ಹಿಂದುಳಿದ ವರ್ಗಗಳಿಗೆ ಏನೂ ಮಾಡಲಾಗಿಲ್ಲ ಅಂತ ರಾಹುಲ್ ಹೇಳಿದರೆ, ಸಿದ್ದರಾಮಯ್ಯ ಉಲ್ಟಾ ಹೇಳುತ್ತಾರೆ: ಈಶ್ವರಪ್ಪ
ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ, ಅವರ ಕಾಳಜಿ ವಹಿಸಬೇಕಾಗಿತ್ತು ಎಂದು ರಾಹುಲ್ ಗಾಂಧಿಯವರಿಗೆ ಈಗಲಾದರೂ ಜ್ಞಾನೋದಯವಾಯಿತಲ್ಲ ಎಂದು ಅವರ ಪ್ರಾಮಾಣಿಕತೆಯನ್ನು ಅಭಿನಂದಿಸುತ್ತೇನೆ, ಆದರೆ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಏನೂ ಬೇಡವಾ? ರಾಹುಲ್ ಖುದ್ದು ಸತ್ಯವನ್ನು ಅಂಗೀಕರಿಸಿರುವಾಗ, ಇವರು ಹೇಗೆ ಅವರನ್ನು ಹೇಗೆ ಯಾವತ್ತಿಗೂ ಹಿಂದುಳಿದ ವರ್ಗಗಳ ಪರ ಅನ್ನುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಶಿವಮೊಗ್ಗ, ಜುಲೈ 28: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ರಾಹುಲ್ ಗಾಂಧಿಯವರಿಗೆ (Rahul Gandhi) ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಹೇಳಿದರು. ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಅವರು, ಖದ್ದು ರಾಹುಲ್ ಗಾಂಧಿಯವರೇ ಮೊನ್ನೆ ದೆಹಲಿಯಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ, ಒಬಿಸಿ ಸಮಾಜಳಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ, ಇದರ ಬಗ್ಗೆ ಇದುವರೆಗೆ ತನಗೆ ಗೊತ್ತಿರಲಿಲ್ಲ, ಇನ್ನು ಮುದೆ ಎಲ್ಲ ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಡುತ್ತೇನೆ ಅಂತ ಹೇಳಿದರೆ, ಸಿದ್ದರಾಮಯ್ಯ ಅದೇ ಕಾರ್ಯಕ್ರಮದಲ್ಲಿ, ರಾಹುಲ್ ಗಾಂಧಿಯವರು ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳುತ್ತಾರೆ, ಇದು ಬಕೆಟ್ ಹಿಡಿಯುವ ಕೆಲಸವಲ್ಲದೆ ಮತ್ತೇನು ಎಂದು ಈಶ್ವರಪ್ಪ ಹೇಳುತ್ತಾರೆ.
ಇದನ್ನೂ ಓದಿ: ಮುಸಲ್ಮಾನರಿಗೆ ಬದ್ಧತೆ ಅನ್ನೋದಿಲ್ಲ, ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

