ಸಭೆ ಬಳಿಕ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ (Department of Transport) ಜಟಾಪಟಿ ಮುಂದುವರೆದಿದ್ದು, ಸರ್ಕಾರಿ ನೌಕರರನ್ನು ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ. ಆದ್ರೆ, ಸಿದ್ದರಾಮಯ್ಯ ಮನವೊಲಿಕೆಗೆ ಜಗ್ಗದ ಸಾರಿಗೆ ನೌಕರರು ನಾಳೆ (ಆಗಸ್ಟ್ 5) ರಿಂದ ರಾಜ್ಯಾದ್ಯಂತ ಮುಷ್ಕರ ಮಾಡುವುದಾಗಿ ತಿಳಿಸಿದ್ದರು. ಆದ್ರೆ, ಇದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳಿನ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಇನ್ನು ಸಭೆ ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದಾರೆ.
ಬೆಂಗಳೂರು, (ಆಗಸ್ಟ್ 04): ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ (Department of Transport) ಜಟಾಪಟಿ ಮುಂದುವರೆದಿದ್ದು, ಸರ್ಕಾರಿ ನೌಕರರನ್ನು ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮುಂದಾಗಿದ್ದಾರೆ. ಆದ್ರೆ, ಸಿದ್ದರಾಮಯ್ಯ ಮನವೊಲಿಕೆಗೆ ಜಗ್ಗದ ಸಾರಿಗೆ ನೌಕರರು ನಾಳೆ (ಆಗಸ್ಟ್ 5) ರಿಂದ ರಾಜ್ಯಾದ್ಯಂತ ಮುಷ್ಕರ ಮಾಡುವುದಾಗಿ ತಿಳಿಸಿದ್ದರು. ಆದ್ರೆ, ಇದಕ್ಕೆ ಕರ್ನಾಟಕ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳಿನ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶಿಸಿದೆ. ಇನ್ನು ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,ಮೊದಲ ಸಭೆಯಲ್ಲಿ 38 ಅರಿಯರ್ಸ್ ಕೊಡಬೇಕೆಂದು ಕೇಳಿದ್ರು. ಕೊವಿಡ್ ವೇಳೆ 9 ಸಾವಿರ ಕೋಟಿ ಹಣ ನೀಡಿದ್ವಿ ಎಂದು ವರದಿ ಕೊಟ್ಟಿದ್ದರು. ಆ ಕಮಿಟಿ 718 ಕೋಟಿಯಷ್ಟು ಅರಿಯರ್ಸ್ ನೀಡಬೇಕೆಂದು ಹೇಳಿದ್ರು. ಸಾರಿಗೆ ಮುಖಂಡರು ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. 9 ಸಾವಿರ ಕೋಟಿಯಷ್ಟು ಹಣ ನೀಡಿದ್ವಿ ಎಂದು ವರದಿ ಕೊಟ್ಟಿದ್ರು. ಆ ಕಮಿಟಿ 718 ಕೋಟಿಯಷ್ಟು ಅರಿಯರ್ಸ್ ನೀಡಬೇಕೆಂದು ಹೇಳಿದ್ರು/ ಸಾರಿಗೆ ಮುಖಂಡರು ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಪಟ್ಟು. 38 ತಿಂಗಳ ಅರಿಯರ್ಸ್ ಬಿಡುಗಡೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಸರ್ಕಾರಿ ನೌಕರರಿಗೆ ನೀಡುವಂತೆ ಸರಿಸಮಾನ ವೇತನ ಬೇಡಿಕೆ ಇಟ್ಟಿದ್ದಾರೆ. ಸಮಾನ ವೇತನ ಬಗ್ಗೆ ಸಿಎಂ ಮುಂದಿನ ದಿನಗಳಲ್ಲಿ ಚರ್ಚಿಸೋಣ ಅಂದ್ರು. ಹಿಂದಿನ ಸರ್ಕಾರ 2023ರ ಮಾ.17ರಿಂದ ವೇತನ ಪರಿಷ್ಕರಣೆ ಮಾಡಿದೆ. ಆದೇಶ ಅಂದಿನಿಂದಲೇ ಜಾರಿ ಆಗಿದೆ. ಹಾಗಾಗಿ 2027ರಲ್ಲಿ ವೇತನ ಪರಿಷ್ಕರಣೆ ಮಾಡ್ತೀವಿ ಅಂತಾ ಸಿಎಂ ಹೇಳಿದ್ದಾರೆ. ಮುಷ್ಕರ ಮುಂದುವರಿದರೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಧಿವೇಶನ ಮುಗಿದ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

