AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕೊನೆಯ ವಿಕೆಟ್ ಉರುಳಿಸಿದ ಸಿರಾಜ್; ತಂಡದ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು ನೀವೇ ನೋಡಿ

IND vs ENG: ಕೊನೆಯ ವಿಕೆಟ್ ಉರುಳಿಸಿದ ಸಿರಾಜ್; ತಂಡದ ಗೆಲುವಿನ ಸಂಭ್ರಮಾಚರಣೆ ಹೇಗಿತ್ತು ನೀವೇ ನೋಡಿ

ಪೃಥ್ವಿಶಂಕರ
|

Updated on: Aug 04, 2025 | 6:45 PM

Share

India's Thrilling Oval Victory: ಭಾರತ ಕ್ರಿಕೆಟ್ ತಂಡವು ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ತಂಡ 367 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಜಯದೊಂದಿಗೆ ಐದು ಪಂದ್ಯಗಳ ಸರಣಿ 2-2ರಲ್ಲಿ ಅಂತ್ಯಗೊಂಡಿತು. ಸಿರಾಜ್ ಅವರ ಕೊನೆಯ ವಿಕೆಟ್ ಅತ್ಯಂತ ರೋಮಾಂಚಕಾರಿಯಾಗಿತ್ತು.

ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದ ಟೀಂ ಇಂಡಿಯಾ, ಇದೀಗ ಓವಲ್‌ನ ಐತಿಹಾಸಿಕ ಮೈದಾನದಲ್ಲಿ ಮತ್ತೊಂದು ಸ್ಮರಣೀಯ ಗೆಲುವು ಸಾಧಿಸಿ ಸರಣಿಯನ್ನು 2-2 ರಿಂದ ಅಂತ್ಯಗೊಳಿಸಿದೆ. ತಂಡದ ಇಬ್ಬರು ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಮಾರಕ ಬೌಲಿಂಗ್‌ನಿಂದಾಗಿ ಗೆಲುವಿನ ಕನಸು ಕಂಡಿದ್ದ ಆಂಗ್ಲರಿಗೆ, ಟೀಂ ಇಂಡಿಯಾ ಮರೆಯಲಾಗದಂತಹ ಸೋಲಿನ ಶಾಕ್ ನೀಡಿತು. ವಾಸ್ತವವಾಗಿ ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ ಗೆಲುವಿಗೆ 35 ರನ್ ಬೇಕಿದ್ದರೆ, ಭಾರತದ ಗೆಲುವಿಗೆ 4 ವಿಕೆಟ್​ಗಳು ಬೇಕಿದ್ದವು. ಇದಕ್ಕೆ ಪೂರಕವಾಗಿ ದಿನದಾಟದ ಮೊದಲ ಓವರ್​ನಲ್ಲೇ ಇಂಗ್ಲೆಂಡ್‌ 2 ಬೌಂಡರಿಗಳನ್ನು ಬಾರಿಸಿ ಗೆಲುವು ನಮ್ಮದೆ ಎಂದು ಬೀಗುತ್ತಿತ್ತು. ಆದರೆ ಆ ನಂತರ ನಡೆದಿದ್ದು ಇತಿಹಾಸ. ಸಿರಾಜ್ ಹಾಗೂ ಪ್ರಸಿದ್ಧ್ ಕರಾರುವಕ್ಕಾದ ದಾಳಿ ಸಂಘಟಿಸಿ ಇಂಗ್ಲೆಂಡ್‌ ತಂಡವನ್ನು 367 ರನ್​ಗಳಿಗೆ ಕಟ್ಟಿಹಾಕಿದರು. ಈ ಮೂಲಕ ಗಿಲ್ ಪಡೆ 6 ರನ್​ಗಳ ಜಯ ಸಾಧಿಸಿತು.

ಓವಲ್‌ನಲ್ಲಿ ಟೀಂ ಇಂಡಿಯಾ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದ ಸಿರಾಜ್ 86ನೇ ಓವರ್​ನ ಮೊದಲ ಎಸೆತದಲ್ಲಿ ಗಸ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್‌ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಸಿರಾಜ್ ವಿಕೆಟ್ ಪಡೆಯುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸಂಭ್ರಮದ ಅಲೆಯಲ್ಲಿ ಮಿಂದೇದಿತ್ತು. ಇತ್ತ ಟೀಂ ಇಂಡಿಯಾ ಆಟಗಾರರು ಕೂಡ ಸೋಲುವ ಪಂದ್ಯವನ್ನು ಗೆದ್ದುಕೊಂಡ ಖುಷಿಯಲ್ಲಿ ಕುಣಿದು ಕುಪ್ಪಳಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ