AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸಲ್ಮಾನರಿಗೆ ಬದ್ಧತೆ ಅನ್ನೋದಿಲ್ಲ, ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ

ಮುಸಲ್ಮಾನರಿಗೆ ಬದ್ಧತೆ ಅನ್ನೋದಿಲ್ಲ, ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ: ಕೆಎಸ್ ಈಶ್ವರಪ್ಪ, ಮಾಜಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2025 | 1:03 PM

Share

ಕೇಂದ್ರ ಸರ್ಕಾರವೇ ಮುಸಲ್ಮಾನರಿಗೆ ವಸತಿ ಯೋಜನೆಯಲ್ಲಿ ಶೇಕಡ 15 ರಷ್ಟು ಮೀಸಲಾತಿ ಕಲ್ಪಿಸಿದೆಯಲ್ಲ ಅಂತ ಪತ್ರಕರ್ತರು ಹೇಳಿದಾಗ ಈಶ್ವರಪ್ಪ ಪದಗಳಿಗಾಗಿಗಿ ತಡವರಿಸಲಾರಂಭಿಸಿದರು. ಡಾ ಬಿ ಅರ್ ಅಂಬೇಡ್ಕರ್ ಅವರು ಧರ್ಮಾಧರಿತ ಮೀಸಲಾತಿ ಸಲ್ಲದು ಅಂತ ಹೇಳಿದ್ದಾರೆ ಅಂತ ಹೇಳುವ ಈಶ್ವರಪ್ಪ, ಅಲ್ಪಸಂಖ್ಯಾತರು ಅನ್ನೋದು ಒಂದು ಧರ್ಮ, ಅದರಲ್ಲಿ ಕ್ರಿಶ್ಚಿಯನ್ನರು ಮುಸಲ್ಮಾನರು ಇದ್ದಾರೆ ಅನ್ನುತ್ತಾರೆ.

ಶಿವಮೊಗ್ಗ, ಜೂನ್ 23: ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆಗೊಂಡು ತಮ್ಮದೇ ಆದ ರಾಷ್ಟ್ರಭಕ್ತರ ಬಳಗ ಸ್ಥಾಪಿಸಿಕೊಂಡಿದ್ದರೂ ಬಿಜೆಪಿಯ ಗುಂಗಿನಿಂದ ಹೊರಬಂದಿಲ್ಲ. ಈಗಲೂ ಅವರು ಬಿಜೆಪಿ ಪರವೇ ಮಾತಾಡುತ್ತಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಅವರು ವಸತಿ ಯೋಜನೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿ ಕಲ್ಪಿಸಿರುವ ರಾಜ್ಯ ಸರ್ಕಾರದ (state government) ಕ್ರಮವನ್ನು ಪ್ರಶ್ನಿಸಿ, ಮುಸಲ್ಮಾನರು ಕಾಂಗ್ರೆಸ್ ನಿಂದ ವಿಮುಖರಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಮುಸಲ್ಮಾನರು ಗೆದ್ದಿತ್ತಿನ ಬಾಲ ಹಿಡಿಯುವರರು, ಅವರಿಗೆ ಬದ್ಧತೆ ಅನ್ನೋದಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ನರೇಂದ್ರ ಮೋದಿ ಜಿಂದಾಬಾದ್ ಅಂತ ಹೇಳಿ ಬಿಜೆಪಿ ವೋಟು ಹಾಕಿದರು ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:  ರಾಜಕೀಯ ಮತ್ತು ಸ್ನೇಹ ಬೇರೆ ಬೇರೆ, ನಾನು ಮತ್ತು ಯಡಿಯೂರಪ್ಪ ಅಣ್ಣತಮ್ಮಂದಿರಂತೆ: ಕೆಎಸ್ ಈಶ್ವರಪ್ಪ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ