ಒಂದು ಕೆರೆ ಕಟ್ಟಲಾಗದ ಸಿದ್ದರಾಮಯ್ಯ, ಕೆಅರ್ಎಸ್ ಕಟ್ಟಿದ ಒಡೆಯರ್ ನಡುವೆ ಎಂಥ ಹೋಲಿಕೆ? ಅಶೋಕ
ಯತೀಂದ್ರ ತಮ್ಮ ತಂದೆ ಸಿದ್ದರಾಮಯ್ಯರನ್ನು ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರೊಂದಿಗೆ ಹೋಲಿಸಿ ಮಾತಾಡಿದ್ದನ್ನು ತಿರುಚುಲಾಗಿದೆ ಕ್ಷಮೆ ಕೇಳಲ್ಲ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ, ಅವರು ಮಾಧ್ಯಮದವರು ತಿರುಚಿದ್ದಾರೆ ಅಂತ ಹೇಳಲ್ಲ, ಯಾಕೆಂದರೆ ಹೇಳಿದ್ದನ್ನು ನೀವು ತೋರಿಸುತ್ತೀರಿ! ಒಡೆಯರ್, ಬೆಂಗಳೂರು ಮತ್ತು ಮೈಸೂರಿಗೆ ಕುಡಿಯುವ ನೀರು ಒದಗಿಸುವ ಕೆಅರ್ಎಸ್ ಕಟ್ಟಿದರು, ಸಿದ್ದರಾಮಯ್ಯ ಒಂದು ಕೆರೆನಾದರೂ ಕಟ್ಟಿದ್ದಾರಾ? ಎಂದು ಕೇಳಿದರು.
ಮೈಸೂರು, ಜುಲೈ 28: ಸಿದ್ದರಾಮಯ್ಯ ಸರ್ಕಾರ (Siddaramaiah government) ಅಭಿವೃದ್ಧಿ ಮಾಡಿದ್ದರೆ ಅವರ ಪಕ್ಷದ ಶಾಸಕರೇ ಯಾಕೆ ಅನುದಾನ ಬಿಡುಗಡೆಯಾಗಿಲ್ಲ, ಅಭಿವೃದ್ಧಿಯಾಗಿಲ್ಲ ಅಂತ ಪ್ರಲಾಪಿಸುತ್ತಿದ್ದರು? ಹಾಗೊಂದು ವೇಳೆ ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ದರೆ ವಿಧಾನ ಸಭೆಯಲ್ಲಿ ಹೇಳಿಕೊಳ್ಳುತ್ತಿದ್ದರು ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್; ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷ ಕಳೆದರೂ ಕಾಮಗಾರಿ ಶುರುವಾಗಿಲ್ಲ ಅನ್ನುತ್ತಾರೆ, ದಾವಣಗೆರೆ ಜಿಲ್ಲೆಯ ಶಾಸಕರೊಬ್ಬರು ಅತ್ಮಹತ್ಯೆ ಮಾಡ್ಕೋತೀನಿ ಅಂತಾರೆ, ಏನು ಕಡೆದು ಕಟ್ಟೆಹಾಕಿದ್ದಾರೆ ಅಂತ ಸಿದ್ದರಾಮಯ್ಯ ಮತಾಡುತ್ತಾರೆ? ಸದನದಲ್ಲಿ ಅವರು ಯಾವತ್ತಾದರೂ ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ಎಂದು ಅಶೋಕ ಪ್ರಶ್ನಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡೋದು ಶತಸಿದ್ಧ, ಅಲ್ಪಾವಧಿಯ ವಿಸ್ತರಣೆಯೂ ಸಿಗಲಾರದು: ಆರ್ ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

