ಕೈ ನಡಿಗೆಯಿಂದ 20 ಮೀಟರ್ ದೂರವನ್ನು ಕೇವಲ 4.78 ಸೆಕೆಂಡ್​ನಲ್ಲಿ ತಲುಪಿದ ವಿಶೇಷ ಚೇತನ ಯುವಕ; ಗಿನ್ನೆಸ್ ದಾಖಲೆಗೆ ಸೇರ್ಪಡೆ

Guinness World Records: ಅಮೇರಿಕಾದ ಈ ಉತ್ಸಾಹಿ ಯುವಕ ಅಪರೂಪದ ಸಾಧನೆ ಮಾಡಿದ್ದಾನೆ. ಆ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್​​​ನಲ್ಲಿ ಆತನ ಹೆಸರು ಸೇರ್ಪಡೆಗೊಂಡಿದೆ. ಆ ಸಾಧನೆ ಯಾವುದು? ಯುವಕನ ಮುಂದಿನ ಕನಸುಗಳೇನು? ಇಲ್ಲಿದೆ ಮಾಹಿತಿ.

ಕೈ ನಡಿಗೆಯಿಂದ 20 ಮೀಟರ್ ದೂರವನ್ನು ಕೇವಲ 4.78 ಸೆಕೆಂಡ್​ನಲ್ಲಿ ತಲುಪಿದ ವಿಶೇಷ ಚೇತನ ಯುವಕ; ಗಿನ್ನೆಸ್ ದಾಖಲೆಗೆ ಸೇರ್ಪಡೆ
ಜಿಯಾನ್ ಕ್ಲಾರ್ಕ್ (Credits: Guinness world records website)
Follow us
TV9 Web
| Updated By: shivaprasad.hs

Updated on:Sep 26, 2021 | 2:36 PM

ವಿಶ್ವದಾದ್ಯಂತ ವಿಶೇಷ ಚೇತನರು ತಮ್ಮ ವೈವಿಧ್ಯಮಯ ಪ್ರತಿಭೆಯಿಂದ ಸಾಧಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಸಾಲಿಗೆ ಕನಸು ಕಂಗಳ ಯುವಕನೊಬ್ಬನ ಪ್ರವೇಶವಾಗಿದೆ. ಇನ್ಸ್ಟಾಗ್ರಾಂನಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್(GWR) ಪೇಜ್​ನಲ್ಲಿ ಒಂದು ಅಪರೂಪದ ದಾಖಲೆಯ ದೃಶ್ಯವನ್ನು ಹಂಚಿಕೊಳ್ಳಲಾಗಿದ್ದು, ವೀಕ್ಷಕರಿಗೆ ಸ್ಫೂರ್ತಿ ತುಂಬುವಂತಿದೆ. ವಿಶೇಷ ಚೇತನ ಯುವಕ ಜಿಯಾನ್ ಕ್ಲಾರ್ಕ್, ತಮ್ಮ ಕೈಗಳ ಮುಖಾಂತರ ನಡೆದು ದಾಖಲೆ ಸೃಷ್ಟಿಸಿದ್ದಾರೆ. ಕೈಗಳ ಮುಖಾಂತರ ನಡೆಯುವುದರಲ್ಲಿ ಏನು ವಿಶೇಷ ದಾಖಲೆ ಅಂತೀರಾ? ಇಲ್ಲಿದೆ ಓದಿ.

ಅಮೇರಿಕಾದ ಜಿಯಾನ್ ಕ್ಲಾರ್ಕ್ ಅವರಿಗೆ ಕಾಲುಗಳಿಲ್ಲ. ಅವರು ತಮ್ಮ ಕೈಗಳಿಂದ ನಡೆಯುತ್ತಾರೆ. ಅವರು ಬರೀ ನಡೆಯುವುದಲ್ಲ, ತಮ್ಮ ವೇಗಕ್ಕೆ, ಪ್ರತಿಭೆಗೆ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ. 20 ಮೀಟರ್ ದೂರವನ್ನು ಕೇವಲ 4.78 ಸೆಕೆಂಡ್ಸ್​​ಗಳಲ್ಲಿ ಕೈಗಳ ಮುಖಾಂತರ ಕ್ರಮಿಸಿರುವ ಅವರು, ಎಲ್ಲರ ಹುಬ್ಬೇರಿಸಿದ್ದಾರೆ. ಈ ದಾಖಲೆಯು 2021ರ ಫೆಬ್ರವರಿಯಲ್ಲಿ ನಿರ್ಮಾಣವಾಗಿದೆ.

ಅಮೆರಿಕಾದ ಓಹಿಯೋ ನಗರದ ಜಿಯಾನ್ ಕ್ಲಾರ್ಕ್ ಅವರಿಗೆ ಹುಟ್ಟುವಾಗಿನಿಂದ ಕಾಡಲ್ ರಿಗ್ರೆಷನ್ ಸಿಂಡ್ರೋಮ್​ ಇತ್ತು. ಇದರಿಂದಾಗಿ ದೇಹದ ಕೆಳಗಿನ ಭಾಗಗಳು ಬೆಳವಣಿಗೆಯಾಗದ ಕಾರಣ, ಅವರಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕುಸ್ತಿ, ವೀಲ್ ಚೇರ್ ರೇಸಿಂಗ್ ಸೇರಿದಂತೆ ವಿವಿಧ ಆಟಗಳಲ್ಲಿ ಛಲದಿಂದ ಪರಿಣತಿ ಹೊಂದಿರುವ ಅವರು, ಇದೀಗ ಕೈಗಳ ಮುಖಾಂತರ ನಡಿಗೆಯಿಂದ ಗಿನ್ನೆಸ್ ದಾಖಲೆಯ ಪಟ್ಟಿ ಸೇರಿದ್ದಾರೆ. ಅವರ ಕನಸೇನು ಎಂಬುದನ್ನೂ, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. 2024ರಲ್ಲಿ ನಡೆಯುವ ಪ್ಯಾರಾಲಿಂಪಿಕ್ಸ್​ನಲ್ಲಿ ಕುಸ್ತಿ, ವೀಲ್ ಚೇರ್ ರೇಸಿಂಗ್​ನಲ್ಲಿ ಅಮೇರಿಕಾವನ್ನು ಪ್ರತಿನಿಧಿಸುವುದು ಅವರ ಗುರಿಯಾಗಿದೆ. ಆ ಕನಸಿಗೆ ನಾವೂ ಶುಭ ಹಾರೈಸೋಣ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಅವರ ದಾಖಲೆಯ ವಿಡಿಯೊ:

ಜಿಯಾನ್ ಅವರ ಗಿನ್ನೆಸ್ ದಾಖಲೆಯ ವಿಡಿಯೊಗೆ ಸದ್ಯ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅತ್ಯಂತ ಅಪರೂಪದ ಪ್ರತಿಭೆ ಎಂದು ಓರ್ವರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು- ‘ನಿಮ್ಮ ಛಲಕ್ಕೆ ನಮನ’ ಎಂದು ಬರೆದಿದ್ದಾರೆ.

ಕುಸ್ತಿಯಲ್ಲಿ ಜಿಯಾನ್:

View this post on Instagram

A post shared by Zion Clark (@big_z_2020)

ಗಿನ್ನೆಸ್ ದಾಖಲೆಯನ್ನು ಸಾಧಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜಿಯಾನ್, ‘‘ನನಗೆ ತಿಳಿಯುವುದಕ್ಕೆ ಮೊದಲೇ, ಗುರಿಯನ್ನು ತಲುಪಿದ್ದೆ. ಅವರು 4.78 ಸೆಕೆಂಡ್ಸ್​ನಲ್ಲಿ ಗುರಿ ತಲುಪಿದ್ದೆ ಎಂದಾಗ ರೋಮಾಂಚನವಾಯಿತು. ಆ ಆನಂದವನ್ನು ವಿವರಿಸುವುದಕ್ಕೆ ಸಾಧ್ಯವಿಲ್ಲ’’ ಎಂದಿದ್ದಾರೆ.

ಇದನ್ನೂ ಓದಿ:

Viral Video: ಅಳಿಲಿಗೆ ಆಟ, ಬೆಕ್ಕಿಗೆ ಸಂಕಟ!; ಇದೇನಿದು ಹೊಸ ಗಾದೆ? ತಮಾಷೆಯ ಈ ವಿಡಿಯೊ ನೋಡಿ

Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ

(Zion Clark made a record in 20m hand walk here is the video and his inspiration story)

Published On - 2:26 pm, Sun, 26 September 21

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್