Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?

ನವರಾತ್ರಿ ಹಬ್ಬ 2021: ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿಯಿರಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

Navaratri 2021 Day 1: ನವರಾತ್ರಿ ವಿಶೇಷ ಪೂಜೆಯ ವಿಧಿ- ವಿಧಾನ ಜತೆಗೆ ನೀವು ಯಾವ ಮುಹೂರ್ತದಲ್ಲಿ ಪೂಜೆ ಕೈಗೊಳ್ಳಬೇಕು ಗೊತ್ತಾ?
ನವರಾತ್ರಿ ಆಚರಣೆ
Follow us
TV9 Web
| Updated By: shruti hegde

Updated on:Oct 07, 2021 | 10:49 AM

ಇಂದಿನಿಂದ (ಅಕ್ಟೋಬರ್ 7, ಗುರುವಾರ) ಒಂಭತ್ತು ದಿನಗಳ ಕಾಲ ನವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಇಂದು ಮೊದಲನೇಯ ದಿನ ಶಾರ್ದೀಯ ನವರಾತ್ರಿಯು ಅತ್ಯಂತ ಮಹತ್ವದ ದಿನ. ಇಂದು ಮುಂಜಾನೆ ಬೇಗ ಎದ್ದು ಮಡಿ ವಸ್ತ್ರದಲ್ಲಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಯಾವ ಮುಹೂರ್ತದಲ್ಲಿ ಭಕ್ತರು ಕಲಶ ಸ್ಥಾಪನೆ ಮಾಡುತ್ತಾರೆ? ಪೂಜೆ ಕೈಗೊಳ್ಳುವಾಗ ಪಾಲಿಸಬೇಕಾದ ನಿಯಮಗಳೇನು? ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳಬೇಕಾಗಿದ್ದರೆ ಈ ಸುದ್ದಿಯನ್ನು ಪೂರ್ತಿಯಾಗಿ ಓದಿ. ನವರಾತ್ರಿಯನ್ನು ವಿಶೇಷವಾಗಿ ಭಕ್ತಿಪೂರ್ಣವಾಗಿ ಆಚರಿಸಿ.

ಮುಹೂರ್ತ ಇಂದು ನವರಾತ್ರಿಯ ಮೊದಲನೇಯ ದಿನ ಭಕ್ತರು ಬೆಳಿಗ್ಗೆ ಮುಂಜಾನೆ 6:17ರಿಂದ ಬೆಳಿಗ್ಗೆ 7:07 ರೊಳಗೆ ಕಲಶ ಸ್ಥಾಪನೆ ಮಾಡುತ್ತಾರೆ. ಅಭಿಜಿತ್ ಮುಹೂರ್ತ ಬೆಳಿಗ್ಗೆ 11:45 ರಿಂದ 12:32 ರ ವರೆಗೆ ಇದೆ. ಆ ಮುಹೂರ್ತದಲ್ಲಿ ಭಕ್ತರು ಭಕ್ತಿಯಿಂದ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ದೇವಿಯ ಮೊರೆ ಹೋಗುತ್ತಾರೆ.

ಕಲಶ ಸ್ಥಾಪನೆ ಮಣ್ಣಿನ ಮಡಕೆ, ಮಣ್ಣು, ಏಳು ವಿಭಿನ್ನ ಧಾನ್ಯಗಳು, ಹಿತ್ತಾಳೆಯ ಒಂದು ಪುಟ್ಟ ಕಲಶ, ತೆಂಗಿನ ಕಾಯಿ, ನೀರು, ನಾಣ್ಯಗಳು ಮಾವಿನ ಚಂಡೆ, ವೀಳ್ಯದೆಲೆ, ಅಡಿಕೆ, ಅಕ್ಷತೆ, ಹೂವು, ಹೂವಿನ ಮಾಲೆ ಈ ರೀತಿಯ ಸಾಮಗ್ರಿಗಳೊಂದಿಗೆ ಕಲಶ ಸ್ಥಾಪನೆ ಮಾಡಲಾಗುತ್ತದೆ. ಬಳಿಕ ಮಣ್ಣಿನ ಮಡಕೆಯಲ್ಲಿ ಮಣ್ಣನ್ನು ಹಾಕಿ ಏಳು ವಿವಿಧ ಧಾನ್ಯಗಳನ್ನು ಬಿತ್ತಬೇಕು, ನಂತರದಲ್ಲಿ ಹಿತ್ತಾಳೆಯ ಕಲಶ ಇಟ್ಟು ಅದಕ್ಕೆ ಪವಿತ್ರ ದಾರವನ್ನು ಸುತ್ತಿ ನೀರು ತುಂಬಿಸಿ. ಆ ಪವಿತ್ರ ನೀರಿಗೆ ವೀಳ್ಯದೆಲೆ, ಅಕ್ಷತೆ, ಅಡಿಕೆ, ಹೂವು ಹಾಕಿ ಅದರ ಮೇಲಿನಿಂದ ತೆಂಗಿನ ಕಾಯಿಯನ್ನು ಇರಿಸಿ. ಮಾವಿನ ಎಲೆಗಳನ್ನು ಕಲಶದೊಳಕ್ಕೆ ಸಿಕ್ಕಿಸಿ. ಕಲಶ ಸ್ಥಾಪನೆಯ ಬಳಿಕ ಹೂವುಗಳಿಂದ ಅಲಂಕರಿಸುವ ಮೂಲಕ ಆರತಿ ಬೆಳಗಿ ಪೂಜೆ ಸಲ್ಲಿಸಬಹುದು.

ಕಲಶದ ಮುಂದೆ ಧೂಪ ದೀಪವನ್ನು ಬೆಳಗಿ ಪಕ್ಕದಲ್ಲಿ ದೇವಿಯ ಮೂರ್ತಿಯನ್ನು ಕೂರಿಸಿ ಅಲಂಕಾರ ಮಾಡಲಾಗುತ್ತದೆ. 9 ದಿನಗಳವರೆಗೆ ದೇವಿ ನೆಲೆಸುವಂತೆ ಭಕ್ತಿಯಿಂದ ಕೈ ಮುಗಿದು ಬೇಡಿಕೊಳ್ಳಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸಿ, ಹಾಡು, ಭಜನೆಯನ್ನು ಹೇಳುವ ಮೂಲಕ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ದೇವಿಗೆ ಹಣ್ಣುಗಳು, ಸಿಹಿ ತಿಂಡಿಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಲಾಗುತ್ತದೆ. ದುರ್ಗಾದೇವಿಯ ಮಂತ್ರವನ್ನು ಪಠಿಸುತ್ತಾ ಕಲಶಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ:

Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

Navaratri 2021: ಕೊಲ್ಲೂರಿನಲ್ಲಿ ಸರಳ ನವರಾತ್ರಿ; ಸಂಪ್ರದಾಯಕ್ಕೆ ಸೀಮಿತವಾಗಿ ವಿದ್ಯಾರಂಭ, ಅನ್ನಪ್ರಾಶನ ಕಾರ್ಯಕ್ರಮ

Published On - 10:31 am, Thu, 7 October 21

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?