ್ದಾರೆ. ಈ ವಿಡಿಯೊ ಕೂಡ ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ:

ಕೈ ನಡಿಗೆಯಿಂದ 20 ಮೀಟರ್ ದೂರವನ್ನು ಕೇವಲ 4.78 ಸೆಕೆಂಡ್​ನಲ್ಲಿ ತಲುಪಿದ ವಿಶೇಷ ಚೇತನ ಯುವಕ; ಗಿನ್ನೆಸ್ ದಾಖಲೆಗೆ ಸೇರ್ಪಡೆ

Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ

Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

(A man stops his jeep and came after 10 min shopping but he witnessed a rare sight in his Jeep watch the video)

Click on your DTH Provider to Add TV9 Kannada