ನವರಾತ್ರಿ 2021 ಮೊದಲ ದಿನ: ಶೈಲಪುತ್ರಿಗೆ ಹೇಗೆ ಪೂಜೆ ಸಲ್ಲಿಸಬೇಕು? ಇಲ್ಲಿದೆ ಮಂತ್ರ

Navratri 2021: ಶಾಸ್ತ್ರಗಳ ಪ್ರಕಾರ, ನವರಾತ್ರಿಯ ಒಂದೊಂದು ದಿನದ ಉಪಾಸನೆಗೂ ವಿಶೇಷ ಮಹತ್ವವಿದೆ. ನವರಾತ್ರಿಯ ಪ್ರಥಮ ದಿನ ದೇವಿಯ ಸ್ವರೂಪವಾದ ಶೈಲಪುತ್ರಿ ಪೂಜೆ ಮಾಡಲಾಗುತ್ತೆ. ಜಗಜ್ಜನನಿ ದುರ್ಗಾದೇವಿಯ ಮೊದಲ ಸ್ವರೂಪ ಶೈಲಪುತ್ರಿ.

ನವರಾತ್ರಿ 2021 ಮೊದಲ ದಿನ: ಶೈಲಪುತ್ರಿಗೆ ಹೇಗೆ ಪೂಜೆ ಸಲ್ಲಿಸಬೇಕು? ಇಲ್ಲಿದೆ ಮಂತ್ರ
ಶೈಲಪುತ್ರಿ
Follow us
TV9 Web
| Updated By: ಆಯೇಷಾ ಬಾನು

Updated on: Oct 07, 2021 | 7:24 PM

ಇಂದಿನಿಂದ ಒಂಬತ್ತು ದಿನಗಳ ಕಾಲ ಎಲ್ಲೆಲ್ಲೂ ನವರಾತ್ರಿ(Navratri 2021 )ಸಂಭ್ರಮ ಮನೆ ಮಾಡಿದೆ. ಶಕ್ತಿದೇವತೆಯ ಆರಾಧನೆ. ದುರ್ಗಾ ಪೂಜೆ.. ಪಾರಾಯಣ.. ನಿತ್ಯ ನವದುರ್ಗೆಯರನ್ನು ಹಾಡುವ, ಕೊಂಡಾಡುವ ಈ ನವರಾತ್ರಿ, ದೇವಿ ಒಲುಮೆಗೆ ಪಾತ್ರರಾಗೋಕೆ ಸುಸಂದರ್ಭ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದು ಕರೆಯುತ್ತಾರೆ. ನವರಾತ್ರಿ ಒಂಬತ್ತು ರಾತ್ರಿಗಳ ಸಮೂಹ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿದೆ. 9 ದಿನಗಳ ಕಾಲ ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತೆ. ದೇವಿಯ ರೂಪವಾದ ಶೈಲಪುತ್ರಿ (Shailputri ), ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನಗಳ ಕಾಲ ಆರಾಧಿಸಲಾಗುತ್ತೆ. ದೇವಿಯ ಪರಮ ಪವಿತ್ರ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ.

ಮೊದಲ ದಿನ ಶೈಲಪುತ್ರಿ ಪೂಜೆ ಶಾಸ್ತ್ರಗಳ ಪ್ರಕಾರ, ನವರಾತ್ರಿಯ ಒಂದೊಂದು ದಿನದ ಉಪಾಸನೆಗೂ ವಿಶೇಷ ಮಹತ್ವವಿದೆ. ನವರಾತ್ರಿಯ ಪ್ರಥಮ ದಿನ ದೇವಿಯ ಸ್ವರೂಪವಾದ ಶೈಲಪುತ್ರಿ ಪೂಜೆ ಮಾಡಲಾಗುತ್ತೆ. ಜಗಜ್ಜನನಿ ದುರ್ಗಾದೇವಿಯ ಮೊದಲ ಸ್ವರೂಪ ಶೈಲಪುತ್ರಿ. ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎನ್ನಲಾಗುತ್ತೆ. ಶೈಲಪುತ್ರಿಯ ರೂಪ ಅತ್ಯಂತ ಸುಂದರ. ಪಾರ್ವತಿದೇವಿಯ ಪ್ರತಿರೂಪವಾದ ಶೈಲಪುತ್ರಿ ವೃಷಭವಾಹನೆ. ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಸರಳ ವ್ಯಕ್ತಿತ್ವ, ಸೌಮ್ಯ ರೂಪ ಈಕೆಯದ್ದು. ಶಿವಪುರಾಣದ ಪ್ರಕಾರ, ಸತಿದೇವಿ ದಕ್ಷಪ್ರಜಾಪತಿಯ ಯಜ್ಞಕುಂಡಕ್ಕೆ ಹಾರಿ ಭಸ್ಮವಾಗ್ತಾಳೆ. ಸತಿ ದೇವಿಯೇ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಪುತ್ರಿಯಾಗಿ ಜನಿಸಿ, ಶೈಲಪುತ್ರಿಯಾದಳು. ನಂತರ ಶೈಲಪುತ್ರಿ ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ವಿವಾಹವಾದಳು. ಅಸುರರಿಂದ ತೊಂದರೆ ಅನುಭವಿಸುತ್ತಿದ್ದ, ದೇವಾನುದೇವತೆಗಳಿಗೆ ದುರ್ಗೆಯಾಗಿ ಅಭಯ ಹಸ್ತ ನೀಡಿದವಳೇ ಈ ಶೈಲಪುತ್ರಿ. ಶೈಲಪುತ್ರಿ ಅನಂತ ಫಲಗಳನ್ನು ಕರುಣಿಸುವ ದೇವಿ. ನವರಾತ್ರಿಯ ಮೊದಲ ದಿನ ಶ್ರದ್ಧಾ ಭಕ್ತಿಯಿಂದ ಶೈಲಪುತ್ರಿಯನ್ನು ಆರಾಧಿಸಿದ್ರೆ ದೇವಿ ಭಕ್ತರಿಗೆ ವಿಶೇಷ ಶಕ್ತಿಯನ್ನು ಕರುಣಿಸ್ತಾಳೆ ಎನ್ನಲಾಗುತ್ತೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಮಂತ್ರವನ್ನು ಜಪಿಸಿ, ದೇವಿಯ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ವೆ ಎಂಬ ನಂಬಿಕೆ ಇದೆ.

ಶೈಲಪುತ್ರಿ ಪೂಜೆ ವಿಧಾನ ಮತ್ತು ಮಂತ್ರ ನವರಾತ್ರಿ ಹಬ್ಬದ ಮೊದಲನೇ ದಿನದಂದು ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತೆ. ಈ ದಿನ ದೇವಿಯ ವಿಗ್ರಹಕ್ಕೆ ಅಥವಾ ಚಿತ್ರಕ್ಕೆ ಮಲ್ಲಿಗೆ ಹೂವನ್ನು ಅರ್ಪಿಸಿ ಪೂಜಿಸಲಾಗುತ್ತೆ. ಹಾಗೂ ಓಂ ದೇವಿ ಶೈಲಪುತ್ರ್ಯೈ ನಮಃ ಎಂದ ಮಂತ್ರವನ್ನು ಪಠಿಸಬೇಕು. ಅಥವಾ ‘ಯಾ ದೇವಿ ಸರ್ವಭೂತೇಷು ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ’ ಅಥವಾ ‘ವಂದೇ ವಾಂಛಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್’

ಇದನ್ನೂ ಓದಿ: Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?