ಮಡೆನೂರು ಮನು ಜೊತೆ ರಾಜಿ ಮಾಡಿಕೊಂಡ ಸಂತ್ರಸ್ತೆ; ಅತ್ಯಾಚಾರ ಕೇಸ್ ಅಂತ್ಯ
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ವಿರುದ್ಧ ಸ್ನೇಹಿತೆಯೇ ಅತ್ಯಾಚಾರದ ಕೇಸ್ ಹಾಕಿದ್ದರು. ಆ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮನು ಜೊತೆ ಸಂತ್ರಸ್ತೆ ಸಂಧಾನ ಮಾಡಿಕೊಂಡಿದ್ದಾರೆ. ಬಳಿಕ ಅವರು ವಿಡಿಯೋ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರಿಂದ ಮನು ನಿಟ್ಟುಸಿರು ಬಿಡುವಂತಾಗಿದೆ.
ನಟ ಮಡೆನೂರು ಮನು (Madenur Manu) ಅವರ ವಿರುದ್ಧ ಸ್ನೇಹಿತೆಯಿಂದಲೇ ಅತ್ಯಾಚಾರದ ಕೇಸ್ ಹಾಕಲಾಗಿತ್ತು. ಆ ಪ್ರಕರಣಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆಯು ಮನು ಜೊತೆ ರಾಜಿ ಮಾಡಿಕೊಂಡಿದ್ದಾರೆ. ಬಳಿಕ ಅವರು ವಿಡಿಯೋ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘ಒಪ್ಪಂದದಿಂದ ಕೇಸ್ ಕ್ಲೋಸ್ ಆಗಿದೆ’ ಎಂದು ಲಾಯರ್ ಹೇಳಿದ್ದಾರೆ. ‘ಮನಪೂರ್ವಕವಾಗಿಯೇ ಇದನ್ನು ಮಾಡಿಕೊಟ್ಟಿದ್ದೇನೆ’ ಎಂದು ಸಂತ್ರಸ್ತೆ ಹೇಳಿದ್ದಾರೆ. ಪ್ರಕರಣ (Madenur Manu Case) ಕ್ಲೋಸ್ ಆಗಿದ್ದರಿಂದ ನಟ ಮಡೆನೂರು ಮನು ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣರಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

