ರಾಜಕೀಯ ಮತ್ತು ಸ್ನೇಹ ಬೇರೆ ಬೇರೆ, ನಾನು ಮತ್ತು ಯಡಿಯೂರಪ್ಪ ಅಣ್ಣತಮ್ಮಂದಿರಂತೆ: ಕೆಎಸ್ ಈಶ್ವರಪ್ಪ
ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಯ ಶಪಥಗೈದಿರುವಂತೆ ರಾಜ್ಯ ಬಿಜೆಪಿಯ ಶುದ್ಧೀಕರಣ ಆಗದ ಹೊರತು ತಾನು ಬಿಜೆಪಿಗೆ ವಾಪಸ್ಸು ಹೋಗೋದಿಲ್ಲ ಎಂದು ಹೇಳುವ ಈಶ್ವರಪ್ಪ, ತಂದೆ ಮಗನ ಕೈಯಿಂದ ಬಿಜೆಪಿ ಮುಕ್ತಿಹೊಂದಿ ಸಾಮೂಹಿಕ ನಾಯಕತ್ವಕ್ಕೆ ಒತ್ತು ಸಿಗಬೇಕು ಎಂದರು. ಬಿಜೆಪಿಯ ಹಿಂದಿನ ದಿನಗಳನ್ನು ಮೆಲಕು ಹಾಕುವುದನ್ನು ಈಶ್ವರಪ್ಪ ಮರೆಯಲಿಲ್ಲ.
ಕೊಪ್ಪಳ, ಜೂನ್ 17: ನಗರದಲ್ಲಿಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ತಾನು ಮತ್ತು ಬಿಎಸ್ ಯಡಿಯೂರಪ್ಪ (BS Yediyurappa) ಅಣ್ಣತಮ್ಮಂದಿರಂತೆ, ರಾಜಕೀಯವೇ ಬೇರೆ, ಸ್ನೇಹ-ವಿಶ್ವಾಸವೇ ಬೇರೆ ಎಂದು ಹೇಳಿದರು. ಮೊನ್ನೆ ತನಗೆ ಮೈಯಲ್ಲಿ ಹುಷಾರಿರಲಿಲ್ಲ, ಯಡಿಯೂರಪ್ಪ ಫೋನ್ ಮಾಡಿ ಆರೋಗ್ಯ ವಿಚಾರಿಸಿದರು, ಹಾಗೆಯೇ ತನ್ನ ಹುಟ್ಟುಹಬ್ಬದಂದು ತಂದೆ ಮತ್ತು ಮಗ ಫೋನ್ ಮಾಡಿ ಶುಭಕೋರಿದರು, ಹಾಗೆಯೇ ರಾಘವೇಂದ್ರನ ಮಗನ ಮದುವೆ ತಾನು ಹೋಗಿದ್ದಾಗಿ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ದೇವರು ಈಶ್ವರಪ್ಪ ಮತ್ತು ನನಗೆ ಒಳ್ಳೆಯ ಸಂತಾನವನ್ನು ದಯಪಾಲಿಸಿದ್ದಾನೆ: ಬಸನಗೌಡ ಪಾಟೀಲ್ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos