ಬಿಜೆಪಿ ಬಿಟ್ಟು ಈಶ್ವರಪ್ಪನವರ ರಾಷ್ಟ್ರಭಕ್ತರ ಬಳಗ ಸೇರಿದ ಶಿವಮೊಗ್ಗದ ಕೆಲ ಸ್ಥಳೀಯ ಮುಖಂಡರು
ನಿಮಗೆ ನೆನಪಿರಬಹುದು, 2024ರ ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಕೇವಲ 19 ಸಾವಿರದಷ್ಟು ವೋಟು ಪಡೆದು ಠೇವಣಿ ಕಳೆದುಕೊಂಡಿದ್ದರು. ಹಿಂದೊಮ್ಮೆ ಅವರು ಸ್ಥಾಪಿಸಿದ್ದ ರಾಯಣ್ಣ ಬ್ರಿಗೇಡ್ಗೆ ಆಗಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಕೊಕ್ಕೆ ಹಾಕಿದ್ದರು. ಇವತ್ತು ಬಿಜೆಪಿ ಬಿಟ್ಟು ಈಶ್ವರಪ್ಪ ಪಕ್ಷ ಸೇರಿದವರಲ್ಲಿ ಹೆಚ್ಚಿನವರು ವಯಸ್ಕರಂತೆ ಕಂಡರು. ಯುವಕರಿಗೆ ರಾಷ್ಟ್ರಭಕ್ತರ ಬಳಗದ ಮೇಲೆ ನಿರೀಕ್ಷೆ ಇದ್ದಂತಿಲ್ಲ.
ಶಿವಮೊಗ್ಗ, ಜೂನ್ 18: ಶಿವಮೊಗ್ಗ ನಗರದ ಕೆಲ ಬಿಜೆಪಿ ಮುಖಂಡರು (BJP leaders) ಇಂದು ವಿದ್ಯುಕ್ತವಾಗಿ ಪಕ್ಷವನ್ನು ತ್ಯಜಿಸಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕಳೆದ ಲೋಕಸಭಾ ಚುನಾವಣೆಗಿಂತ ಮುಂಚೆ ಹುಟ್ಟುಹಾಕಿದ ರಾಷ್ಟ್ರಭಕ್ತರ ಬಳಗವನ್ನು ಸೇರಿದರು. ಪಕ್ಷವನ್ನು ಸೇರಿದವರಿಗೆ ಈಶ್ವರಪ್ಪ ಶಾಲು ಹೊದೆಸಿ ಬರಮಾಡಿಕೊಂಡರು. ಬಿಜೆಪಿಯ ನಗರಸಭಾ ವಾರ್ಡ್ ಅಧ್ಯಕ್ಷರು, ಸ್ಥಳೀಯ ಮುಖಂಡರು ಇಂದು ಹೊಸ ಪಕ್ಷವನ್ನು ಸೇರಿದರು. ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪನವರು ಇದೇ ಪಕ್ಷದಿಂದ ಬಿಜೆಪಿಯ ಬಿವೈ ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಹೀನಾಯವಾಗಿ ಸೋತಿದ್ದರು.
ಇದನ್ನೂ ಓದಿ: ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್ ವೈ-ಈಶ್ವರಪ್ಪ, ವಿಡಿಯೋ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos