AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಧಾಕರ್ ಏನು ಶಾಸಕರೇ ರಾಜ್ಯದಲ್ಲಿ ಕೆಲಸ ಕೊಡಿಸಲು? ಅವರೊಬ್ಬ ಸಂಸದ: ಅರ್ ಅಶೋಕ, ವಿಪಕ್ಷ ನಾಯಕ

ಸುಧಾಕರ್ ಏನು ಶಾಸಕರೇ ರಾಜ್ಯದಲ್ಲಿ ಕೆಲಸ ಕೊಡಿಸಲು? ಅವರೊಬ್ಬ ಸಂಸದ: ಅರ್ ಅಶೋಕ, ವಿಪಕ್ಷ ನಾಯಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 07, 2025 | 4:33 PM

Share

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರು ಚಾಲಕ ಬಾನು ಸಂಸದ ಡಾ ಕೆ ಸುಧಾಕರ್ ಹೆಸರನ್ನು ಡೆತ್ ನೋಟ್​ನಲ್ಲಿ ಬರೆದು ಅತ್ಮಹತ್ಯೆ ಮಾಡಿಕೊಂಡಿರುವ ವಿಷಯದ ಬಗ್ಗೆ ಮಾತಾಡಿದ ಅಶೋಕ, ಕೆಲಸ ಕೊಡಿಸಲು ಅವರೇನು ಸರ್ಕಾರದ ಭಾಗವೇ? ಅವರೊಬ್ಬ ಸಂಸದ, ರಾಜ್ಯದಲ್ಲಿ ಹೇಗೆ ಕೆಲಸ ಕೊಡಿಸುತ್ತಾರೆ? ತನಿಖೆಯಾಗಬೇಕು ಎಂದರು.

ದೆಹಲಿ,ಆಗಸ್ಟ್ 7: ವಿರೋಧ ಪಕ್ಷದ ನಾಯಕ ಅರ್ ಅಶೋಕ ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಹಗರಣಗಳ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ಮಾಡಿದ್ದೇನೆ, ಸುರಂಗ ಮಾರ್ಗ ಯೋಜನೆಯನ್ನು (tunnel road project) ಬಿಜೆಪಿ ವಿರೋಧಿಸುತ್ತಿರುವುದನ್ನು ಸಹ ಹೇಳಿದ್ದೇನೆ ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷದ ನೇಮಕಾತಿ ಬಗ್ಗೆ ವರಿಷ್ಠರು ಏನನ್ನೂ ಹೇಳಲಿಲ್ಲ, ನಾನೂ ಸಹ ಕೇಳಿಲ್ಲ, ಪ್ರಾಯಶಃ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ನಂತರ ರಾಜ್ಯಾಧ್ಯಕ್ಷರ ಘೋಷಣೆಯಾಗಬಹುದು, ಅದೆಲ್ಲ ಹೈಕಮಾಂಡ್​ಗೆ ಬಿಟ್ಟ ವಿಚಾರ, ಅವರು ತೆಗದುಕೊಳ್ಳುವ ತೀರ್ಮಾನಗಳಿಗೆ ಬದ್ಧರಾಗಿರುತ್ತೇವೆ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:   ತಮ್ಮ ಪವರ್ ಶಿವಕುಮಾರ್​ಗೆ ತೋರಿಸಲು ಸಿದ್ದರಾಮಯ್ಯ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ: ಅಶೋಕ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ