ಪಕ್ಷದ ವಿರುದ್ಧ ನಾನು ಬಹಿರಂಗ ಹೇಳಿಕೆ ನೀಡಿದ ನಂತರವೇ ಎಲ್ಲೆಡೆ ಚರ್ಚೆಗಳು ಶುರುವಾದವು: ಕೆಎಸ್ ಈಶ್ವರಪ್ಪ
ಬಹಿರಂಗವಾಗಿ ಹೇಳಿಕೆ ನೀಡದಿರುವುದು ಹೇಡಿತನ ಅಂತ ಭಾವಿಸುವುಸದಿಲ್ಲ, ಹಾಗೆ ಹೇಳಿಕೆ ನೀಡುವುದನ್ನು ಅಶಿಸ್ತು ಎಂದು ಪರಿಗಣಿಸಲಾಗುತ್ತದೆ, ಅದರೆ ಪಕ್ಷದಲ್ಲಿ ಸುಧಾರಣೆ ತರಲು ಕೆಲವು ಸಲ ಅಶಿಸ್ತನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಈಶ್ವರಪ್ಪ ಹೇಳಿದರು. ಪಕ್ಷವನ್ನು ಕಟ್ಟಿದ ಶ್ರೇಯಸ್ಸು ಬೇರೆ ಮಹಾನುಭಾವರಿಗೆ ಸಲ್ಲುತ್ತದೆ, ಅದನ್ನು ಬೆಳೆಸಲು ತಾವು ಶ್ರಮಿಸಿದ್ದಾಗಿ ಅವರು ಹೇಳಿದರು.
ಶಿವಮೊಗ್ಗ, ಜುಲೈ 7: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಶಾಸಕ ಕೆಎಸ್ ಈಶ್ವರಪ್ಪ, ಬಿಜೆಪಿಯಲ್ಲಿ ಎಲ್ಲರ ಅಪೇಕ್ಷೆಯಂತೆ ಬದಲಾವಣೆ ನಡೆಯುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ತಮ್ಮ ಪಕ್ಷ ಸರಿಯಾಗಬೇಕು ಅಂತ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೊದಲ ಬಿಜೆಪಿ ನಾಯಕ (BJP leader) ತಾನು, ಅದಾದ ಬಳಿಕವೇ ಬದಲಾವಣೆ ಬಗ್ಗೆ ಚರ್ಚೆಗಳು ಶುರುವಾದವು, ಈಗಲೂ ಅನೇಕ ಬಿಜೆಪಿ ಕಾರ್ಯಕರ್ತರು ತನಗೆ ಫೋನ್ ಮಾಡಿ, ನೀವು ಹೇಳಿದ್ದು ಸರಿ, ನೀವು ತೆಗೆದುಕೊಂಡ ನಿಲುವು ಸರಿ ಅದರೆ ನಿಮ್ಮಷ್ಟು ಧೈರ್ಯ ನಮಗಿಲ್ಲ ಎಂದು ಹೇಳುತ್ತಿರುತ್ತಾರೆ ಎಂದು ಈಶ್ವರಪ್ಪ ಹೇಳಿದರು. ಅವರು ಫೋನ್ ಮಾಡಿ ತಮ್ಮ ಇಂಗಿತವನ್ನು ತನಗೆ ತಿಳಿಸುತ್ತಾರೆ ಮತ್ತು ಅದನ್ನು ಬೇರೆಯವರಿಗೆ ತಿಳಿಸುವ ಕೆಲಸ ತಾನು ಮಾಡುತ್ತಿರುವುದಾಗಿ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕೆಎಸ್ ಈಶ್ವರಪ್ಪ ಕುಟುಂಬಕ್ಕೆ ಎದುರಾಯ್ತು ಸಂಕಷ್ಟ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಧರ್ಮಸ್ಥಳ ಪ್ರಕರಣ: ಅನಾಮಿಕ ಮುಸುಕುಧಾರಿಯ ಅಸಲಿ ಮುಖ, ಫೋಟೊ ಬಹಿರಂಗ!

‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?

ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್ಗೆ ಭರ್ಜರಿ ಜಯ

ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
