ನವರಾತ್ರಿ 2021 ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಯಾರು? ಇಲ್ಲಿದೆ ಆಕೆಯ ಮನ ಗೆಲ್ಲುವ ಮಂತ್ರ

TV9 Digital Desk

|

Updated on:Oct 08, 2021 | 9:38 AM

Navratri 2021, Day 2: ಬ್ರಹ್ಮಚಾರಿಣಿ ದೇವಿಯು ಬುದ್ದಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ.

ನವರಾತ್ರಿ 2021 ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಯಾರು? ಇಲ್ಲಿದೆ ಆಕೆಯ ಮನ ಗೆಲ್ಲುವ ಮಂತ್ರ
ಬ್ರಹ್ಮಚಾರಿಣಿ

Follow us on


ಶಾರದಿಯಾ ನವರಾತ್ರಿಯು ಅಕ್ಟೋಬರ್ 7ರಿಂದ ಆರಂಭವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ದೇವಿಯ ಬೇರೆ ಬೇರೆ ಸ್ವರೂಪವನ್ನು ಪೂಜಿಸಲಾಗುತ್ತೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಿದರೆ ನವರಾತ್ರಿಯ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿಗೆ ಪೂಜಿಸಲಾಗುತ್ತೆ. ನವರಾತ್ರಿಯ ಎರಡನೇ ದಿನ ಶಕ್ತಿದೇವತೆಯ ಆರಾಧನೆಗೆ ಪರ್ವಕಾಲ. ಹಾಗಾದ್ರೆ ಬ್ರಹ್ಮಚಾರಿಣಿ ಯಾರು ಅಂದ್ರೆ ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆೇ ಜ್ಞಾನ ಕೊಟ್ಟವಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.

ಬ್ರಹ್ಮಚಾರಿಣಿ ದೇವಿಯು ಬುದ್ದಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ. ಈಕೆ ತನ್ನ ಭಕ್ತರಿಗೆ ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ ಎಂದು.

ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ. ಅಖಂಡ ತಪಸ್ಸನ್ನು ಮಾಡಿದ ಸಲುವಾಗೇ ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರ್ತಾಳೆ. ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದ್ರೆ ವಿಶೇಷ ವರಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ. ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದ್ರೆ ಬೇಡಿದ ವರಗಳನ್ನು ಕರುಣಿಸ್ತಾಳೆ ಎಂಬ ನಂಬಿಕೆ ಇದೆ.

ಬ್ರಹ್ಮಚಾರಿಣಿ ಪೂಜೆ ಶುಭ ಮುಹೂರ್ತ
ನವರಾತ್ರಿಯ ಎರಡನೇ ದಿನದ ದ್ವತೀಯ ತಿಥಿಯು ಅಕ್ಟೋಬರ್ 8ರಂದು ಬೆಳಗ್ಗೆ 10:48ರವರೆಗೆ ಇರುತ್ತದೆ.
ಸೂರ್ಯೋದಯದ ಸಮಯ: ಬೆಳಗ್ಗೆ 6:17ರಿಂದ
ಸೂರ್ಯಾಸ್ತದ ಸಮಯ: ಸಂಜೆ 5:59ಕ್ಕೆ
ಇನ್ನು ಈ ಬ್ರಹ್ಮಚಾರಿಣಿ ಆರಾಧನೆಗೆ ವಿಶೇಷ ಮಂತ್ರವೊಂದಿದೆ. ಆ ಮಂತ್ರವನ್ನು ಪಠಿಸಿ ಪೂಜಿಸಿದ್ರೆ ಬ್ರಹ್ಮಚಾರಿಣಿ ಬೇಗ ಸಂತುಷ್ಟಳಾಗ್ತಾಳೆ ಎನ್ನಲಾಗುತ್ತೆ.

ಬ್ರಹ್ಮಚಾರಿಣಿ ಪೂಜಾ ಮಂತ್ರ
ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ

ಬ್ರಹ್ಮಚಾರಿಣಿ ಪೂಜೆ ವಿಧಾನ
ಈ ದಿನ ಭಕ್ತರು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಬಟ್ಟೆ ಧರಿಸಿ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಕಲಶದ ಬಳಿ ಇರಿಸಬೇಕು. ಬಳಿಕ ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಅರ್ಪಿಸಿ ವಿಶೇಷವಾಗಿ ಮಲ್ಲಿಗೆ ಹೂ ಹಾಗೂ ಹೂವುಗಳನ್ನು ಅರ್ಪಿಸಬೇಕು. ತುಪ್ಪದ ದೀಪ ಬೆಳಗಿ ಶ್ರೀ ದುರ್ಗಾ ಸಪ್ತಶತಿಯನ್ನು ಓದಬೇಕು. ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೆ ಪಠಿಸಬೇಕು. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಭೋಗವನ್ನು ಅರ್ಪಿಸಿ ಆರತಿಯನ್ನು ಮಾಡಬೇಕು.

ಬ್ರಹ್ಮಚಾರಿಣಿ ಪೂಜೆಯ ಫಲ ಬ್ರಹ್ಮಚಾರಿಣಿ ಅನಂತ ಫಲಗಳನ್ನು ನೀಡ್ತಾಳೆ. ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ. ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ. ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ. ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ: ನವರಾತ್ರಿ 2021 ಮೊದಲ ದಿನ: ಶೈಲಪುತ್ರಿಗೆ ಹೇಗೆ ಪೂಜೆ ಸಲ್ಲಿಸಬೇಕು? ಇಲ್ಲಿದೆ ಮಂತ್ರ


ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada