Punjab cabinet expansion ಪಂಜಾಬ್ ಸಚಿವ ಸಂಪುಟದಲ್ಲಿರಲಿದ್ದಾರೆ 15 ಸಚಿವರು; ಮೂವರು ಹೊಸಬರಿಗೆ ಅವಕಾಶ?

Charanjit Singh Channi: ರಾಜ್ಯ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಉಳಿದಿರುವಾಗ ಸಚಿವ ಸಂಪುಟ ವಿಸ್ತರಣೆ ಕ್ರಮವು ಕೈಬಿಡಲ್ಪಟ್ಟವರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ನೂತನ ಸಚಿವ ಸಂಪುಟದಲ್ಲಿ ಹಗರಣ-ಕಳಂಕಿತ ಶಾಸಕರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.

Punjab cabinet expansion ಪಂಜಾಬ್ ಸಚಿವ ಸಂಪುಟದಲ್ಲಿರಲಿದ್ದಾರೆ 15 ಸಚಿವರು; ಮೂವರು ಹೊಸಬರಿಗೆ ಅವಕಾಶ?
ಚರಣ್​​ಜಿತ್ ಸಿಂಗ್ ಚನ್ನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 26, 2021 | 4:35 PM

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ( Charanjit Singh Channi)  ಅವರು ತಮ್ಮ ಹೊಸ ಸಚಿವ ಸಂಪುಟಕ್ಕೆ 15 ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಅವರಲ್ಲಿ ಆರು ಮಂದಿ ಹೊಸಬರಾಗಿದ್ದು ಒಬ್ಬರು ಕನಿಷ್ಠ ಮೂರು ವರ್ಷಗಳ ನಂತರ ಸಚಿವ ಸ್ಥಾನಕ್ಕೆ ಮರಳಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ರಾಜ್ಯ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಉಳಿದಿರುವಾಗ ಸಚಿವ ಸಂಪುಟ ವಿಸ್ತರಣೆ ಕ್ರಮವು ಕೈಬಿಡಲ್ಪಟ್ಟವರಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ನೂತನ ಸಚಿವ ಸಂಪುಟದಲ್ಲಿ ಹಗರಣ-ಕಳಂಕಿತ ಶಾಸಕರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಮೂಲಗಳ ಪ್ರಕಾರ ಇಂದು ಪ್ರಮಾಣವಚನ ಸ್ವೀಕರಿಸುವ 15 ಶಾಸಕರು: ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್, ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಸುಖಬಿಂದರ್ ಸಿಂಗ್ ಸರ್ಕಾರಿಯಾ, ರಾಣಾ ಗುರ್ಜಿತ್ ಸಿಂಗ್, ಅರುಣ ಚೌದರಿ, ರಜಿಯಾ ಸುಲ್ತಾನ, ಭರತ್ ಭೂಷಣ್ ಅಶು, ವಿಜಯ್ ಇಂದರ್ ಸಿಂಗ್ಲಾ , ರಣದೀಪ್ ಸಿಂಗ್ ನಭಾ, ರಾಜ್ ಕುಮಾರ್ ವರ್ಕಾ, ಸಂಗತ್ ಸಿಂಗ್ ಗಿಲ್ಜಿಯಾನ್, ಪರ್ಗತ್ ಸಿಂಗ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಗುಕ್ರಿರತ್ ಸಿಂಗ್ ಕೊಟ್ಲಿ.

ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಸರ್ಕಾರದಲ್ಲಿ “ಕಳಂಕಿತ ರಾಣಾ ಗುರ್ಜಿತ್ ಸಿಂಗ್ ರನ್ನು ಸೇರಿಸುವ ಪ್ರಸ್ತಾಪ” ವಿರೋಧಿಸಿ ಆರು ಶಾಸಕರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿದ್ದುಗೆ ಪತ್ರ ಬರೆದ ನಂತರ ಕೊನೇಹಂತದ ಬದಲಾವಣೆಗಳು ನಡೆದಿವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ರಾಜ್ಯದ ಶ್ರೀಮಂತ ಶಾಸಕರಲ್ಲಿ ಒಬ್ಬರಾದ ಗುರ್ಜಿತ್ ಸಿಂಗ್ ಅವರನ್ನು 2018 ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸಂಪುಟದಿಂದ ಕೈಬಿಡಲಾಗಿದೆ ಎಂದು ಶಾಸಕರು ಗಮನಸೆಳೆದರು. ಗುರ್ಜಿತ್ ಸಿಂಗ್ ಮತ್ತು ಅವರ ಕುಟುಂಬವನ್ನು ಒಳಗೊಂಡ “ಕುಖ್ಯಾತ” ಮರಳು ಗಣಿಗಾರಿಕೆ ಹಗರಣದಿಂದಾಗಿ ರಾಜ್ಯವು ₹ 25 ಕೋಟಿಯನ್ನು ಕಳೆದುಕೊಂಡಿದೆ ಎಂದು ಶಾಸಕರು ಹೇಳಿದ್ದಾರೆ.

ಪಂಜಾಬ್‌ನ ದೋಬಾದಿಂದ ಕ್ಯಾಬಿನೆಟ್ ಹೆಸರುಗಳನ್ನು ಪ್ರಸ್ತಾಪಿಸಿದ್ದು “ಅಚ್ಚರಿಪಡಿಸಿವೆ” ಎಂದು ಶಾಸಕರು ಹೇಳಿದ್ದಾರೆ. ದೋಬಾ ಪ್ರದೇಶದಿಂದ ಜಾಟ್ ಸಿಖ್‌ಗಳು ಮತ್ತು ಒಬಿಸಿ ಸಿಖ್‌ಗಳ ಹೆಸರನ್ನು ಪ್ರಸ್ತಾಪಿಸಿದ್ದು, ಅಲ್ಲಿ ಸುಮಾರು 40 ಪ್ರತಿಶತ ದಲಿತ ಜನಸಂಖ್ಯೆ ಇದೆ.

“ಆದ್ದರಿಂದ, ರಾಣ ಗುರ್ಜಿತ್ ಸಿಂಗ್ ಅವರನ್ನು ಉದ್ದೇಶಿತ ಕ್ಯಾಬಿನೆಟ್ ವಿಸ್ತರಣೆಯಿಂದ ತಕ್ಷಣವೇ ಕೈಬಿಡಬೇಕು, ನಾವೆಲ್ಲರೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ದಲಿತ ಮುಖವನ್ನು ಸೇರಿಸಿಕೊಳ್ಳಬೇಕು” ಎಂದು ಶಾಸಕರು ಬರೆದಿದ್ದಾರೆ.

ರಾಣಾ ಸಿಂಗ್ ಸೇರ್ಪಡೆಗೆ ಸಂಬಂಧಿಸಿದ ವಿವಾದವು ಆಡಳಿತಾರೂಢ ಕಾಂಗ್ರೆಸ್‌ನ ಕೊನೆಯ ಕ್ಷಣದ ಚರ್ಚೆಗಳ ನಂತರ ಬಂದಿದೆ. ಸದ್ಯ ಪಕ್ಷವು ಅಮರಿಂದರ್ ಸಿಂಗ್ ಯುಗದಿಂದ ಮುಂದುವರಿಯಲು ಮತ್ತು ಮುಂದಿನ ವರ್ಷದ ಚುನಾವಣೆಯತ್ತ ಗಮನ ಹರಿಸುತ್ತಿದೆ. ಇದರಲ್ಲಿ ರಾಜ್ಯದಲ್ಲಿ 31 ಶೇಕಡ ದಲಿತ ಮತಗಳನ್ನು ನಿರೀಕ್ಷಿಸಲಾಗಿದೆ.

ವಿರೋಧ ಪಕ್ಷಗಳಾದ ಎಎಪಿ ಮತ್ತು ಅಕಾಲಿ ದಳ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ನಂತರವೂ ಅವರ ಸೇರ್ಪಡೆ ಪ್ರಸ್ತಾಪ ಮತ್ತು ವಿವಾದಾತ್ಮಕ ವ್ಯಕ್ತಿಗಳನ್ನು ಸಚಿವ ಸಂಪುಟದಲ್ಲಿ ಸೇರಸಬೇಕೆ ಎಂಬ ಪ್ರಶ್ನೆಯೂ ಪಕ್ಷದಲ್ಲಿ ಎದುರಾಗಿದೆ.

ಶನಿವಾರ ಮುಖ್ಯಮಂತ್ರಿ ಚನ್ನಿ ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಸಂಪುಟಕ್ಕೆ ನಾಮನಿರ್ದೇಶಿತರ ಪಟ್ಟಿಯೊಂದಿಗೆ ಭೇಟಿಯಾದ ಕೆಲ ಗಂಟೆಗಳ ನಂತರ, ಕೊನೆಯ ನಿಮಿಷದ ಮಾತುಕತೆಗಳು ಕಾಂಗ್ರೆಸ್ ಒಳಗೆ ಪುನರಾರಂಭಗೊಂಡಿವೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: Punjab cabinet expansion ಪಂಜಾಬ್ ನೂತನ ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ: ಕೊನೇ ಹಂತದಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆ

(Punjab’s new Chief Minister Charanjit Singh Channi has finalised a list six of them completely new says Source)

Published On - 4:31 pm, Sun, 26 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ