Mysuru Dasara 2021: ದುರ್ಗಾ ಮಾತೆಯ 9 ದಿವ್ಯ ಅವತಾರ ಆಯುರ್ವೇದದಲ್ಲಿ 9 ದಿವ್ಯ ಔಷಧ ರೂಪದಲ್ಲಿದೆ; ವಿವರ ಇಲ್ಲಿದೆ
ನವರಾತ್ರಿಯ ಶುಭ ಸಂದರ್ಭ ನಿನ್ನೆ ಅಕ್ಟೊಬರ್ 7ರಿಂದ ಆರಂಭಗೊಂಡಿದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಆರಾಧಿಸಲ್ಪಡುತ್ತದೆ. ಭಕ್ತರು ತಾಯಿ ದುರ್ಗೆಯನ್ನು ನವರಾತ್ರಿಯಲ್ಲಿ ಭಕ್ತಿಭಾವದಿಂದ ಪೂಜಿಸಿದರೆ ಎಲ್ಲವನ್ನೂ ಸಿದ್ಧಿಸಿಕೊಳ್ಳಬಹುದು. ದುರ್ಗಾ ಮಾತೆಯ ನವ ಸ್ವರೂಪಗಳು 9 ಆಯುರ್ವೇದ ಔಷಧಗಳೊಂದಿಗೆ ಗುರುತಿಸಲ್ಪಡುತ್ತದೆ. ಅವು ಯಾವುವು?
ದುರ್ಗಾ ಮಾತೆಯ ಒಂಬತ್ತು ಅವತಾರಗಳು ಈ 9 ಆಯುರ್ವೇದದ ಔಷಧಗಳ ರೂಪದಲ್ಲಿವೆ. ಅವುಗಳನ್ನು ತೆಗೆದುಕೊಂಡರೆ ರೋಗರುಜಿನಗಳು ದೂರವಾಗುವವು. ಅವು ಯಾವುವು? ಇಲ್ಲಿದೆ ವಿವರ. ಮಾರ್ಕಂಡೇಯ ಚಿಕಿತ್ಸಾ ಪದ್ಧತಿಯಲ್ಲಿ 9 ಔಷಧಗಳ ಬಗ್ಗೆ ತಿಳಿಯ ಹೇಳಲಾಗಿದೆ. ಇದಕ್ಕೆ ನವ ದುರ್ಗಿಯನ್ನು ಸಾಂಕೇತಿಕವಾಗಿ ಬಳಸಲಾಗಿದೆ. ಈ ನವ ಔಷಧಗಳ ರೋಗಿಯ ಸಮಸ್ತ ರೋಗಗಳನ್ನೂ ದೂರ ಮಾಡುವ ಕ್ಷಮತೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ.
ನವರಾತ್ರಿಯ ಶುಭ ಸಂದರ್ಭ ನಿನ್ನೆ ಅಕ್ಟೊಬರ್ 7ರಿಂದ ಆರಂಭಗೊಂಡಿದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಆರಾಧಿಸಲ್ಪಡುತ್ತದೆ. ದುರ್ಗಾ ಮಾತೆ ಒಂಬತ್ತು ರೂಪಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂಬ ನಂಬಿಕೆಯಿದೆ. ಭಕ್ತರು ತಾಯಿ ದುರ್ಗೆಯನ್ನು ನವರಾತ್ರಿಯಲ್ಲಿ ಭಕ್ತಿಭಾವದಿಂದ ಪೂಜಿಸಿದರೆ ಎಲ್ಲವನ್ನೂ ಸಿದ್ಧಿಸಿಕೊಳ್ಳಬಹುದು. ಎಲ್ಲ ದುಃಖ ಮತ್ತು ಸಂಕಟಗಳು ದೂರವಾಗಿ ಜೀವನವನ್ನು ಆನಂದದಲ್ಲಿ ಕಳೆಯುವಂತಾಗುತ್ತದೆ.
ದುರ್ಗಾ ಮಾತೆಯ ನವ ಸ್ವರೂಪಗಳು 9 ಆಯುರ್ವೇದ ಔಷಧಗಳೊಂದಿಗೆ ಗುರುತಿಸಲ್ಪಡುತ್ತದೆ (markandeya chikitsa paddhati). ಅವು ಯಾವುವು? ಇಲ್ಲಿದೆ ವಿವರ:
प्रथमं शैलपुत्री च द्वितीयं ब्रह्मचारिणी। तृतीयं चन्द्रघण्टेति कूष्माण्डेति चतुर्थकम् ।। पंचमं स्कन्दमातेति षष्ठं कात्यायनीति च। सप्तमं कालरात्रीति महागौरीति चाष्टमम् ।। नवमं सिद्धिदात्री च नवदुर्गा: प्रकीर्तिता:। उक्तान्येतानि नामानि ब्रह्मणैव महात्मना ।।
1. ಅಳಲೆ ಕಾಯಿ Harad – dry myrobalan ಒಣ ಮೈರೋಬಾಲನ್ ಅನ್ನು ಅಳಲೆ ಕಾಯಿ, ಅಣಲೆ ಕಾಯಿ ಅಥವಾ ಕರಕ ಕಾಯಿ ಎಂದು ಕರೆಯಲ್ಪಡುತ್ತದೆ. ಆಯುರ್ವೇದದಲ್ಲಿ ಮೈರೋಬಾಲನ್ ಅನ್ನು ಶೈಲಪುತ್ರಿಯ ಸ್ವರೂಪದಲ್ಲಿ ಗುರುತಿಸಲ್ಪಡುತ್ತದೆ. ಮೈರೋಬಾಲನ್ ಅಂದರೆ ಹಿಂದಿಯಲ್ಲಿ ಹರಡ್ ಎನ್ನುವ ಆಯುರ್ವೇದ ಔಷಧಯ ಗುಣವುಳ್ಳ ಕಾಯಿ ಏಳು ರೂಪಗಳಲ್ಲಿ ಸಿಗುತ್ತದೆ. ಇದನ್ನು ಮಸಾಲೆ ಪದಾರ್ಥವಾಗಿಯೂ ಬಳಸುತ್ತಾರೆ.
ಇದು 7 ಗುಣಗಳನ್ನು ಹೊಂದಿರುತ್ತದೆ; ಹಸಿರು ಕಾಯಿ (Greenery) ಭಯವನ್ನು ದೂರ ಮಾಡುವ ಮೈರೋಬಾಲನ್. ಪಥ್ಯ ಮೈರೋಬಾಲನ್ ಕಾಯಿ Diet- ಪಥ್ಯ ಸರ್ವರೋಗ ನಿವಾರಕ ಅನ್ನುವ ಹಾಗೆ ಎಲ್ಲದಕ್ಕೂ ಇದು ಸಿದ್ಧೌಷಧ. ಕಾಯಸ್ಥ(Kayastha) – ಇದು ಕಾಯ ಅಂದರೆ ಶರೀರದಲ್ಲಿ ಸರ್ವಾಂಗ ಸ್ವಾಸ್ಥ್ಯ ಕಾಪಾಡುತ್ತದೆ. ನಾಲ್ಕನೆಯದು ಅಮೃತಾ ಮೈರೋಬಾಲನ್ – ಇದು ಅಮೃತಕ್ಕೆ ಸಮಾನ. ಐದನೆಯದು ಹೇಮಾವತಿ (Hemavathi) ಅಂದರೆ ಹಿಮಾಲಯದಲ್ಲಿ ಬೆಳೆಯುವ ಉತ್ಪನ್ನ. 6ನೆಯದು ಚೇತನಾಮಯಿ (Chetki) ಅಂದ್ರೆ ಮನಸ್ಸನ್ನು ಪ್ರಸನ್ನಗೊಳಿಸುವ ಔಷಧ ಎಂದರ್ಥ. ಇನ್ನು ಏಳನೆಯದು ಶ್ರೇಯಸಿ (Shreyasi) ಅಂದರೆ ಎಲ್ಲವನ್ನೂ ಕಲ್ಯಾಣಮಯಗೊಳಿಸುವುದು ಎಂದರ್ಥ. ಎಲ್ಲದರಲ್ಲೂ ಪ್ರಗತಿ ಕಾಣುವುದು ಎಂದರ್ಥ.
2. ಬ್ರಾಹ್ಮಿ Brahmi ಬ್ರಾಹ್ಮಿ ಅಂದರೆ ದುರ್ಗಾ ಮಾತೆಯ ಬ್ರಹ್ಮಚಾರಿಣಿ ರೂಪ. ಇದನ್ನು ಸೇವಿಸುವುದರಿಂದ ಮಸ್ತಿಷ್ಕದಲ್ಲಿ (Brain) ಉದ್ಭವವಾಗುವ ಸರ್ವ ರೋಗಗಳು ಗುಣವಾಗುತ್ತವೆ. ಮೆದುಳಿನಲ್ಲಿ ಸ್ಮರಣಶಕ್ತಿ ಪ್ರಬಲವಾಗುತ್ತದೆ. ರಕ್ತ ವಿಕಾರ ರೋಗಗಳು ದೂರವಾಗುವವು. ಇದೆಲ್ಲದರಿಂದ ಆಯಸ್ಸು ವೃದ್ಧಿಸುತ್ತದೆ.
3. ಚಂದುಸೂರ Chandusoor ಚಂದುಸೂರವನ್ನು ಚಂದ್ರಘಂಟಾ ಸ್ವರೂಪದಲ್ಲಿ ಗುರುತಿಸಲ್ಪಡುತ್ತದೆ. ಇದರ ಎಲೆಗಳು ಧನಿಯಾದಂತೆ ಕಾಣುತ್ತದೆ. ಇದು ಹೃದಯ ರೋಗಗಳು ಮತ್ತು ರಕ್ತದೊತ್ತಡವನ್ನು ದರ ಮಾಡಬಲ್ಲದು. ಜೊತೆಗೆ ದಢೂತಿ ದೇಹವನ್ನು ಕರಗಿಸಬಲ್ಲದು.
4. ಕುಂಬಳಕಾಯಿ (Pumpkin) ಕೂಷ್ಮಾಂಡ ರೂಪದಲ್ಲಿರುತ್ತದೆ. ಇದನ್ನು ಸೇವಿಸುವುದರಿಂದ ಶರೀರ ಬಲಿಷ್ಟವಾಗುತ್ತದೆ. ಪುರುಷರ ವೀರ್ಯವರ್ಧಕ ಇದಾಗಿದೆ. ಇದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ. ರಕ್ತವನ್ನು ಶುದ್ಧಗೊಳಿಸುತ್ತದೆ.
5. ಅಗಸೆ ಬೀಜ (Flax seed) ಅಗಸೆ ಬೀಜ ಅತ್ಯುತ್ತಮ ನವ ಸಿರಿ ಧಾನ್ಯವಾಗಿದೆ. ಇದರ ಸೇವೆನೆಯಿಂದ ಶರೀರದಲ್ಲಿ ವಾಯು, ಪಿತ್ತ ಮತ್ತು ಕಫ ಸಂಬಂಧಿ ರೋಗ ಲಕ್ಷಣಗಳು ದೂರವಾಗುತ್ತವೆ.
6. ಮೋಯಾ ಗಡ್ಡೆ (Truffle Tuber) ಮಾತಾ ಕಾತ್ಯಾಯಿನಿ ರೂಪದಲ್ಲಿರುವ ಆರನೆಯ ಚಮತ್ಕಾರಿ ಔಷಧವೇ ಮೋಯಾ. ಇದನ್ನು ಮಾತಾ ಕಾತ್ಯಾಯಿನಿಯೊಂದಿಗೆ ಗುರುತಿಸುತ್ತಾರೆ. ಅಂಬಾ, ಅಂಬಾಲಿಕಾ, ಅಂಬಿಕಾ ಅಥವಾ ಮಾಚಿಕಾ ಹೆಸರಿನಿಂದಲೂ ತಿಳಿಯಲಾಗುತ್ತದೆ. ಇದು ಪಿತ್ತ, ಕಫ ಮತ್ತು ಗಂಟಲಿನ ನೋವನ್ನು ನಿವಾರಿಸುತ್ತದೆ.
7. ನಾಗ ದವನ (Common wormwood) ನಾಗ ದವನ ಔಷಧಿ ಸಸ್ಯವನ್ನು ಮಾತಾ ಕಾಳರಾತ್ರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಮಾತಾ ಕಾಳರಾತ್ರಿ ಎಲ್ಲ ಸಂಕಟಗಳನ್ನು ದೂರ ಮಾಡುವಂತೆ ಶರೀರದಲ್ಲಿನ ರೋಗರುಜಿನಗಳನ್ನು ಸಹ ದೂರ ಮಾಡುತ್ತದೆ. ಶರೀರದಲ್ಲಿ ಎಲ್ಲ ರೀತಿಯ ವಿಷ ವಸ್ತುಗಳನ್ನು ಹೊರಹಾಕುವಲ್ಲಿ ಇದು ಯಶಸ್ವಿಯಾಗುತ್ತದೆ.
8. ತುಳಸಿ (Basil) ತುಳಸಿಯನ್ನು ಆಯುರ್ವೇದದಲ್ಲಿ ಮಹಾಗೌರಿ ಎಂದು ಸಂಬೋಧಿಸಲಾಗುತ್ತದೆ. ತಳಸಿಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹೋಗಲಾಡಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಹೃದಯ, ಗಂಟಲು, ಶ್ವಾಸಕೋಶ ಸಂಬಂಧೀ ರೋಗಗಳನ್ನು ದೂರ ಮಾಡುತ್ತದೆ.
9. ಶತಾವರಿ (Asparagus) ಶತಾವರಿಯನ್ನು ದುರ್ಗಾ ಮಾತೆಯ ಒಂಬತ್ತನೆಯ ಅವತಾರ ಎಂಬ ಉಲ್ಲೇಖವಿದೆ. ಮಾನಸಿಕ ಬಲ ಹೆಚ್ಚಿಸುತ್ತದೆ. ಪುರುಷಯರಲ್ಲಿ ವೀರ್ಯ ವೃದ್ಧಿಸುತ್ತದೆ. ವಾತ, ಪಿತ್ತ ಸಂಬಂಧೀ ರೋಗಗಳನ್ನು ದೂರ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ರಕ್ತವನ್ನು ಶುದ್ಧವಾಗಿಸುತ್ತದೆ.