ರಾಹುಲ್ ಗಾಂಧಿ ಸಿಡಿಸಬೇಕೆಂದಿದ್ದ ಬಾಂಬು ಶಿವಕಾಶಿಯಲ್ಲಿ ತಯಾರಾಗಿರಬಹುದು: ಸುನಿಲ್ ಕುಮಾರ, ಬಿಜೆಪಿ ಶಾಸಕ
ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಅರೋಪಿಸುವವರು ಇಷ್ಟು ಸುಮ್ಮನಿದ್ದಿದ್ದು ಯಾಕೆ? ಚುನಾವಣೆ ಮುಗಿದು ಒಂದೂಕಾಲು ವರ್ಷಗಳ ನಂತರ ಯಾಕೀ ವರಾತ? ಚುನಾವಣೆ ಹತ್ತಿರದಲ್ಲಿದ್ದಾಗ ಮತದಾರರ ಪಟ್ಟಿಯನ್ನು ನೋಡಲಿಲ್ಲ, ಕಾಂಗ್ರೆಸ್ ಗೆದ್ದರೆ ಎಲ್ಲ ಓಕೆ, ಸೋತರೆ ಈವಿಎಂ ಸರಿಯಿಲ್ಲ, ಪಟ್ಟಿ ಸರಿಯಿಲ್ಲ ಎಂಬ ಆರೋಪಗಳು, ಈ ಹಿನ್ನೆಲೆಯಲ್ಲೇ ನಾವು ಒನ್ ನೇಷನ್ ಒನ್ ಎಲೆಕ್ಷನ್ ಬೇಕೆನ್ನುವುದು ಎಂದು ಸುನೀಲ ಕುಮಾರ್ ಹೇಳಿದರು.
ಬೆಂಗಳೂರು, ಆಗಸ್ಟ್ 7: ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಲೋಕಸಭಾ ಮತ್ತು ಇತರ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂದು ಪತ್ರಿಕಾ ಗೋಷ್ಠಿ ನಡೆಸಿ ವಿವರಗಳನ್ನು ನೀಡಿದರೆ ಇತ್ತ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಸುನೀಲ ಕುಮಾರ, ಸಂಸತ್ತಿನ ವಿರೋಧ ಪಕ್ಷದ ನಾಯಕ ಚುನಾವಣಾ ಆಯೋಗದ ಕಾರ್ಯವಿಧಾನವನ್ನು ಪ್ರಶ್ನಿಸುವುದು ಎಷ್ಟು ಸರಿ ಅಂತ ಕೇಳಿದರು. ಅವರು ಸಿಡಿಸುತ್ತೇನೆ ಎಂದು ಹೇಳಿದ ಅಣುಬಾಂಬ್ ಶಿವಕಾಶಿಯಲ್ಲಿ ತಯಾರಾಗಿದ್ದು ಅಂತ ಕಾಣುತ್ತದೆ, ಅಲ್ಲಿ ತಯಾರಾಗುವ ಪಟಾಕಿಗಳು ಹೇಗಿರುತ್ತವೆ ಅನ್ನೋದನ್ನು ದೀಪಾವಳಿ ಸಂದರ್ಭದಲ್ಲಿ ನೋಡುತ್ತಿರುತ್ತೇವೆ ಅಂತ ಸುನೀಲ ಕುಮಾರ್ ಗೇಲಿ ಮಾಡಿದರು. ಯಾವುದೇ ಮತಕ್ಷೇತ್ರದಲ್ಲಿ ಮತದಾರರರ ಪಟ್ಟಿಗೆ ಹೆಸರುಗಳನ್ನು ಸೇರಿಸಲು ಇಲ್ಲವೇ ಡಿಲೀಟ್ ಮಾಡಲು ಎಲ್ಲ ರಾಜಕೀಯ ಪಕ್ಷಗಳು ಬೂತ್ ಲೆವೆಲ್ ಆಫೀಸರ್ ಗಳನ್ನು ನೇಮಕ ಮಾಡುತ್ತವೆ, ಹಾಗಾದರೆ ಕಾಂಗ್ರೆಸ್ ಪಕ್ಷಕ್ಕೆ ಬಿಎಲ್ಒ 2ಗಳು ಸಿಕ್ಕೇ ಇಲ್ಲವೇ ಎಂದು ಸುನೀಲ ಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ: ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನಿಭಾಯಿಸಲಾಗುತ್ತಿಲ್ಲ, ಅಧ್ಯಕ್ಷನಾಗುವ ಮಾತು ಎಲ್ಲಿಂದ ಬಂತು? ಸುನೀಲ ಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

