ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನಿಭಾಯಿಸಲಾಗುತ್ತಿಲ್ಲ, ಅಧ್ಯಕ್ಷನಾಗುವ ಮಾತು ಎಲ್ಲಿಂದ ಬಂತು? ಸುನೀಲ ಕುಮಾರ್
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪಕ್ಷದ ಚೌಕಟ್ಟಿನೊಳಗೆ ಇದ್ದುಕೊಂಡೇ ತಾನು ವರಿಷ್ಠರಿಗೆ ವರದಿ ಸಲ್ಲಿಸಿದ್ದೇನೆ, ಬಣ ರಾಜಕೀಯದಲ್ಲಿ ತಾನು ಬೀಳಲ್ಲ, ಪಕ್ಷದ ಕಾರ್ಯಕರ್ತರು, ಮಾಜಿ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸುವುದು ಸರಿಯಲ್ಲ, ತಾನು ಯಾರ ವಿರುದ್ಧವೂ ಅಲ್ಲ ಯಾರ ಪರವೂ ಅಲ್ಲ, ಪಕ್ಷದಲ್ಲಿ ಆಗುತ್ತಿರುವ ವಿಷಯಗಳು ತಳಮಟ್ಟದ ಕಾರ್ಯಕರ್ತನನ್ನು ಘಾಸಿಗೊಳಿಸಿವೆ ಎಂದು ಸುನೀಲ ಕುಮಾರ್ ಹೇಳಿದರು.
ಬೆಂಗಳೂರು: ಅತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸುತ್ತಿದ್ದರೆ ಇತ್ತ ಬೆಂಗಳೂರಲ್ಲಿ ಬಿಜೆಪಿಯು ಇವತ್ತು ಮೇಲಿಂದ ಮೇಲೆ ಮೂರು ಸಭೆಗಳನ್ನು ನಡೆಸುತ್ತಿದೆ. ಬಿಜೆಪಿಯಲ್ಲೂ ಹೈಕಮಾಂಡ್ ರೊಚ್ಚಿಗೇಳುವಷ್ಟು ಒಳಜಗಳಗಳು. ನಗರಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಕಾರ್ಕಳ ಶಾಸಕ ಸುನೀಲ ಕುಮಾರ ತಾನು ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಖಂಡಿತ ಆಕಾಂಕ್ಷಿಯಲ್ಲ, ಪ್ರಧಾನ ಕಾರ್ಯದರ್ಶಿಯ ಹುದ್ದೆಯನ್ನೇ ನಿಭಾಯಿಸಲಾಗದ ಕಾರಣ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು. ಬಿಜೆಪಿಯಲ್ಲಿ ಅಧ್ಯಕ್ಷನ ಆಯ್ಕೆಗೆ ಚುನಾವಣೆ ನಡೆಯಲ್ಲ, ಅದೊಂದು ಔಪಚಾರಿಕತೆ, ಸರ್ವಾನುಮತದಿಂದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿ
Latest Videos