ವಿಜಯಪುರ: ಉಕ್ಕಿ ಹರಿಯುತ್ತಿರುವ ಡೋಣಿ ನದಿ, ಸಾತಿಹಾಳ ಸೇತುವೆ ಮುಳುಗಡೆ, ವಾಹನ ಸವಾರರ ಓಡಾಟ ಅವ್ಯಾಹತ!
ಸೇತುವೆಯ ಈ ಭಾಗದಲ್ಲಿ ಸಾತಿಹಾಳ ಗ್ರಾಮದ ಹಲವು ಜನ ನಿಂತು ಅ ಕಡೆಯಿಂದ ಜನ ವಾಹನ ಓಡಿಸಿಕೊಂಡು ಬರುವ ಜನರ ಮೇಲೆ ಕಣ್ಣಿಟ್ಟಿದ್ದಾರೆ. ಸೇತುವೆ ದಾಟುವಾಗ ಏನಾದರೂ ಹೆಚ್ಚು ಕಡಿಮೆಯಾದರೆ ಇವರು ರಕ್ಷಣೆಗೆ ಧಾವಿಸುವಂತಿದೆ. ಒಬ್ಬ ಸವಾರನ ದ್ವಿಚಕ್ರವಾಹನ ಸೇತುವೆ ಮೇಲೆ ಸಿಲುಕಿಬಿಡುತ್ತದೆ, ಪ್ರಾಯಶಃ ಅದು ರಸ್ತೆಗುಂಡಿಯಲ್ಲಿ ಸಿಕ್ಕಿಕೊಂಡಿರಬಹುದು. ಈ ಬದಿಯಲ್ಲಿದ್ದ ಇಬ್ಬರು ಹೋಗಿ ಅದನ್ನು ತಳ್ಳುತ್ತಾರೆ.
ವಿಜಯಪುರ, ಆಗಸ್ಟ್ 7: ಜಿಲ್ಲೆ ಯಾವುದಾದರೇನು ಜನರ ಹುಚ್ಚಾಟಗಳು ಮಾತ್ರ ಎಲ್ಲ ಒಂದೇಯಾಗಿರುತ್ತವೆ. ದೇವರಹಿಪ್ಪರಗಿ (Devarahippargi) ತಾಲೂಕಿನ ಸಾತಿಹಾಳ ಮೂಲಕ ಹರಿಯುವ ಡೋಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದನ್ನು ವರದಿ ಮಾಡಿದ್ದೇವೆ. ಕಳೆದೆರಡು ದಿನಗಳಿಂದ ಸುರಿಯುತ್ತಿದ್ದ ಮಳೆ ನಿಂತಿದ್ದರೂ ನದಿಯಲ್ಲಿ ಮಾತ್ರ ನೀರಿನ ಮಟ್ಟ ಹೆಚ್ಚುತ್ತಿದೆ. ಸಾತಿಹಾಳ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ ಮತ್ತು ನದಿ ನೀರು ಅದರ ಮೇಲಿಂದ ಹರಿಯುತ್ತಿದೆ. ಜನಗಳು ಮಾತ್ರ ಆ ಭಾಗದಿಂದ ಈ ಭಾಗಕ್ಕೆ ವಾಹನಗಳನ್ನು ಓಡಿಸಿಕೊಂಡು ಬರುತ್ತಿದ್ದಾರೆ. ಅಫ್ಕೋರ್ಸ್ ಸೇತುವೆ ಮೇಲೆ ನೀರು ರಭಸವಾಗೇನೂ ಹರಿಯುತ್ತಿಲ್ಲ, ಅದು ಬೇರೆ ವಿಚಾರ.
ಇದನ್ನೂ ಓದಿ: ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ, ಭೂತ್ಪೂರ ಸೇತುವೆ ಮುಳುಗಡೆ; ಕಲಬುರಗಿ, ಸೇಡಂಗೆ ಸಂಪರ್ಕ ಕಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

