ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಇಂಡಿಯ ಒಕ್ಕೂಟಕ್ಕೆ ಅಸೆಂಬ್ಲಿ ಚುನಾವಣೆಯಲ್ಲಿ ಹಿನ್ನಡೆಯಾಯಿತು: ರಾಮಲಿಂಗಾರೆಡ್ಡಿ
ರಾಹುಲ್ ಗಾಂಧಿಯವರು ಮಹದೇವಪುರದಲ್ಲಿ 40ಸಾವಿರ ನಕಲಿ ಮತದಾರರನ್ನು ಸೇರಿಸಿಲಾಗಿದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಕೇವಲ ಮಹಾದೇಪುರ ಮಾತ್ರವಲ್ಲ ಬಹಳಷ್ಟು ಕಡೆ ಅಂಥ ಅಕ್ರಮ ನಡೆದಿದೆ, ನಾಳೆ ರಾಹುಲ್ ಗಾಂಧಿಯವರು ಎಲ್ಲ ವಿವರಗಳನ್ನು ನೀಡಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು. 5 ರಂದು ಬೆಂಗಳೂರಿಗೆ ಆಗಮಿಸಬೇಕಿದ್ದ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ನಾಳೆ ಬೆಂಗಳೂರಿಗೆ ಬರಲಿದ್ದಾರೆ.
ಬೆಂಗಳೂರು, ಆಗಸ್ಟ್ 7: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 2014 ರಿಂದ ಚುನಾವಣೆಗಳಲ್ಲಿ ಅಕ್ರಮ (poll irregularities) ನಡೆಯುತ್ತಿದೆ, ಕಾಂಗ್ರೆಸ್ ಪಕ್ಷಕ್ಕೆ ವೋಟು ಹಾಕುವವರ ಹೆಸರುಗಳನ್ನು ಡಿಲೀಟ್ ಮಾಡಿ ಅವರ ಬದಲು ನಕಲಿ ಮತದಾರರ ಹೆಸರುಗಳನ್ನು ಸೇರಿಸಲಾಗುತ್ತಿದೆ ಎಂದರು. 80 ಮತ್ತು 90 ರ ದಶಕಗಳಲ್ಲಿ ಪ್ರಾಕ್ಸಿ ವೋಟಿಂಗ್ ನಡೆಯುತ್ತಿತ್ತು, ಟಿಎನ್ ಶೇಷನ್ ಭಾರತದ ಮುಖ್ಯ ಚುನಾವಣಾ ಕಮೀಷನರ್ ಆಗಿದ್ದಾಗ ಎಲ್ಲ ಅಕ್ರಮಗಳಿಗೆ ತಡೆಹಾಕಿದರು, ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಾವ ಸುಧಾರಣೆಯೂ ಇಲ್ಲ ಎಂದು ರೆಡ್ಡಿ ಹೇಳಿದರು. ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಇಂಡಿಯ ಒಕ್ಕೂಟಕ್ಕೆ 48ರಲ್ಲಿ 30 ಸ್ಥಾನ ಸಿಕ್ಕಿದ್ದವು, ಆದರೆ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಉಲ್ಟಾ ಆಯಿತು ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ಹೊಸ ಐದು ಐರಾವತ ಕ್ಲಬ್ ಕ್ಲಾಸ್ 2.0 ಬಸ್ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

