AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ. ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ […]

Uttar Pradesh: ಬಿಜೆಪಿ ಸಂಸದನಿಗೆ ಥಳಿಸಿದ ಸಾರ್ವಜನಿಕರು; ತಪ್ಪಿಸಿಕೊಂಡರೂ ಅಟ್ಟಿಸಿ ಹೋಗಿ ಹಲ್ಲೆ
ಸಂಗಮ್​ ಲಾಲ್​ ಗುಪ್ತಾ
TV9 Web
| Updated By: Lakshmi Hegde|

Updated on:Sep 26, 2021 | 5:29 PM

Share

ಉತ್ತರ ಪ್ರದೇಶದ ಪ್ರತಾಪ್​ ಗಢ್​​ನ ಬಿಜೆಪಿ ಸಂಸದ ಸಂಗಮ್​ ಲಾಲ್​ ಗುಪ್ತಾರಿಗೆ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕರು ಥಳಿಸಿದ್ದಾರೆ. ಸಂಗಮ್​ ಲಾಲ್​ ಅವರು ತಮ್ಮ ಕ್ಷೇತ್ರ ಪ್ರತಾಪ್​ಗಢ್​​ನ ಸಂಗಿಪುರ್​​ ಬ್ಲಾಕ್​​ನಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ಈ ವೇಳೆ ಸಾರ್ವಜನಿಕರ ಗುಂಪೊಂದು ಅವರ ಮೇಲೆ ದಾಳಿ ನಡೆಸಿ, ಹೊಡೆದಿದೆ. ಜನರಿಂದ ತಪ್ಪಿಸಿಕೊಂಡು ವಾಹನ ಹತ್ತಿದರೂ ಬಿಡದೆ, ವಾಹನಕ್ಕೇ ಕಲ್ಲು ಹೊಡೆದಿದ್ದಾರೆ.

ಈ ದಾಳಿ ನಡೆಯಲು ಮುಖ್ಯ ಕಾರಣ  ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ, ಜನಪ್ರತಿನಿಧಿ ಆರಾಧನಾ ಮಿಶ್ರಾ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಆರೋಗ್ಯ ಶಿಬಿರದಲ್ಲಿ ನಡೆದ ಗಲಾಟೆಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರತಾಪ್​ಗಢ್​ ಬಿಜೆಪಿ ಸಂಸದನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ವಾರಾಣಸಿ ಹೆದ್ದಾರಿಯಲ್ಲಿ ಧರಣಿ ನಡೆಸಿ, ಕ್ರಮಕ್ಕೆ ಆಗ್ರಹಿಸಿದ್ದರು.

ಇದಾದ ನಂತರ ಪ್ರತಾಪ್​ಗಡ್​ನ ಲಾಲ್​ಗಂಜ್​ ಪೊಲೀಸ್​ ಠಾಣೆಯಲ್ಲಿ ಕಾಂಗ್ರೆಸ್​ ನಾಯಕ ಪ್ರಮೋದ್​ ತಿವಾರಿ ಮತ್ತು ಅವರ ಪುತ್ರಿ ಆರಾಧನಾ ಮಿಶ್ರ ಮತ್ತು ಅವರ 27 ಬೆಂಬಲಿಗರ ವಿರುದ್ಧ ಹತ್ಯೆ ಯತ್ನ ಪ್ರಕರಣದಡಿ ಎಫ್ಐಆರ್ ದಾಖಲಾಗಿದೆ. ಎಫ್​ಐಆರ್​ ದಾಖಲಾಗುತ್ತಿದ್ದಂತೆ ಬಿಜೆಪಿಗರು ಪ್ರತಿಭಟನೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​, ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವರು ಅಲ್ಲಿನ ವ್ಯವಸ್ಥೆಯಿಂದ ಕಿರಿಕಿರಿಗೊಂಡರು. ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದನನ್ನು ಪ್ರಶ್ನಿಸಿದರು. ಆದರೆ ಸರಿಯಾಗಿ ಉತ್ತರ ಬಾರದೆ ಇದ್ದಾಗ ಸಿಟ್ಟಾಗಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ದೇಸಾಯಿವಾಡೆ: ಶಂಕರ್ ನಾಗ್ ಅವರ ಜೋಕುಮಾರ ಸ್ವಾಮಿ ಚಿತ್ರ ಶೂಟಿಂಗ್ ನಡೆದದ್ದು ಇಲ್ಲೇ

ಸೈಬೀರಿಯಾ ಕಾಡಿನಲ್ಲಿ ರಷ್ಯಾ ಅಧ್ಯಕ್ಷ; ಮೀನು ಹಿಡಿದು, ಗುಡ್ಡ ಹತ್ತಿದ ವ್ಲಾದಿಮಿರ್​ ಪುತಿನ್​ 

(BJP MP Sangam Lal Gupta attacked by public in Pratapgarh Of Uttar Pradesh)

Published On - 5:28 pm, Sun, 26 September 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ