ಬೆಳಗಾವಿ ಕಾಂಗ್ರೆಸ್ ಅಧಿವೇಶನ; ಸೋನಿಯಾ ಗಾಂಧಿ ಬಡವರಿಗಾಗಿ ಅನೇಕ ಯೋಜನೆಗಳನ್ನು ನೀಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿಯವರು ಯುಪಿಎ ಚೇರ್ಪರ್ಸನ್ ಆಗಿ ಬಡವರ ಏಳಿಗೆಗೆ ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ತಂದರು, ಮಹಾತ್ಮಾ ಗಾಂಧಿ ನರೇಗಾ ಯೋಜನೆ, ಆಹಾರ ಭದ್ರತೆ ಯೋಜನೆ, ಆರ್ಟಿಐ ಕಾಯ್ದೆ ಮೊದಲಾದವು ಅವರು ಕೊಡುಗೆಯಾಗಿವೆ, ಅದರೆ ಎನ್ಡಿಎ ಸರ್ಕಾರ ಕೇವಲ ಗಾಂಧಿ ಕುಟುಂಬವನ್ನು ಟೀಕಿಸಿ ಅಧಿಕಾರಕ್ಕೆ ಬಂದಿದೆ ಎಂದು ಖರ್ಗೆ ಹೇಳಿದರು.
ಬೆಳಗಾವಿ: ಗಾಂಧಿ ಭಾರತ ಅಧಿವೇಶನದಲ್ಲಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಯವರ ಗುಣಗಾನ ಮಾಡಿದರು. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನ ಮಂತ್ರಿಯಾಗಬೇಕಿತ್ತು, ಆದರೆ ಅವರು ಹುದ್ದೆಯನ್ನು ತ್ಯಾಗ ಮಾಡಿ ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರನ್ನು ಪ್ರಧಾನ ಮಂತ್ರಿ ಮಾಡಿದರು, ಇಂದಿರಾ ಗಾಂಧಿಯವರು ದೇಶಕ್ಕಾಗಿ ತಮ್ಮ ಜೀವವನ್ನು ಬಲಿದಾನ ಮಾಡಿದ್ದರು, ಹಾಗೆಯೇ ರಾಜೀವ್ ಗಾಂಧಿಯವರು ರಾಷ್ಟ್ರಕ್ಕಾಗಿ ತಮ್ಮ ಜೀವ ಬಲಿಕೊಟ್ಟರು-ಹೀಗೆ ದೇಶಕ್ಕಾಗಿ ಬಲಿದಾನ ನೀಡಿದ ಪರಂಪರೆಯನ್ನು ಈ ಕುಟುಂಬ ಹೊಂದಿದೆ, ಸೋನಿಯ ಗಾಂಧಿ ಮಾಡಿದಂಥ ತ್ಯಾಗವನ್ನು ಈಗಿನ ಕೇಂದ್ರ ಸರ್ಕಾರದಲ್ಲಿ ಯಾರಾದರೂ ಮಾಡಿಯಾರೆ ಎಂದು ಖರ್ಗೆ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗಾಂಧಿ ಭಾರತ: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಹರಿದು ಬಂದ ಕಾಂಗ್ರೆಸ್ ನಾಯಕರ ದಂಡು
Latest Videos