Video: ರೈಲಿನ ಒಳಗೆ ಸಂಗೀತ ರಸಮಂಜರಿ! ಗಿಟಾರ್ ಹಾಗೂ ಸ್ಯಾಕ್ಸೋಫೋನ್ ಮೋಡಿಗೆ ಪ್ರಯಾಣಿಕರು ಫಿದಾ
Viral Video: ಸಾರ್ವಜನಿಕ ಸ್ಥಳದಲ್ಲಿ ಅಚಾನಕ್ ಆಗಿ ಸಂಗೀತ ಕೇಳಿದರೆ ಹೇಗೆ? ಎಷ್ಟು ವಿಶೇಷ ಅನಿಸಬಹುದು. ಅಂತಹ ಒಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಇಬ್ಬರು ಯುವಕರು ಹಾಗೂ ಕೆಲವಷ್ಟು ಸಂಗೀತ ಪರಿಕರಗಳು. ಇಷ್ಟರ ಜೊತೆಯಾಗಿ ಖುಷಿಖುಷಿಯಾಗಿ ಸಂಗೀತ ಸವಿಯುವ ಅವಕಾಶ ರೈಲಿನ ಸಹಪ್ರಯಾಣಿಕರಿಗೆ. ಇಂತಹದೊಂದು ಸನ್ನಿವೇಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನಿಮಗೂ ಇಷ್ಟವಾಗುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ.
ಸಂಗೀತ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರೂ ಒಂದಲ್ಲಾ ಒಂದುರೀತಿಯಲ್ಲಿ ಯಾವುದೋ ವಿಧದ, ಶೈಲಿಯ ಸಂಗೀತ ಇಷ್ಟಪಡುವವರೇ ಆಗಿರುತ್ತಾರೆ. ಅದರಲ್ಲೂ ಸಾರ್ವಜನಿಕ ಸ್ಥಳದಲ್ಲಿ ಅಚಾನಕ್ ಆಗಿ ಸಂಗೀತ ಕೇಳಿದರೆ ಹೇಗೆ? ಎಷ್ಟು ವಿಶೇಷ ಅನಿಸಬಹುದು. ಅಂತಹ ಒಂದು ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಮ್ಯೂಸಿಕ್ ನುಡಿಸಿದವರನ್ನು ಕಫೆಲೆ ಹಾಗೂ ಬಾರ್ತೊಲೊಮಿಯೋ ಎಂದು ಹೇಳಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದು ನೆಟ್ಟಿಗರ ಮನಗೆದ್ದಿದೆ. ಅದರಲ್ಲಿ ರೈಲಿನ ಒಳಭಾಗದಲ್ಲಿ ಇಬ್ಬರು ಕೆಲವಾರು ಸಂಗೀತ ಪರಿಕರ ಬಳಸಿ ಒಂದು ಟ್ಯೂನ್ ನುಡಿಸುತ್ತಿರುತ್ತಾರೆ. ಸ್ಯಾಕ್ಸೋಫೋನ್ ಹಾಗೂ ಗಿಟಾರ್ ಬಳಸಿ ಟ್ಯೂನ್ ನುಡಿಸುತ್ತಿರುತ್ತಾರೆ. ವಿಶೇಷ ವಿಡಿಯೋ ಇಲ್ಲಿದೆ ನೋಡಿ.
View this post on Instagram
ಈ ಪೋಸ್ಟ್ನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾಗಿದೆ. ಪೋಸ್ಟ್ ಶೇರ್ ಮಾಡಿದ ಬಳಿಕ ಸುಮಾರು 89,000 ವ್ಯೂವ್ ಪಡೆದುಕೊಂಡಿದೆ. ವಿಡಿಯೋಗೆ ನೋಡುಗರು ವಿವಿಧ ಕಮೆಂಟ್ಗಳನ್ನು ಕೂಡ ಮಾಡಿದ್ದಾರೆ. ತುಂಬಾ ಚೆನ್ನಾಗಿದೆ. ಅಮೇಜಿಂಗ್. ಸೂಪರ್ ಎಂದು ಇತ್ಯಾದಿ ಕಮೆಂಟ್ ಮೂಲಕ ವಿಡಿಯೋಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Video: ಬೀದಿನಾಯಿ ಒಂದಕ್ಕೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ; ಆಪ್ತ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ದೆವ್ವ ವದಂತಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇಲ್ಲಿದೆ