Punjab cabinet expansion ಪಂಜಾಬ್ ನೂತನ ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ: ಕೊನೇ ಹಂತದಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆ

TV9 Digital Desk

| Edited By: Rashmi Kallakatta

Updated on: Sep 26, 2021 | 4:02 PM

Charanjit Singh Channi: ಹೊಸ ಸಚಿವ ಸಂಪುಟದಲ್ಲಿಏಳು ಹೊಸ ಮುಖಗಳನ್ನು ನೋಡಲಿದ್ದು, ಅಮರಿಂದರ್ ಸಿಂಗ್ ಅವರ ಕ್ಯಾಬಿನೆಟ್ ನಿಂದ ಐವರನ್ನು ಕೈಬಿಡುವ ಸಾಧ್ಯತೆಯಿದೆ. ಆದಾಗ್ಯೂ, ಅವರ ಕೆಲವು ನಿಷ್ಠಾವಂತರು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

Punjab cabinet expansion ಪಂಜಾಬ್ ನೂತನ ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ: ಕೊನೇ ಹಂತದಲ್ಲಿ ಕೆಲವರನ್ನು ಕೈ ಬಿಡುವ ಸಾಧ್ಯತೆ
ಶನಿವಾರ ಗವರ್ನರ್ ನ್ನು ಭೇಟಿಯಾದ ಚರಣ್​​ಜಿತ್ ಸಿಂಗ್ ಚನ್ನಿ
Follow us

ಚಂಡೀಗಢ: ಪಂಜಾಬ್ ಸಚಿವ ಸಂಪುಟ ರಚನೆಗೆ ಸಿದ್ಧವಾಗಿದ್ದು, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ(Charanjit Singh Channi) ಸರ್ಕಾರದಲ್ಲಿ “ಕಳಂಕಿತ ರಾಣಾ ಗುರ್ಜಿತ್ ಸಿಂಗ್ ರನ್ನು ಸೇರಿಸುವ ಪ್ರಸ್ತಾಪ” ವಿರೋಧಿಸಿ ಆರು ಶಾಸಕರು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿದ್ದುಗೆ ಪತ್ರ ಬರೆದ ನಂತರ ಕೊನೇಹಂತದ ಬದಲಾವಣೆಗಳು ನಡೆದಿವೆ ಎಂದು ಎನ್​​ಡಿಟಿವಿ ವರದಿ ಮಾಡಿದೆ.

ರಾಜ್ಯದ ಶ್ರೀಮಂತ ಶಾಸಕರಲ್ಲಿ ಒಬ್ಬರಾದ ಗುರ್ಜಿತ್ ಸಿಂಗ್ ಅವರನ್ನು 2018 ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸಂಪುಟದಿಂದ ಕೈಬಿಡಲಾಗಿದೆ ಎಂದು ಶಾಸಕರು ಗಮನಸೆಳೆದರು. ಗುರ್ಜಿತ್ ಸಿಂಗ್ ಮತ್ತು ಅವರ ಕುಟುಂಬವನ್ನು ಒಳಗೊಂಡ “ಕುಖ್ಯಾತ” ಮರಳು ಗಣಿಗಾರಿಕೆ ಹಗರಣದಿಂದಾಗಿ ರಾಜ್ಯವು ₹ 25 ಕೋಟಿಯನ್ನು ಕಳೆದುಕೊಂಡಿದೆ ಎಂದು ಶಾಸಕರು ಹೇಳಿದ್ದಾರೆ.

ಪಂಜಾಬ್‌ನ ದೋಬಾದಿಂದ ಕ್ಯಾಬಿನೆಟ್ ಹೆಸರುಗಳನ್ನು ಪ್ರಸ್ತಾಪಿಸಿದ್ದು “ಅಚ್ಚರಿಪಡಿಸಿವೆ” ಎಂದು ಶಾಸಕರು ಹೇಳಿದ್ದಾರೆ. ದೋಬಾ ಪ್ರದೇಶದಿಂದ ಜಾಟ್ ಸಿಖ್‌ಗಳು ಮತ್ತು ಒಬಿಸಿ ಸಿಖ್‌ಗಳ ಹೆಸರನ್ನು ಪ್ರಸ್ತಾಪಿಸಿದ್ದು, ಅಲ್ಲಿ ಸುಮಾರು 40 ಪ್ರತಿಶತ ದಲಿತ ಜನಸಂಖ್ಯೆ ಇದೆ.

“ಆದ್ದರಿಂದ, ರಾಣ ಗುರ್ಜಿತ್ ಸಿಂಗ್ ಅವರನ್ನು ಉದ್ದೇಶಿತ ಕ್ಯಾಬಿನೆಟ್ ವಿಸ್ತರಣೆಯಿಂದ ತಕ್ಷಣವೇ ಕೈಬಿಡಬೇಕು, ನಾವೆಲ್ಲರೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ದಲಿತ ಮುಖವನ್ನು ಸೇರಿಸಿಕೊಳ್ಳಬೇಕು” ಎಂದು ಶಾಸಕರು ಬರೆದಿದ್ದಾರೆ.

ರಾಣಾ ಸಿಂಗ್ ಸೇರ್ಪಡೆಗೆ ಸಂಬಂಧಿಸಿದ ವಿವಾದವು ಆಡಳಿತಾರೂಢ ಕಾಂಗ್ರೆಸ್‌ನ ಕೊನೆಯ ಕ್ಷಣದ ಚರ್ಚೆಗಳ ನಂತರ ಬಂದಿದೆ. ಸದ್ಯ ಪಕ್ಷವು ಅಮರಿಂದರ್ ಸಿಂಗ್ ಯುಗದಿಂದ ಮುಂದುವರಿಯಲು ಮತ್ತು ಮುಂದಿನ ವರ್ಷದ ಚುನಾವಣೆಯತ್ತ ಗಮನ ಹರಿಸುತ್ತಿದೆ. ಇದರಲ್ಲಿ ರಾಜ್ಯದಲ್ಲಿ 31 ಶೇಕಡ ದಲಿತ ಮತಗಳನ್ನು ನಿರೀಕ್ಷಿಸಲಾಗಿದೆ.

ವಿರೋಧ ಪಕ್ಷಗಳಾದ ಎಎಪಿ ಮತ್ತು ಅಕಾಲಿ ದಳ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ನಂತರವೂ ಅವರ ಸೇರ್ಪಡೆ ಪ್ರಸ್ತಾಪ ಮತ್ತು ವಿವಾದಾತ್ಮಕ ವ್ಯಕ್ತಿಗಳನ್ನು ಸಚಿವ ಸಂಪುಟದಲ್ಲಿ ಸೇರಸಬೇಕೆ ಎಂಬ ಪ್ರಶ್ನೆಯೂ ಪಕ್ಷದಲ್ಲಿ ಎದುರಾಗಿದೆ.

ಶನಿವಾರ ಮುಖ್ಯಮಂತ್ರಿ ಚನ್ನಿ ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಸಂಪುಟಕ್ಕೆ ನಾಮನಿರ್ದೇಶಿತರ ಪಟ್ಟಿಯೊಂದಿಗೆ ಭೇಟಿಯಾದ ಕೆಲ ಗಂಟೆಗಳ ನಂತರ, ಕೊನೆಯ ನಿಮಿಷದ ಮಾತುಕತೆಗಳು ಕಾಂಗ್ರೆಸ್ ಒಳಗೆ ಪುನರಾರಂಭಗೊಂಡಿವೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಇಂದು ಸಂಜೆ ಪ್ರಮಾಣವಚನ ಸ್ವೀಕರಿಸುವ ಮುನ್ನ ಹೆಸರುಗಳನ್ನು ಅಂತಿಮಗೊಳಿಸಲು ಚನ್ನಿ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಂದು ಭೇಟಿಯನ್ನು ನಡೆಸಿದ್ದಾರೆ (ಈ ಬಾರಿ ವಿಡಿಯೋ ಕಾಲ್ ಮೂಲಕ) ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.  ಛನ್ನಿ ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ ನಂತರ ಇಬ್ಬರೂ ಈಗಾಗಲೇ ದೆಹಲಿಯಲ್ಲಿ ಮೂರು ಬಾರಿ ಭೇಟಿಯಾಗಿದ್ದಾರೆ.

ರಾಣಾ ಗುರ್ಜಿತ್ ಸಿಂಗ್ ಹೊರತುಪಡಿಸಿ, ಆ ಪಟ್ಟಿಯಲ್ಲಿ ಅಮರಿಂದರ್ ಸಿಂಗ್ ರಾಜಿನಾಮೆ ಸಮಯದಲ್ಲಿ ಭರತ್ ಭೂಹಾನ್ ಅಶು ಸೇರಿದಂತೆ ಆರು ಹೆಸರುಗಳು ಕ್ಯಾಬಿನೆಟ್ ನಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಹೊಸ ಸಚಿವ ಸಂಪುಟದಲ್ಲಿಏಳು ಹೊಸ ಮುಖಗಳನ್ನು ನೋಡಲಿದ್ದು, ಅಮರಿಂದರ್ ಸಿಂಗ್ ಅವರ ಕ್ಯಾಬಿನೆಟ್ ನಿಂದ ಐವರನ್ನು ಕೈಬಿಡುವ ಸಾಧ್ಯತೆಯಿದೆ. ಆದಾಗ್ಯೂ, ಅವರ ಕೆಲವು ನಿಷ್ಠಾವಂತರು ಉಳಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.

ರಾಜ್ ಕುಮಾರ್ ವರ್ಕಾ, ಕುಲ್ಜಿತ್ ನಾಗ್ರಾ, ಗುರ್ಕೀರತ್ ಸಿಂಗ್ ಕೊಟ್ಲಿ, ಪರ್ಗತ್ ಸಿಂಗ್, ರಾಜಾ ವಾರಿಂಗ್ ಮತ್ತು ಸುರ್ಜಿತ್ ಸಿಂಗ್ ಧೀಮಾನ್ ಹಾಗೂ ರಾಣಾ ಗುರ್ಜಿತ್ ಸಿಂಗ್ ಹೊಸ ಮುಖಗಳು ಎಂದು ಮೂಲಗಳು ಹೇಳಿದ್ದವು. ಅಮರಿಂದರ್ ಸಿಂಗ್ ನಿಷ್ಠರಾದ – ಬ್ರಹ್ಮ ಮೊಹಿಂದ್ರಾ, ವಿಜೇಂದ್ರ ಸಿಂಗ್ಲಾ ಮತ್ತು ಭರತ್ ಭೂಷಣ್ ಅಶು ಅವರನ್ನು ಉಳಿಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಆರೋಗ್ಯ ಸಚಿವ ಬಲಬೀರ್ ಸಿಧು, ಅರಣ್ಯ ಸಚಿವ ಸಾಧು ಸಿಂಗ್ ಧರಮ್‌ಸೋಟ್, ಕ್ರೀಡಾ ಸಚಿವ ರಾಣಾ ಮತ್ತು ಇತರ ಮೂವರು – ಗುರ್ಮೀತ್ ಸೋಧಿ, ಎಸ್‌ಎಸ್ ಅರೋರಾ, ಗುರುಪ್ರೀತ್ ಕಾಂಗಾರ್ ಅವರನ್ನು ಬದಲಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಚರಣ್​ಜಿತ್ ಸಿಂಗ್ ಚನ್ನಿ ಮುಂದಿರುವ ಆಯ್ಕೆ, ಸವಾಲುಗಳೇನು? ಪಂಜಾಬ್ ಹೊಸ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಭವಿಷ್ಯ! 

(Punjab cabinet expansion hours before oath ceremony Last Minute Hitch For Congress)

ತಾಜಾ ಸುದ್ದಿ

Related Stories

Click on your DTH Provider to Add TV9 Kannada