AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಷ್ಕರ ಮಾಡಿದರೆ ಸಸ್ಪೆಂಡ್ ಮಾಡ್ತೀವಿ ಅಂತ ಹೇಳೋದು ಸರ್ಕಾರದ ಸರ್ವಾಧಿಕಾರಿ ಧೋರಣೆ: ಹಾಸನದ ವ್ಯಕ್ತಿ

ಮುಷ್ಕರ ಮಾಡಿದರೆ ಸಸ್ಪೆಂಡ್ ಮಾಡ್ತೀವಿ ಅಂತ ಹೇಳೋದು ಸರ್ಕಾರದ ಸರ್ವಾಧಿಕಾರಿ ಧೋರಣೆ: ಹಾಸನದ ವ್ಯಕ್ತಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2025 | 6:00 PM

Share

ಸಾರಿಗೆ ನೌಕರರು ಮುಷ್ಕರ ಮಾಡಿದರೆ ಸಸ್ಪೆಂಡ್ ಮಾಡ್ತೀವಿ ಅಂತ ಸರ್ಕಾರ ಹೇಳುತ್ತದೆ, ಈ ಸರ್ಕಾರದ ಪ್ರತಿನಿಧಿಗಳಿಗೆ ಸಂಸಾರಗಳಿಲ್ಲವೇ? ಇದು ಸರ್ವಾಧಿಕಾರ ಧೋರಣೆಯಲ್ಲದೆ ಮತ್ತೇನೂ ಅಲ್ಲ, ಇಷ್ಟು ವರ್ಷ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬಂದಿರುವ ನೌಕರರನ್ನು ಸಸ್ಪೆಂಡ್ ಮಾಡಿದರೆ ಅವರು ಬದುಕೋದು ಹೇಗೆ? ಯಾರಿಗೂ ತೊಂದರೆಯಾಗದಂಥ ಮಾರ್ಗವನ್ನು ಸರ್ಕಾರ ಹುಡುಕಬೇಕು ಎಂದು ಹಾಸನದ ವ್ಯಕ್ತಿ ಹೇಳಿದರು.

ಹಾಸನ, ಆಗಸ್ಟ 4: ಹಾಸನ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಕೆಎಸ್​ಆರ್​ಟಿಸಿ ನೌಕರರ ಪ್ರಸ್ತಾಪಿತ ಮುಷ್ಕರದ ಬಗ್ಗೆ ನಮ್ಮ ಪ್ರತಿನಿಧಿಯೊಂದಿಗೆ ಅರ್ಥವತ್ತಾಗಿ ಮಾತಾಡಿದ್ದಾರೆ. ನೌಕರರು ಮುಷ್ಕರ ಮಾಡುವ ವಿಷಯವನ್ನು ಬಹಳ ದಿನಗಳಿಂದ ಹೇಳುತ್ತಿದ್ದಾರೆ, ಹಾಗಾಗಿ ಮುಷ್ಕರದಿಂದ ಜನರಿಗೆ ತೊಂದರೆಯಾಗದ ಹಾಗೆ ಸರ್ಕಾರ ಪರ್ಯಾಯ ವ್ಯವಸ್ಥೆ (alternative arrangement) ಮಾಡಿಕೊಳ್ಳಬೇಕಿತ್ತು, ಮುಷ್ಕರ ನಡೆದರೆ ತೊಂದರೆಗೊಳಗಾಗೋದು ಜನಸಾಮಾನ್ಯನೇ ಹೊರತು ಬೇರೆ ಯಾರೂ ಅಲ್ಲ, ಅವನಿಗೆ ನೂರೆಂಟು ಕೆಲಸಗಳಿರುತ್ತವೆ, ಆಸ್ಪತ್ರೆ ಬರೋದಿರುತ್ತದೆ, ತಾಲೂಕು ಕಚೇರಿಯಲ್ಲಿ ಕೆಲಸವಿರುತ್ತದೆ, ಬಸ್​ ಸಂಚಾರ ನಿಂತುಹೋದರೆ ಓಡಾಡೋದು ಹೇಗೆ ಎಂದು ಅವರು ಕೇಳುತ್ತಾರೆ.

ಇದನ್ನೂ ಓದಿ:    ಸಿಎಂ ಸಂಧಾನ ಸಭೆ ವಿಫಲ: ಸಾರಿಗೆ ಮುಷ್ಕರ ಫಿಕ್ಸ್, ನಾಳೆ ಸಾರಿಗೆ ಬಸ್​ಗಳು ರಸ್ತೆಗೆ ಇಳಿಯಲ್ಲ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ