ಯುವ ರಾಜ್ಕುಮಾರ್ ತಂಡದವರಿಂದ ಅಪಘಾತ, ಕಾಲಿಗೆ ತೀವ್ರಸ್ವರೂಪದ ಗಾಯವಾದರೂ ದೂರು ದಾಖಲಿಸದ ಮಹಿಳೆ
ಅಪಘಾತದ ನಂತರ ಬೌನ್ಸರ್ಗಳು ಕಾರು ನಿಲ್ಲಿಸದೆ ಹೋಗಿದ್ದು ನಿಜವಾದರೂ ಮರುದಿನ ಯುವ ರಾಜ್ಕುಮಾರ್ ಮತ್ತು ಇತರರು ಬಂದು ತನ್ನನ್ನು ಮಾತಾಡಿಸಿದ್ದಾರೆ ಮತ್ತು ಹಣವನ್ನೂ ನೀಡಿದ್ದಾರೆ ಎಂದು ನಮ್ಮ ವರದಿಗಾರನಿಗೆ ನಿಂಗಮ್ಮ ಹೇಳುತ್ತಾರೆ. ಚಿಕಿತ್ಸೆಗೆ ಎಷ್ಟೇ ಖರ್ಚಾದರೂ ತಾವು ಭರಿಸುತ್ತೇವೆ ಎಂದು ಟೀಮ್ನವರು ಹೇಳಿದ್ದಾರಂತೆ. ಕಾಲಿಗೆ ತೀವ್ರಸ್ವರೂಪದ ಪೆಟ್ಟಾದರೂ ನಿಂಗಮ್ಮ ಪೊಲೀಸ್ ದೂರು ದಾಖಲಿಸಿಲ್ಲ.
ತುಮಕೂರು, ಜೂನ್ 17: ರವಿವಾರದಂದು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರ ಮಗ ಯುವ ರಾಜ್ಕುಮಾರ್ ನಟಿಸಿರುವ ಎಕ್ಕ ಚಿತ್ರದ ತಂಡವು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ವಾಪಸ್ಸು ಹೋಗುವಾಗ ಬೌನ್ಸರ್ಗಳಿದ್ದ ಕಾರು ತನಗೆ ಗುದ್ದಿದ ಕಾರಣ ಕಾಲಿಗೆ ತೀವ್ರವಾದ ಪೆಟ್ಟಾಗಿದೆ ಎಂದು ಈ ಮಹಿಳೆ ಹೇಳುತ್ತಾರೆ. ಅಂದಹಾಗೆ, ಮಹಿಳೆಯ ಹೆಸರು ನಿಂಗಮ್ಮ ಮತ್ತು ಅವರು ಬಳ್ಳಾರಿ ಜಿಲ್ಲೆಯವರು. ಮಠದ ಶಾಲೆಯಲ್ಲಿ ಮಗನನ್ನು ದಾಖಲಿಸಲು ಬಂದಾಗ ಅಪಘಾತ ನಡೆದಿದೆ. ಮಠಕ್ಕೆ ಸಿನಿಮಾದವರು ಬಂದಿದ್ದಾರೆ ಅಂತ ಕಿವಿಗೆ ಬಿದ್ದ ಕೂಡಲೇ ನಿಂಗಮ್ಮನಲ್ಲಿ ಸಹಜವಾಗೇ ಕುತೂಹಲ ಹುಟ್ಟಿದೆ. ಆದರೆ ಚಿತ್ರತಂಡ ವಾಪಸ್ಸು ಹೋಗುವಾಗ ಒಂದು ಕಾರು ತನಗೆ ಗುದ್ದಿದೆ ಎಂದು ನಿಂಗಮ್ಮ ಹೇಳುತ್ತಾರೆ.
ಇದನ್ನೂ ಓದಿ: ಯುವ ರಾಜ್ಕುಮಾರ್ ವಿಚ್ಛೇದನದ ಬಗ್ಗೆ ಸಂಪೂರ್ಣ ವಿವರ ನೀಡಿದ ಶ್ರೀದೇವಿ ತಂದೆ ಭೈರಪ್ಪ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ