ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಾಗ ಸಾರಿಗೆ ನೌಕರರೂ ಒಂದು ಹೆಜ್ಜೆ ಮುಂದಿಡಬೇಕಿತ್ತು: ರಾಮಲಿಂಗಾರೆಡ್ಡಿ
ರಾಜ್ಯ ಹೈಕೋರ್ಟ್ ಮಧ್ಯಪ್ರವೇಶ ಮಾಡಿ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೇಳಿರುವುದರಿಂದ ನಾಳೆ ಕೆಎಸ್ಅರ್ಟಿಸಿ ಬಸ್ಸುಗಳು ಎಂದಿನಂತೆ ಚಲಿಸಲಿವೆ, ಒಂದು ಪಕ್ಷ ಮುಷ್ಕರ ನಡೆದಿದ್ದರೂ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿತ್ತು, ಸುಮಾರು 23,000 ಖಾಸಗಿ ಮತ್ತು ಮಾಕ್ಸಿಕ್ಯಾಬ್, ಟೆಂಪೋ ಟ್ರ್ಯಾವೆಲ್ಲರ್ ಗಳ ವ್ಯವಸ್ಥೆ ಮಾಡಿಕೊಂಡಿತ್ತು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರು, ಆಗಸ್ಟ್ 4: ಸಾರಿಗೆ ನೌಕರರರೊಂದಿಗೆ ಸರ್ಕಾರ ನಡೆಸಿದ ಸಭೆ ಯಾಕೆ ವಿಫಲವಾಯಿತು ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಿವಿ9ಗೆ ವಿವರಿಸಿದರು. ಹಿಂದಿನ ಬಿಜೆಪಿ ಸರ್ಕಾರ (BJP government) ಸಾರಿಗೆ ನೌಕರರ ವೇತನ ಪರಿಷ್ಕರಣೆಯನ್ನು ಮಾರ್ಚ್ 2023 ರಲ್ಲಿ ಮಾಡಿರುವುದರಿಂದ ಈಗ ಮಾಡಲಾಗದು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಾರಿಗೆ ನೌಕರರಲ್ಲಿ ಎರಡು ಬಣಗಳಿವೆ, ಒಂದು ಬಣ 2020ರಿಂದ ಹಿಂಬಾಕಿಯಿದೆ ಅಂತ ಹೇಳಿದರೆ ಮತ್ತೊದು ಬಣ 14 ತಿಂಗಳ ಹಿಂಬಾಕಿ ಇದೆ ಅನ್ನುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ತಿಂಗಳ ಅರಿಯರ್ಸ್ ನೀಡಲು ಮುಂದಾಗಿದ್ದು ₹718 ಕೋಟಿ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಅದರೆ ಮತ್ತೊಂದು ಬಣ ಅದನ್ನು ಒಪ್ಪಲು ತಯಾರಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ, ಸಾರಿಗೆ ನೌಕರರು ಸಹ ಒಂದು ಹೆಜ್ಜೆ ಮುಂದೆ ಬರಬೇಕು ಎಂದು ಸಚಿವ ಹೇಳಿದರು.
ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್; ಸರ್ಕಾರವನ್ನು ಟೀಕಿಸುತ್ತಿರುವ ಕುಮಾರಸ್ವಾಮಿಯನ್ನು ಈಗಾಗಲೇ ಭೇಟಿಯಾಗಿದ್ದೇನೆ: ರಾಮಲಿಂಗಾರೆಡ್ಡಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

